IND vs AUS: ಭಾರತ, ಆಸೀಸ್‌ಗೆ ಜಯವೊಂದೆ ಟಾರ್ಗೆಟ್: ಹೇಗಿದೆ ಪಿಚ್, ಮಳೆ ಬಂದರೆ ಯಾರಿಗೆ ಲಾಭ?
2024 ರ ಟಿ 20 ವಿಶ್ವಕಪ್‌ನ ಸೂಪರ್ 8 ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಕಾದಾಟ ನಡೆಸಲಿವೆ. ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಲು ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಈ ಪಂದ್ಯ ಆಸೀಸ್‌ಗೆ ಮಹತ್ವದ್ದಾಗಿದೆ. ಈ ಪಂದ್ಯ ಗೆದ್ದು ಮುಂದಿನ ಹಂತಕ್ಕೆ ಪ್ರವೇಶಿಸುವ ಆಸೆಯನ್ನು, ಕಾಂಗರೂ ಪಡೆ ಜೀವಂತವಾಗಿಟ್ಟುಕೊಳ್ಳಲು ಬಯಸುತ್ತದೆ. ಈ ಪಂದ್ಯಕ್ಕೆ ಮಳೆ ಕಾಟ ನೀಡುವ ಸಾಧ್ಯತೆ ಹೆಚ್ಚಿದೆ.
ಟೀಮ್ ಇಂಡಿಯಾ ಈಗಾಗಲೇ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು ನಾಲ್ಕು ಅಂಕಗಳನ್ನು ಕಲೆ ಹಾಕಿದೆ. ಆಸ್ಟ್ರೇಲಿಯಾ ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಸೋತು ಮುಖಭಂಗ ಅನುಭವಿಸಿದೆ. ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಆಸೀಸ್ ಮುಂದಿನ ಹಂತದ ಆಸೆ ಜೀವಂತ. ಇಲ್ಲದಿದ್ದರೆ, ಸೂಪರ್ 8 ಹಂತದಲ್ಲಿ ಆಸೀಸ್ ಮನೆಯ ಹಾದಿ ಹಿಡಿಯಲಿದೆ.

ಬಲಿಷ್ಠ ಟೀಮ್ ಇಂಡಿಯಾ
ಟೀಮ್ ಇಂಡಿಯಾ ಬಲಿಷ್ಠವಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ರಿಷಭ್ ಪಂತ್ ಭರ್ಜರಿ ಫಾರ್ಮ್‌ನಲ್ಲಿದ್ದು, ಎದುರಾಳಿಗಳನ್ನು ಕಾಡಬಲ್ಲರು. ಇನ್ನು ಟಾಪ್ ಆರ್ಡರ್‌ನಲ್ಲಿ ವಿರಾಟ್, ರೋಹಿತ್ ಕೊಂಚ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದಾರೆ. ಆದರೆ ಒತ್ತಡವನ್ನು ಮೆಟ್ಟಿನಿಂತು ಆಡುವ ಕ್ಷಮತೆ ಇವರಿಗಿದೆ.
ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಹಾರ್ದಿಕ್ ಪಾಂಡ್ಯ, ಟಿ20 ಸ್ಪೆಷಲಿಸ್ಟ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಸೊಗಸಾದ ಆಟವನ್ನು ಆಡುತ್ತಿದ್ದು, ಎದುರಾಳಿಗಳ ಚಿಂತೆ ಹೆಚ್ಚಿಸಿದೆ. ಇನ್ನು ಟೀಮ್ ಇಂಡಿಯಾದ ಬೌಲರ್‌ಗಳು ಸಮಯಕ್ಕೆ ಅನುಸಾರವಾಗಿ ಬಿಗುವಿನ ದಾಳಿ ಸಂಘಟಿಸಿ ತಂಡಕ್ಕೆ ನೆರವಾಗುತ್ತಿದ್ದಾರೆ.

ಗೆಲುವೊಂದೆ ಟಾರ್ಗೆಟ್
ಆಸ್ಟ್ರೇಲಿಯಾ ಬಲಿಷ್ಠವಾಗಿದೆ. ಆದರೆ ಅಫ್ಘಾನಿಸ್ತಾನ ವಿರುದ್ಧದ ಸೋಲು ತಂಡಕ್ಕೆ ಗಾಯ ಮಾಡಿದೆ. ಈ ಸೋಲಿನಿಂದ ಹೊರ ಬರಲು ಟೀಮ್ ಇಂಡಿಯಾ ವಿರುದ್ಧ ಗೆಲ್ಲುವ ಅನಿವಾರ್ಯತೆ ಇದೆ. ಇನ್ನು ಸಂಘಟಿತ ಆಟದ ಅವಶ್ಯಕತೆ ಇದೆ. ಟಾಪ್ ಆರ್ಡರ್ ಹಾಗೂ ಮಿಡ್ಲ್ ಆರ್ಡರ್ ಆಟಗಾರರು ಮೈ ಚಳಿ ಬಿಟ್ಟು ಆಡಬೇಕಿದೆ. ಬೌಲರ್‌ಗಳು ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಅಲ್ಲದೆ ಫೀಲ್ಡರ್‌ಗಳು ಉತ್ತಮ ಪ್ರದರ್ಶನ ನೀಡುವ ಅವಶ್ಯಕತೆ ಇದೆ. ಅಂದಾಗ ಮಾತ್ರ ಗೆಲುವು ಸಾಧ್ಯ.
ಹವಾಮನ ವರದಿ ಏನು ಹೇಳುತ್ತದೆ?
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಇಂದು ಸೇಂಟ್ ಲೂಸಿಯಾದಲ್ಲಿ ನಡೆಯಲಿದೆ. ಹವಾಮಾನ ವರದಿಗಳ ಪ್ರಕಾರ, ಈ ದಿನ ಸೇಂಟ್ ಲೂಸಿಯಾದಲ್ಲಿ ಬೆಳಿಗ್ಗೆ 55 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಇದಲ್ಲದೆ, ಇಲ್ಲಿ ತಾಪಮಾನವು ಸುಮಾರು 32 ಡಿಗ್ರಿ ಇರುತ್ತದೆ. ಈ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಇದೆ.
ಸೆಮೀಸ್ ಪ್ರವೇಶಿಸುವುದು ಹೇಗೆ?
ಭಾರತದ ಮುಂದಿನ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯವನ್ನು ಸೋಲಿಸಿದರೆ ಸುಲಭವಾಗಿ ಸೆಮಿಫೈನಲ್ ತಲುಪಲಿದೆ. ಇದಲ್ಲದೇ ಈ ಪಂದ್ಯ ಮಳೆಯಿಂದ ರದ್ದಾದರೂ ಭಾರತ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಈ ಪಂದ್ಯದಲ್ಲಿ ಸೋತರೆ 4 ಅಂಕಗಳನ್ನು ಕಲೆ ಹಾಕುತ್ತದೆ. ಅಲ್ಲದೆ ಆಸೀಸ್ ಸಹ ಇಷ್ಟೇ ಅಂಕ ಸೇರಿಸುತ್ತದೆ.
ಸೂಪರ್ 8ರಲ್ಲಿ ಅಗ್ರ 2 ತಂಡಗಳಿಗೆ ಮುನ್ನಡೆಯುವ ಅವಕಾಶ ಸಿಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 42 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳಿಂದ ಸೋತರೆ ಮತ್ತು ಅಫ್ಘಾನಿಸ್ತಾನ ಬಾಂಗ್ಲಾದೇಶವನ್ನು 83 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳಿಂದ ಸೋಲಿಸಿದರೆ, ಟೀಮ್ ಇಂಡಿಯಾ ಈ ಟೂರ್ನಿಯಿಂದ ಹೊರಗುಳಿಯಬಹುದು.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ: ಮಿಚೆಲ್ ಮಾರ್ಷ್ (ನಾಯಕ), ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಮ್ ಝಂಪಾ.












Click it and Unblock the Notifications