ಬಿಸಿಸಿಐ ಕೊಡುವ ಹಣದಿಂದ ಪಾಕಿಸ್ತಾನ ಕ್ರಿಕೆಟ್ ಅಭಿವೃದ್ಧಿ: ಶೋಯೆಬ್ ಅಖ್ತರ್ ಅಚ್ಚರಿಯ ಹೇಳಿಕೆ

ಶೋಯೆಬ್ ಅಖ್ತರ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ ಹಲವು ವರ್ಷಗಳಾದರೂ ತಮ್ಮ ಹೇಳಿಕೆಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ, ಅವರ ಹೇಳಿಕೆ ಎಷ್ಟೇ ವಿವಾದ ಸೃಷ್ಟಿಸಿದರೂ ನೇರವಾಗಿ ಮಾತನಾಡಲು ಹಿಂಜರಿಯುವುದಿಲ್ಲ. ಶೋಯೆಬ್ ಮತ್ತೊಮ್ಮೆ ಅಂಥದ್ದೇ ಹೇಳಿಕೆ ನೀಡುವ ಮೂಲಕ ಸುದ್ದಿ ಮಾಡಿದ್ದಾರೆ.

ಭಾರತೀಯ ಕ್ರೀಡಾ ಪತ್ರಕರ್ತರೊಬ್ಬರಿಗೆ ನೀಡಿದ ಸಂದರ್ಶನದಲ್ಲಿ ಅವರು ಪಾಕಿಸ್ತಾನ ಕ್ರಿಕೆಟ್ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಭಾರತದಿಂದ ಬರುವ ಹಣದಲ್ಲಿ ಪಾಕಿಸ್ತಾನ ಕ್ರಿಕೆಟ್ ನಡೆಯುತ್ತದೆ ಎಂದು ಶೋಯೆಬ್ ಅಖ್ತರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

shoaib-akhtars-remark

ಭಾರತ-ಪಾಕಿಸ್ತಾನ ಪಂದ್ಯಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರೀಡಾ ಪತ್ರಕರ್ತೆ ಬೋರಿಯಾ ಮಜುಂದಾರ್ ಅವರೊಂದಿಗೆ ಸಂವಾದದಲ್ಲಿ ಶೋಯೆಬ್ ಅಖ್ತರ್ ಇದನ್ನು ಈ ವಿಚಾರವನ್ನು ಹೇಳಿದ್ದಾರೆ. "ಬಿಸಿಸಿಐನಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೆ ಬರುವ ಹಣವನ್ನು ಆದಾಯ ಹಂಚಿಕೆಯ ಅಡಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಕಳುಹಿಸುತ್ತದೆ. ಪಾಕಿಸ್ತಾನದ ದೇಶೀಯ ಕ್ರಿಕೆಟಿಗರು ತಮ್ಮ ಪಂದ್ಯದ ಶುಲ್ಕವನ್ನು ಆ ಹಣದ ಬಲದ ಮೇಲೆ ಪಡೆಯುತ್ತಾರೆ. ಹಾಗಾಗಿ, ಒಂದು ರೀತಿಯಲ್ಲಿ ಭಾರತದಿಂದ ಬರುವ ಹಣದಲ್ಲಿ ನಮ್ಮ ಕ್ರಿಕೆಟ್ ಸಾಗುತ್ತದೆ." ಎಂದು ಹೇಳಿದ್ದಾರೆ.

ಯುವ ಕ್ರಿಕೆಟಿಗರಿಗೆ ಅನುಕೂಲ

"2023 ರ ವಿಶ್ವಕಪ್ ಅತ್ಯಂತ ವಿಶಿಷ್ಟ ಮತ್ತು ಉತ್ತೇಜಕವಾಗಿರುತ್ತದೆ. ಏಕೆಂದರೆ ನಾನು ಈಗ 50 ಓವರ್‌ಗಳ ಕ್ರಿಕೆಟ್‌ನ ಭವಿಷ್ಯ ಇದೆ ಎನ್ನುವ ವಿಶ್ವಾಸ ಇಲ್ಲ. ಈ ವಿಶ್ವಕಪ್‌ನಿಂದ ಭಾರತ ಸಾಕಷ್ಟು ಆದಾಯ ಗಳಿಸಬೇಕೆಂದು ನಾನು ಬಯಸುತ್ತೇನೆ. ಅನೇಕ ಜನರು ಇದನ್ನು ಹೇಳಲು ಹಿಂಜರಿಯಬಹುದು ಆದರೆ ಭಾರತದ ಆದಾಯವು ಐಸಿಸಿಗೆ ಹೋಗುತ್ತದೆ ಎಂದು ನನಗೆ ಸ್ಪಷ್ಟವಾಗಿದೆ. ಅದರ ಪಾಲು ಪಾಕಿಸ್ತಾನಕ್ಕೂ ಬರುತ್ತದೆ ಮತ್ತು ಅದರಿಂದ ದೇಶೀಯ ಕ್ರಿಕೆಟಿಗರು ಪಂದ್ಯ ಶುಲ್ಕವನ್ನು ಪಡೆಯುತ್ತಾರೆ. ಅಂದರೆ ಭಾರತದಿಂದ ಬರುವ ಹಣದಿಂದ ನಮ್ಮ ಯುವ ಕ್ರಿಕೆಟಿಗರನ್ನು ಪೋಷಿಸಲಾಗುತ್ತಿದೆ" ಎಂದು ಹೇಳಿದ್ದಾರೆ.

ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಮಾತನಾಡಿದ ಅವರು, "ಮತ್ತೊಮ್ಮೆ ಟೀಮ್ ಇಂಡಿಯಾದ ಮೇಲೆ ಒತ್ತಡ ಬೀಳಲಿದೆ" ಎಂದು ಹೇಳಿದ್ದಾರೆ. ಇದರ ಹಿಂದಿನ ಕಾರಣವನ್ನೂ ಅವರು ವಿವರಿಸಿದ್ದಾರೆ. "ಭಾರತೀಯ ಮಾಧ್ಯಮಗಳು ಟೀಮ್ ಇಂಡಿಯಾದ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತಿವೆ ಮತ್ತು ಇದು ಪ್ರತಿ ಬಾರಿಯೂ ಸಂಭವಿಸುತ್ತದೆ. ಭಾರತ ತಂಡ ಪಾಕಿಸ್ತಾನದ ವಿರುದ್ಧ ಸೋಲುತ್ತಿರುವುದು ಪ್ರತಿಭಾವಂತ ಆಟಗಾರರು ಇಲ್ಲವೆಂದಲ್ಲ, ಅವರ ಮೇಲೆ ಅತಿಯಾದ ಒತ್ತಡ ಹಾಕುತ್ತಿರುವುದು ಸೋಲಿಗೆ" ಕಾರಣ ಎಂದರು.

ಮುಂದುವರಿದು ಮಾತನಾಡಿದ ಅಖ್ತರ್, ಕಳೆದ ಬಾರಿಯೂ ಏಷ್ಯಾಕಪ್ ವೇಳೆ ಭಾರತೀಯ ಮಾಧ್ಯಮಗಳು ಟೀಂ ಇಂಡಿಯಾ ಮೇಲೆ ಹೆಚ್ಚಿನ ಒತ್ತಡ ಹೇರಿದ್ದವು. ಇಡೀ ಕ್ರೀಡಾಂಗಣಕ್ಕೆ ನೀಲಿ ಬಣ್ಣ ಬಳಿಯಲಾಗಿತ್ತು. ಟೀಂ ಇಂಡಿಯಾ ಪಾಕಿಸ್ತಾನವನ್ನು ಸುಲಭವಾಗಿ ಸೋಲಿಸುತ್ತದೆ ಎಂದು ಹೇಳಲಾಗಿದೆ. ಇದರಿಂದಾಗಿ ಪ್ರದರ್ಶನ ನೀಡುವಂತೆ ನಮ್ಮ ಮೇಲೆ ಒತ್ತಡ ಇರಲಿಲ್ಲ. ಇದರಿಂದಾಗಿ ಭಾರತ ಒತ್ತಡದಲ್ಲಿ ಕುಸಿದು ಬಿದ್ದಿದ್ದು, ಮುಕ್ತವಾಗಿ ಆಟವಾಡಿ ಪಂದ್ಯ ಗೆದ್ದಿದ್ದೇವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+