2ನೇ ಮದುವೆಗೆ ಸಿದ್ಧತೆ, ಭಾರತದ ಸ್ಟಾರ್ ಕ್ರಿಕೆಟರ್ ಬಾಳಲ್ಲಿ ತಂಗಾಳಿ...
2ನೇ ಮದುವೆ.. 3ನೇ ಮದುವೆ... ಹೀಗೆ ದುಡ್ಡು ಇದ್ದವರಿಗೆ ಪದೇ ಪದೇ ಮದುವೆ ಆಗುತ್ತಲೇ ಇರುತ್ತೆ ಎಂದು ಜನಸಾಮಾನ್ಯರು ಗೊಣಗುತ್ತಲೇ ಇರುತ್ತಾರೆ. ಅದರಲ್ಲೂ ಡಿವೋರ್ಸ್ & ಮದುವೆ ಸಂಬಂಧ ಮುರಿದುಕೊಳ್ಳುವ ರೂಢಿ ದುಡ್ಡು ಇದ್ದವರಿಗೆ ಜಾಸ್ತಿ ಅನ್ನೋ ಮಾತು ಇದೆ. ಈ ಎಲ್ಲಾ ಚರ್ಚೆಗಳ ನಡುವೆ ಮದುವೆ ಹಂತಕ್ಕೆ ಹೋಗಿ ಸಂಬಂಧ ಕಡಿದುಕೊಂಡ ಜೋಡಿಗಳು ಕೆಲ ದಿನಗಳ ಹಿಂದಷ್ಟೇ ಸದ್ದು ಮಾಡಿದ್ದರು. ಇಷ್ಟೆಲ್ಲದರ ನಡುವೆ ದಿಢೀರ್ ಹೊಸದೊಂದು ಸುದ್ದಿಯು ಸಂಚಲ ಸೃಷ್ಟಿ ಮಾಡಿದೆ. ಭಾರತದ ಸ್ಟಾರ್ ಕ್ರಿಕೆಟರ್ ಬಾಳಲ್ಲಿ ಈಗ ತಂಗಾಳಿ ಮೂಡಿದ್ದು, ಇದೀಗ ತಮ್ಮ 2ನೇ ಮದುವೆಗೆ ಸಿದ್ಧತೆ ನಡೆಸಿದ್ದಾರೆ.
ಭಾರತದಲ್ಲಿ ಕ್ರಿಕೆಟ್ ಆಡುವವರಿಗೆ ದುಡ್ಡಿನ ಕೊರತೆ ಇರೋದಿಲ್ಲ, ಅನ್ನೋ ಮಾತು ನಿಜವಾಗಿದೆ ಕೂಡ. ಏಕೆಂದರೆ ಭಾರತದಲ್ಲಿ ಕ್ರಿಕೆಟ್‌ಗೆ ಅಷ್ಟು ದೊಡ್ಡ ಮಟ್ಟದಲ್ಲಿ ಬೆಂಬಲ ಕೂಡ ಸಿಗುತ್ತಿದೆ. ಹೀಗಿದ್ದಾಗ ಭಾರತ ಕ್ರಿಕೆಟ್ ತಂಡ ಕೂಡ ಅತ್ಯುತ್ತಮ ಪ್ರದರ್ಶನ ತೋರಿಸುತ್ತಾ ಇರುವುದು ಭಾರಿ ಗಮನವನ್ನು ಸೆಳೆದಿದೆ. ಇಷ್ಟೆಲ್ಲದರ ಮಧ್ಯೆ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟರ್ ಶಿಖರ್ ಧವನ್ ವೈಯಕ್ತಿಕ ಜೀವನದ 2ನೇ ಇನ್ನಿಂಗ್ಸ್ ಆರಂಭಿಸಲು ಈ ಮೂಲಕ ಸಜ್ಜಾಗಿದ್ದಾರೆ.

ಧವನ್ ಮದುವೆ ಆದಷ್ಟು ಬೇಗ?
ಫೆಬ್ರವರಿ ತಿಂಗಳಲ್ಲೇ ದೆಹಲಿ-ಎನ್‌ಸಿಆರ್‌ನಲ್ಲಿ ವಿವಾಹ ಬಂಧನಕ್ಕೆ ಕಾಲಿಡಲು ಶಿಖರ್ ಧವನ್ ಈಗ ಸಜ್ಜಾಗಿದ್ದಾರೆ. ಶಿಖರ್ ಧವನ್ ಅವರ 2ನೇ ಮದುವೆಗೆ ಸಿದ್ಧತೆಗಳು ಅಬ್ಬರದಿಂದ ಸಾಗಿದ್ದು, ಭಾರಿ ಕುತೂಹಲ ಕೆರಳಿಸಿದೆ. ಆದರೆ ಈ ಸುದ್ದಿ ಬಗ್ಗೆ ಈವರೆಗೂ ಧವನ್ ಆಗಲಿ ಅವರ ಕುಟುಂಬವಾಗಲಿ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಶಿಖರ್ ಧವನ್ ಅವರ 2ನೇ ಮದುವೆ ಕುರಿತು ಚರ್ಚೆ ಮತ್ತಷ್ಟು ಬಿಸಿ ಏರಿಸಿದೆ.












Click it and Unblock the Notifications