Shubman Gill: ಒಂದೇ ಏಕದಿನ ಪಂದ್ಯದಲ್ಲಿ ವಿಶ್ವದಾಖಲೆ ಬರೆದ ನಾಯಕ ಶುಭ್‌ಮನ್ ಗಿಲ್; ಕೊಹ್ಲಿ, ಧೋನಿ ದಾಖಲೆ ಉಡೀಸ್

Shubman Gill: ಗುವಾಹಟಿಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಜಯ ಸಾಧಿಸಿತು. ಇದೇ ವೇಳೆ ನಾಯಕ ಶುಭ್‌ಮನ್ ಗಿಲ್ ತಮ್ಮ ಏಕದಿನ ಕ್ರಿಕೆಟ್ ವೃತ್ತಿಜೀವನದ ಎರಡನೇ ದ್ವಿಶತಕ ಬಾರಿಸುವ ಮೂಲಕ ಹಲವು ಐತಿಹಾಸಿಕ ದಾಖಲೆಗಳನ್ನು ಉಡೀಸ್ ಮಾಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಸ್ಫೋಟಕ ಇನ್ನಿಂಗ್ಸ್ ಮೂಲಕ ಶುಭ್‌ಮನ್ ಗಿಲ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಎರಡು ದ್ವಿಶತಕಗಳನ್ನು ಬಾರಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ 3 ದ್ವಿಶತಕಗಳನ್ನು ಬಾರಿಸಿರುವ ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ. ಗಿಲ್ ಈ ಹಿಂದೆ ನ್ಯೂಜಿಲೆಂಡ್ ವಿರುದ್ಧ ತಮ್ಮ ಚೊಚ್ಚಲ ದ್ವಿಶತಕ ಸಿಡಿಸಿದ್ದರು, ಇದೀಗ ವೆಸ್ಟ್ ಇಂಡೀಸ್ ವಿರುದ್ಧವೂ ಈ ಮೈಲಿಗಲ್ಲು ತಲುಪಿದ್ದಾರೆ.

Shubman Gill Hits 2nd ODI Double Century Breaks M S Dhoni and Virat Kohli Records Know details

ದ್ವಿಶತಕದ ವಿಶ್ವ ದಾಖಲೆ ಮಾಡಿದ ಶುಭ್‌ಮನ್ ಗಿಲ್

ವೆಸ್ಟ್ ಇಂಡೀಸ್ ನೀಡಿದ್ದ 406 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಗಿಲ್ ಸ್ಫೋಟಕ ಆಟವಾಡಿ ಸುಲಭ ಗೆಲುವು ತಂಡುಕೊಂಟ್ಟರು. ಅವರು ಕೇವಲ 117 ಎಸೆತಗಳಲ್ಲಿ ದ್ವಿಶತಕ ಪೂರೈಸುವ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ದ್ವಿಶತಕ ಬಾರಿಸಿದ ಜಾಗತಿಕ ದಾಖಲೆ ಬರೆದರು. ಈ ಮೊದಲು ಬಾಂಗ್ಲಾದೇಶದ ವಿರುದ್ಧ 126 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದ ಇಶಾನ್ ಕಿಶನ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಉಡೀಸ್‌ ಮಾಡಿದರು.

ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ ದ್ವಿಶತಕ ಸಿಡಿಸಿದವರು

* ಶುಭ್‌ಮನ್ ಗಿಲ್: 117 ಎಸೆತಗಳು (vs ವೆಸ್ಟ್ ಇಂಡೀಸ್, ಗುವಾಹಟಿ, 2026)
* ಇಶಾನ್ ಕಿಶನ್: 126 ಎಸೆತಗಳು (vs ಬಾಂಗ್ಲಾದೇಶ, ಚಟ್ಟೋಗ್ರಾಮ್, 2022)
* ಗ್ಲೆನ್ ಮ್ಯಾಕ್ಸ್‌ವೆಲ್: 128 ಎಸೆತಗಳು (vs ಅಫ್ಘಾನಿಸ್ತಾನ, ಮುಂಬೈ, 2023)
* ಪಾತುಮ್ ನಿಸ್ಸಾಂಕ: 136 ಎಸೆತಗಳು (vs ಅಫ್ಘಾನಿಸ್ತಾನ, ಪಲ್ಲೆಕೆಲೆ, 2024)
* ಕ್ರಿಸ್ ಗೇಲ್: 138 ಎಸೆತಗಳು (vs ಜಿಂಬಾಬ್ವೆ, ಕ್ಯಾನ್‌ಬೆರಾ, 2015)

ಧೋನಿ ಮತ್ತು ಕೊಹ್ಲಿ ದಾಖಲೆ ಉಡೀಸ್

ಏಕದಿನ ಕ್ರಿಕೆಟ್‌ನಲ್ಲಿ ಯಶಸ್ವಿ ರನ್ ಚೇಸ್ ಮಾಡುವಾಗ ಭಾರತೀಯ ಬ್ಯಾಟರ್ ಗಳಿಸಿದ ಅತ್ಯಧಿಕ ವೈಯಕ್ತಿಕ ಮೊತ್ತದ ದಾಖಲೆಯನ್ನೂ ಗಿಲ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಹಾದಿಯಲ್ಲಿ ಅವರು ಎಂ.ಎಸ್.ಧೋನಿ ಮತ್ತು ವಿರಾಟ್ ಕೊಹ್ಲಿ ಅವರ ದೀರ್ಘಕಾಲದ ದಾಖಲೆಗಳನ್ನು ಹಿಂದಿಕ್ಕಿದ್ದಾರೆ. ಧೋನಿ (ಶ್ರೀಲಂಕಾ ವಿರುದ್ಧ 2005) ಹಾಗೂ ಕೊಹ್ಲಿ (ಪಾಕಿಸ್ತಾನ ವಿರುದ್ಧ 2012) ರನ್‌ಚೇಸ್ ವೇಳೆ ತಲಾ 183 ರನ್ ಗಳಿಸಿದ್ದರು. ಇದೀಗ ಗಿಲ್ 200ಕ್ಕೂ ಹೆಚ್ಚು ರನ್ ಗಳಿಸಿ ಈ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.

ರನ್‌ಚೇಸ್‌ನಲ್ಲಿ ಗರಿಷ್ಠ ರನ್ ಗಳಿಸಿದ ಇಂಡಿಯನ್ಸ್‌

* ಶುಭ್‌‌ಮನ್ ಗಿಲ್: 223* ರನ್ (vs ವೆಸ್ಟ್ ಇಂಡೀಸ್, 2026)
* ಎಂ.ಎಸ್. ಧೋನಿ: 183 ರನ್ (vs ಶ್ರೀಲಂಕಾ, ಜೈಪುರ, 2005)
* ವಿರಾಟ್ ಕೊಹ್ಲಿ: 183 ರನ್ (vs ಪಾಕಿಸ್ತಾನ, ಢಾಕಾ, 2012)
* ಸಚಿನ್ ತೆಂಡೂಲ್ಕರ್: 175 ರನ್ (vs ಆಸ್ಟ್ರೇಲಿಯಾ, ಹೈದರಾಬಾದ್, 2009)

ಒಟ್ಟಿನಲ್ಲಿ ಹೇಳುವುದಾದರೆ, ಶುಭ್‌ಮನ್‌ ಗಿಲ್‌ ಅವರು ವೆಸ್ಟ್‌ ಇಂಡೀಸ್‌ ವಿರುದ್ಧ ಸತತ ಎರಡು ಶತಕಗಳನ್ನು ಸಿಡಿಸಿ ಮಿಂಚುವುದಲ್ಲದೆ, ಐತಿಹಾಸಿಕ ದಾಖಲೆಗಳನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಾಧನೆಗಳನ್ನು ಮಾಡಲಿದ್ದಾರೆ ಎನ್ನುವ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+