ಆರ್‌ಸಿಬಿ.. ಆರ್‌ಸಿಬಿ.. ಸ್ಮೃತಿ ಮಂದಾನ ಹವಾ ಹೆಂಗಿದೆ ನೋಡಿ!

'ಐಪಿಎಲ್' ಟೂರ್ನಿ ಭಾರತೀಯರ ಭಾವನೆ ಜೊತೆ ಬೆರೆತು ಹೋಗಿದೆ. ಹೀಗಾಗಿಯೇ ಐಪಿಎಲ್ ಶುರುವಾಯ್ತು ಅಂದರೆ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಎಲ್ಲ ಪಂದ್ಯಕ್ಕೂ ಕಾಯುತ್ತಾರೆ. ಈಗಲೂ ಅಷ್ಟೇ ಐಪಿಎಲ್ ಟೂರ್ನಿಯ ವೇಳಾಪಟ್ಟಿ ಅನೌನ್ಸ್ ಮಾಡಲಾಗಿದೆ. ಈ ಬೆಳವಣಿಗೆ ಮಧ್ಯೆ 'WPL' ಅಂದ್ರೆ ವುಮೆನ್ಸ್ ಪ್ರಿಮಿಯರ್ ಲೀಗ್ ಶುರುವಾಗಿದೆ. ಆರಂಭದ ಮ್ಯಾಚ್‌ನಲ್ಲೇ ಆರ್‌ಸಿಬಿ ತಂಡ ಭರ್ಜರಿ ಗೆಲುವು ದಾಖಲಿಸಿದೆ, ಇದೇ ಪಂದ್ಯದಲ್ಲಿ ಸ್ಮೃತಿ ಮಂದಾನ ಮಿರ ಮಿರ ಮಿಂಚಿದ್ದಾರೆ.

ಹೌದು ಬೆಂಗಳೂರು ತಂಡ ಐಪಿಎಲ್ ಟೂರ್ನಿ ಗೆದ್ದೆ ಗೆಲ್ಲುತ್ತೆ ಅಂತ ಅಭಿಮಾನಿಗಳು ಕಾಯುತ್ತಾ ಕೂತಿದ್ದಾರೆ. ಹೀಗಾಗಿ 'ಈ ಸಲ ಕಪ್ ನಮ್ದೆ' ಘೋಷ ವಾಖ್ಯ ಕೂಡ ವೈರಲ್ ಆಗಿದೆ & ಆರ್‌ಸಿಬಿ ಬೆಂಗಳೂರು ತಂಡದ ಅಭಿಮಾನಿಗಳು ತಮ್ಮ ತಂಡದ ಗೆಲುವಿಗೆ ಕಾಯ್ತಾ ಕೂತಿದ್ದಾರೆ. ಫ್ಯಾನ್ಸ್ ಆಸೆ ಈ ವರ್ಷ ನೆರವೇರುತ್ತಾ? ಅನ್ನೋ ಕುತೂಹಲ ಕೂಡ ಡಬಲ್ ಆಗುತ್ತಿದೆ. ಹೀಗಿದ್ದಾಗಲೇ ಮಹಿಳೆಯರ ತಂಡ, ಅಂದರೆ ಆರ್‌ಸಿಬಿ ವುಮೆನ್ಸ್ ಟೀಂ ಇದೀಗ ಭರ್ಜರಿ ಆರಂಭ ಮಾಡಿದೆ. ಅದರಲ್ಲೂ ಮೊಲದನೇ ಪಂದ್ಯದಲ್ಲಿ ಸ್ಮೃತಿ ಮಂದಾನ ಕಂಡು ಅಭಿಮಾನಿಗಳು ಜೋರಾಗಿ, ಚಿಯರ್ಸ್ ಹೇಳಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. ವಿಡಿಯೋಗಾಗಿ ಮುಂದೆ ಓದಿ.

Smriti Mandhana Getting Good Support From The RCB Fans In WPL

ಎಲ್ಲೆಲ್ಲೂ ಆರ್‌ಸಿಬಿ.. ಆರ್‌ಸಿಬಿ..

ಅಂದಹಾಗೆ ನಮ್ಮ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ 'WPL' ಉದ್ಘಾಟನೆ ನೆರವೇರಿದೆ. ಆಗ ಬಾಲಿವುಡ್ ಸೇರಿದಂತೆ ವಿವಿಧ ಸಿನಿಮಾ ರಂಗದ ಮಂದಿ ಅಭಿಮಾನಿಗಳ ಮನಸ್ಸು ರಂಜಿಸಿದ್ದಾರೆ. ಆದರೆ ಸಿನಿಮಾ ಮಂದಿಗೂ ಸಿಗದಷ್ಟು ಬೆಂಬಲ ನಮ್ಮ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂದಾನ ಅವರಿಗೆ ಸಿಕ್ಕಿದೆ. ಅಷ್ಟಕ್ಕೂ ಆಗಿದ್ದು ಏನಪ್ಪಾ ಅಂದ್ರೆ? ಮುಂದೆ ಓದಿ.

ವುಮೆನ್ಸ್ ಪ್ರೀಮಿಯರ್ ಲೀಗ್‌ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು & ಯುಪಿ ವಾರಿಯರ್ಸ್ ಮುಖಾಮುಖಿ ಆಗಿದ್ದವು. ಟಾಸ್ ಹಾಕುವ ವೇಳೆ, ಮೊದಲಿಗೆ ಯುಪಿ ವಾರಿಯರ್ಸ್ ತಂಡದ ನಾಯಕಿ ಮುಂದೆ ಬಂದರು. ಆದ್ರೆ ಅವರಿಗೆ ಅಲ್ಲಿ, ಕ್ರೀಡಾಂಗಣದಲ್ಲಿ ಅಷ್ಟು ಬೆಂಬಲ ಸಿಗಲಿಲ್ಲ, ನಂತರ ಬಂದ ಸ್ಮೃತಿ ಅವರಿಗೆ ಇಡೀ ಕ್ರೀಡಾಂಗಣ ಚಿಯರ್ಸ್ ಹೇಳಿದೆ. ಈ ವೇಳೆ ಮೈದಾನದಲ್ಲಿ ಇದ್ದ ಆರ್‌ಸಿಬಿ ಅಭಿಮಾನಿಗಳು ಬೆಂಬಲಿಸಿದ್ದಾರೆ. ಇನ್ನು ಆ ವಿಡಿಯೋ ನೋಡಲು ಮುಂದೆ ಓದಿ.

ಗೆದ್ದು ಬೀಗಿದ ಆರ್‌ಸಿಬಿ ತಂಡ!

ಮೊದಲು ಬ್ಯಾಟ್ ಮಾಡಿದ್ದ ಬೆಂಗಳೂರು ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತ್ತು. ಇನ್ನು ಈ ಗುರಿ ಬೆನ್ನು ಹತ್ತಿದ್ದ ಯುಪಿ ವಾರಿಯರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 155 ರನ್ ಮಾತ್ರ ಗಳಿಸಿತು. ಈ ಮೂಲಕ ನಮ್ಮ ಆರ್‌ಸಿಬಿಯ, ಮಹಿಳೆಯರ ತಂಡವು 2 ರನ್‌ಗಳ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಜನರು, ನಮ್ಮ ಆರ್‌ಸಿಬಿ ನಮ್ಮ ಹೆಮ್ಮೆ ಅಂತಿದ್ದಾರೆ. ಹಾಗೇ ಸ್ಮೃತಿ ಮಂದಾನಗೆ ಸಿಕ್ಕ ಬೆಂಬಲಕ್ಕೆ ಕೂಡ ಸಿಕ್ಕಾಪಟ್ಟೆ ಸಂತಸ ವ್ಯಕ್ತವಾಗಿದೆ.

Smriti Mandhana Getting Good Support From The RCB Fans In WPL

2024ರಲ್ಲಿ ಕಪ್ ಸಿಗೋದು ಗ್ಯಾರಂಟಿ?

ಒಟ್ನಲ್ಲಿ ಡಬ್ಯ್ಲೂಪಿಎಲ್ 2024 ದೊಡ್ಡ ಮಟ್ಟಿಗೆ ಹೈಪ್ ಕ್ರಿಯೇಟ್ ಮಾಡಿದೆ. ಈ ಬಾರಿ ಯಾರು ಗೆಲ್ತಾರೆ? ಯಾರಿಗೆ ಸೋಲು ಎದುರಾಗುತ್ತೆ? ಆರ್‌ಸಿಬಿ ಈ ಬಾರಿ ಕಪ್ ಗೆಲ್ಲುತ್ತಾ? ಪುರುಷರ ಟೀಂ ಮಾಡಿರದ ಸಾಧನೆಯನ್ನ, ಆರ್‌ಸಿಬಿ ಮಹಿಳೆಯರ ಟೀಂ ಮಾಡುತ್ತಾ? ಅಂತಾ ಅಭಿಮಾನಿ ಬಳಗ ಕಾಯುತ್ತಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂದಾನಗೆ ಭರ್ಜರಿ ಸಪೋರ್ಟ್ ಸಿಗುತ್ತಿದ್ದು, ಮತ್ತಷ್ಟು ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಯಾವುದೇ ಸೆಲೆಬ್ರಿಟಿಗೆ ಸಿಗದಷ್ಟು ಬೆಂಬಲ ಸ್ಮೃತಿ ಅವರಿಗೆ ಸಿಗುತ್ತಿರುವುದು ವಿಶೇಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+