ದಿನೇಶ್ ಕಾರ್ತಿಕ್ ಬಗ್ಗೆ ಶ್ರೇಯಾಂಕಾ ಪಾಟೀಲ್ ಹೇಳಿದ್ದೇನು?
ಆರ್‌ಸಿಬಿ ತಂಡ 2024ರ ಐಪಿಎಲ್ ಟೂರ್ನಿಗೆ ಒಂದು ಕಳೆ ತುಂಬಿತ್ತು. ಸತತ 6 ಸೋಲುಗಳ ಸುಳಿಯಲ್ಲಿ ಸಿಲುಕಿದ್ದರೂ ನಂತರ ಅದರಿಂದ ಹೊರಗೆ ಬಂದು, ಸತತ 6 ಪಂದ್ಯಗಳ ಗೆದ್ದು ಪ್ಲೇಆಫ್ ತಲುಪಿತ್ತು. ಇಂತಿಪ್ಪ ಆರ್‌ಸಿಬಿ ತಂಡಕ್ಕೆ ಬೆಂಬಲ ನೀಡಿದ್ದೇ ಕೆಲವು ಆಟಗಾರರು. ಅವರ ಪೈಕಿ ದಿನೇಶ್ ಕಾರ್ತಿಕ್ ಕೂಡ ಒಬ್ಬರಾಗಿದ್ದು, ಇದೀಗ ಶ್ರೇಯಾಂಕಾ ಪಾಟೀಲ್ ಕೂಡ ದಿನೇಶ್ ಕಾರ್ತಿಕ್ ಅವರ ಬಗ್ಗೆ ಮಾತನಾಡಿದ್ದಾರೆ. ಆ ವಿಡಿಯೋ ನೋಡಲು ಮುಂದೆ ಓದಿ.
ದಿನೇಶ್ ಕಾರ್ತಿಕ್ ಆರ್‌ಸಿಬಿ ತಂಡಕ್ಕೆ ಬಂದ ನಂತರ ಅವರ ಲಕ್ ಟರ್ನ್ ಆಗಿದೆ ಅನ್ನೋದು ಅಭಿಮಾನಿಗಳ ಮಾತು. ಹಾಗೇ ಆರ್‌ಸಿಬಿ ಬೆಂಗಳೂರು ತಂಡಕ್ಕೆ ದಿನೇಶ್ ಕಾರ್ತಿಕ್ ಕೂಡ, ಸಾಕಷ್ಟು ಬೆವರು ಹರಿಸಿ ದುಡಿದಿದ್ದಾರೆ. ಹೀಗಿದ್ದಾಗ, ಡಿಕೆ ಐಪಿಎಲ್ ಟೂರ್ನಿಗೆ ಗುಡ್ ಬೈ ಹೇಳಿ ನಿವೃತ್ತಿ ಪಡೆಯುತ್ತಿದ್ದಾರೆ ಎಂಬ ಮಾತು ಹರಿದಾಡುತ್ತಿದೆ. ಆದರೆ ಇದನ್ನು ಆರ್‌ಸಿಬಿ ಅಭಿಮಾನಿ ಬಳಗ ಒಪ್ಪುತ್ತಿಲ್ಲ. ಯಾಕಂದ್ರೆ, ದಿನೇಶ್ ಕಾರ್ತಿಕ್ ಅವರು ಇನ್ನೂ ಹಲವಾರು ವರ್ಷಗಳ ಕಾಲ ಆರ್‌ಸಿಬಿ ತಂಡಕ್ಕೆ ಆಡುವ ಶಕ್ತಿ ಹೊಂದಿದ್ದಾರೆ. ಹೀಗಾಗಿ ಡಿಕೆ ಆರ್‌ಸಿಬಿಗೆ ಸೇವೆ ಸಲ್ಲಿಸಲಿ ಅಂತಿದ್ದಾರೆ ಫ್ಯಾನ್ಸ್. ಈ ಸಮಯದಲ್ಲೇ 'ಯಾರ್ ನಮ್ ಬಾಸು? ಡಿಕೆ..' ಅಂತಿದ್ದಾರೆ ಶ್ರೇಯಾಂಕಾ ಪಾಟೀಲ್.

'ಯಾರ್ ನಮ್ ಬಾಸು?'
ಶ್ರೇಯಾಂಕಾ ಪಾಟೀಲ್ ಇದೀಗ ನ್ಯಾಷನಲ್ ಕ್ರಷ್ ಆಗಿದ್ದಾರೆ. ಯಾಕಂದ್ರೆ ಆರ್‌ಸಿಬಿಗೆ, ಕಪ್ ಗೆಲ್ಲಿಸಿಕೊಟ್ಟ ಮಹಿಳೆಯರ ತಂಡದಲ್ಲಿ ಶ್ರೇಯಾಂಕಾ ಪಾಟೀಲ್ ಕೂಡ ಇದ್ದರು. ಹೀಗೆ ದೆಹಲಿ ತಂಡದ ವಿರುದ್ಧ ನಡೆದಿದ್ದ 2024ರ ಮಹಿಳಾ ಪ್ರಿಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ, ಇದೇ ಶ್ರೇಯಾಂಕಾ ಪಾಟೀಲ್ ಅತ್ಯುತ್ತಮ ಆಟ ಆಡಿದ್ದರು. ಈಗ ಇದೇ ಶ್ರೇಯಾಂಕಾ ಪಾಟೀಲ್, ದಿನೇಶ್ ಕಾರ್ತಿಕ್ ಅವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಆ ವಿಡಿಯೋ ಇಲ್ಲಿದೆ, ಮುಂದೆ ನೋಡಿ.
ದಿನೇಶ್ ಕಾರ್ತಿಕ್ ನಿವೃತ್ತಿ?
ಈಗ ನಡೆಯುತ್ತಿರುವ ಚರ್ಚೆಗಳ ಪ್ರಕಾರ ದಿನೇಶ್ ಕಾರ್ತಿಕ್ ಅವರು ಐಪಿಎಲ್ ಟೂರ್ನಿಯ ಬಿಟ್ಟು ಹೊರಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಇಲ್ಲ ಇಲ್ಲ 2025 ರಲ್ಲಿ ಕೂಡ ಇದೇ ದಿನೇಶ್ ಕಾರ್ತಿಕ್ ಅವರು ಆಟ ಆಡ್ತಾರೆ, ಐಪಿಎಲ್ ಟೂರ್ನಿಗೆ ಬರ್ತಾರೆ. ಆರ್‌ಸಿಬಿ ಟೀಂಗೆ ಬಲ ತುಂಬುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಕುರಿತು ಇನ್ನೂ ಯಾವುದೇ ಸ್ಪಷ್ಟನೆ ಸಿಗುತ್ತಿಲ್ಲ. ಹೀಗಾಗಿ ಕುತೂಹಲ ಕೂಡ ಇದೀಗ ಡಬಲ್ ಆಗುತ್ತಿದೆ.
ಒಟ್ನಲ್ಲಿ, ಆರ್‌ಸಿಬಿ ತಂಡದ ಪರವಾಗಿ ದಿನೇಶ್ ಕಾರ್ತಿಕ್ ಆಡಿರುವ ಆಟಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಹೀಗಾಗಿ ಡಿಕೆ ನಿವೃತ್ತಿ ಪಡೆಯಬಾರದು, 2025ರ ಐಪಿಎಲ್ ಟೂರ್ನಿಗೆ ದಿನೇಶ್ ಕಾರ್ತಿಕ್ ವಾಪಸ್ ಬರಬೇಕು ಅಂತಿದ್ದಾರೆ ಅಭಿಮಾನಿಗಳು. ಆದರೆ ಈ ಆಸೆ ನೆರವೇರುತ್ತಾ? ಅನ್ನೋದನ್ನ ತಿಳಿಯಲು ಇನ್ನೂ ಒಂದು ವರ್ಷ ಕಾಯಬೇಕಿದೆ.












Click it and Unblock the Notifications