ದಾದಾ ಜೊತೆ ವಿವಿಎಸ್ ಲಕ್ಷ್ಮಣ್ 3 ತಿಂಗಳು ಮಾತು ಬಿಡಲು ಕಾರಣವೇನು?
ಟೀಮ್ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಸೌರವ್ ಗಂಗೂಲಿ ಪಿಟಿಐಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ದಾದಾ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಸ್ಟಾರ್ ಆಟಗಾರ ವಿವಿಎಸ್ ಲಕ್ಷ್ಮಣ್ ಹಾಗೂ ಅವರ ನಡುವೆ ಮೂರು ತಿಂಗಳ ಕಾಲ ಮಾತುಕತೆ ನಿಂತಿತ್ತು ಎಂದು ತಿಳಿಸಿದ್ದಾರೆ. ಅಲ್ಲದೆ ಹಾಲಿ ಕೋಚ್ ಗೌತಮ್ ಗಂಭೀರ್ ಅವರ ಬಗ್ಗೆಯೂ ದಾದಾ ಮಾತನಾಡಿದ್ದಾರೆ.
ವಿಶೇಷ ಸಂದರ್ಶನದಲ್ಲಿ ಮಾಜಿ ನಾಯಕ ಗಂಗೂಲಿ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ನಾಯಕನಾಗಿ ಹರ್ಭಜನ್ ಸಿಂಗ್ ಅನಿಲ್ ಕುಂಬ್ಳೆ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಈ ಇಬ್ಬರೂ ಆಟಗಾರರು ಟೆಸ್ಟ್ ಪಂದ್ಯದ ವೇಳೆ ಬೆಂಚ್ ಮೇಲೆ ಕುಳಿತು ಮಜಾ ಆಡುವ ಆಟಗಾರರಲ್ಲ. ಬದಲಿಗೆ ನನ್ನನ್ನು ಏಕೆ ಆಡಿಸುತ್ತಿಲ್ಲ ಎಂದು ಕೇಳುವ ಆಟಗಾರರು. ಇವರಿಬ್ಬರೂ ತಂಡದಲ್ಲಿರುವುದು ತಂಡಕ್ಕೆ ಬುಸ್ಟ್ ನೀಡಿದಂತೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ದಿಗ್ಗಜ ಆಟಗಾರರ ಪಟ್ಟಿಯಲ್ಲಿ ವಿವಿಎಸ್ ಲಕ್ಷ್ಮಣ ಅವರನ್ನು ಸೇರಿಸಲಾಗುತ್ತದೆ. ಇವರು ಕ್ರಿಕೆಟ್ ವೃತ್ತಿ ಬದುಕು ಸಹ ಅಮೋಘವಾಗಿತ್ತು. ಆದರೆ ಇವರು ಏಕದಿನ ವಿಶ್ವಕಪ್ ಆಡಿಲ್ಲ. 2003ರ ವಿಶ್ವಕಪ್‌ಗೂ ಮುನ್ನ ಇವರನ್ನು ತಂಡದಿಂದ ಕೈ ಬಿಡಲಾಗಿತ್ತು. ಅಲ್ಲದೆ ದಿನೇಶ್ ಮೊಂಗಿಯಾ ಅವರನ್ನು ಸೇರಿಸಿಕೊಳ್ಳಲಾಗಿದೆ. ಈ ನಿರ್ಧಾರದ ಹಿಂದೆ ಗಂಗೂಲಿ ಅವರ ಕೈವಾಡವಿದೆ. ಈ ವಿಚಾರದ ಬಗ್ಗೆ ಈಗ ಮಾತನಾಡಿರುವ ದಾದಾ, ವಿವಿಎಸ್ ಲಕ್ಷ್ಮಣ್ ಅವರೊಂದಿಗೆ 3 ತಿಂಗಳು ಮಾತನಾಡಿರಲಿಲ್ಲ ಎಂದು ಹೇಳಿದ್ದಾರೆ.
ಲಕ್ಷ್ಮಣ್ ಮಾತು ಬಿಟ್ಟಿದ್ದು ಏಕೆ?
"ನನ್ನ ಈ ನಿರ್ಧಾರದಿಂದ ಲಕ್ಷ್ಮಣ್ ಅವರಿಗೆ ಬೇಸರವಾಗಿದೆ. ಇದರಿಂದಾಗಿಯೇ ಇವರು ನನ್ನ ಜೊತೆ 3 ತಿಂಗಳು ಮಾತನಾಡಲೇ ಇಲ್ಲ. ನಾನು ಅವರೊಂದಿಗೆ ರಾಜಿ ಮಾಡಿಕೊಳ್ಳುವವರೆಗೆ ಅವರು ಮಾತನಾಡಿರಲಿಲ್ಲ. ವಿಶ್ವಕಪ್‌ನಂತಹ ಟೂರ್ನಿಗಳಲ್ಲಿ ಆಟಗಾರರನ್ನು ತಂಡದಿಂದ ಹೊರಗಿಟ್ಟಾಗ ನಿಶ್ಚಿತವಾಗಿ ಬೇಸರವಾಗುತ್ತದೆ. ಅವರು ಬೇಸರವಾಗಿದ್ದು ಸಹಜ. ವರ್ಲ್ಡ್ ಕಪ್ ಬಳಿಕ ಅವರು ಮತ್ತೆ ಏಕದಿನ ತಂಡಕ್ಕೆ ಮರಳಿದರು. ಲಕ್ಷ್ಮಣ್ ಆಸ್ಟ್ರೇಲಿಯಾ, ಪಾಕಿಸ್ತಾನದಲ್ಲಿ ಸ್ಥಿರ ಪ್ರದರ್ಶನ ನೀಡಿದರು ಎಂದಿದ್ದಾರೆ.
VIDEO | Veteran cricketer Sourav Ganguly (@SGanguly99), in a reply to a question on India’s head coach Gautam Gambhir (@GautamGambhir), said:
— Press Trust of India (@PTI_News) June 22, 2025
"I think Gautam (Gambhir) is doing a good job. He started off a little slow, losing to Australia and New Zealand, but he picked up with… pic.twitter.com/bphliVIWXk
ಗಂಭೀರ್ ಬಗ್ಗೆ ಹೇಳಿದ್ದೇನು?
ಟೀಮ್ ಇಂಡಿಯಾದ ಕೋಚ್ ಗೌತಮ್ ಗಂಭೀರ್ ಅವರ ಬಗ್ಗೆಯೂ ಸೌರವ್ ಗಂಗೂಲಿ ಅನಿಸಿಕೆ ಹಂಚಿಕೊಂಡಿದ್ದಾರೆ. "ಅವರು ತಮ್ಮ ಕರ್ತವ್ಯಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ಗಂಭೀರ್ ಆರಂಭ ನಿಧಾನವಾಗಿತ್ತು. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧ ತಂಡ ಸೋಲು ಕಂಡಿತು. ಆದರೆ ಚಾಂಪಿಯನ್ಸ್ ಟ್ರೋಫಿ ಗೆದ್ದು ಬೀಗಿತ್ತು. ಇಂಗ್ಲೆಂಡ್ ಪ್ರವಾಸ ನಿಶ್ಚಿತವಾಗಿ ಕೋಚ್‌ಗೆ ದೊಡ್ಡ ಸವಾಲಾಗಿರಲಿದೆ. ಗಂಭೀರ್ ಜೊತೆ ನಾನು ಆಡಿದ್ದೇನೆ. ಅವರೊಬ್ಬ ಉತ್ತಮ ವ್ಯಕ್ತಿ ಹಿರಿಯರಿಗೆ ಗೌರವಿಸುವವರು" ಎಂದು ದಾದಾ ತಿಳಿಸಿದ್ದಾರೆ.
ಗಂಗೂಲಿ ಸಾಧನೆ
ಭಾರತದ ಪರ ಸೌರವ್ ಗಂಗೂಲಿ 113 ಟೆಸ್ಟ್ ಪಂದ್ಯ, 311 ಏಕದಿನ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಈ ವೇಳೆ ದಾದಾ ಒಟ್ಟಾರೆಯಾಗಿ 38 ಶತಕ, 107 ಅರ್ಧಶತಕ ಸಿಡಿಸಿದ್ದಾರೆ.












Click it and Unblock the Notifications