
ದಕ್ಷಿಣ ಆಫ್ರಿಕಾ ವಿರುದ್ಧದ T20 ಸರಣಿಯಿಂದ ಹೊರಗುಳಿದ ಶಮಿ
ತಿರುವನಂತಪುರ, ಸೆಪ್ಟೆಂಬರ್ 27: ತಿರುವನಂತಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 1ನೇ ಟಿ20ಐಗೆ ಕೇವಲ ಒಂದೆರಡು ದಿನಗಳು ಉಳಿದಿವೆ. ಪಿಟಿಐ ವರದಿಯ ಪ್ರಕಾರ ಕೋವಿಡ್-19 ಹಿಟ್ ಮೊಹಮ್ಮದ್ ಶಮಿ ಭಾರತದ ಮೂರು ಪಂದ್ಯಗಳ ಸರಣಿಯಿಂದ ಹೊರಗುಳಿದಿದ್ದಾರೆ. ಬೆಂಗಾಲ್ ಆಲ್ ರೌಂಡರ್ ಶಹಬಾಜ್ ಅಹ್ಮದ್ ಅವರು ವಿಶ್ರಾಂತಿ ಪಡೆದಿರುವ ಹಾರ್ದಿಕ್ ಪಾಂಡ್ಯ ಸ್ಥಾನವನ್ನು ತುಂಬಿದ್ದಾರೆ.
ಭಾರತ ಕ್ರಿಕೆಟ್ ತಂಡ ಸೋಮವಾರ ನಗರಕ್ಕೆ ಆಗಮಿಸಿದ್ದು, ತಂಡಕ್ಕೆ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಮತ್ತು ಕೇರಳ ಕ್ರಿಕೆಟ್ ಸಂಸ್ಥೆಯಿಂದ ಅದ್ದೂರಿ ಸ್ವಾಗತ ನೀಡಲಾಯಿತು. ದಕ್ಷಿಣ ಆಫ್ರಿಕಾ ತಂಡ ಭಾನುವಾರ ರಾಜ್ಯ ರಾಜಧಾನಿ ತಲುಪಿದ್ದು, ಇಂದು ಅಭ್ಯಾಸ ಆರಂಭಿಸಿದೆ.
ಬೆನ್ನು ನೋವಿನಿಂದಾಗಿ ದೀಪಕ್ ಹೂಡಾ ಕೂಡ ಸರಣಿಯಿಂದ ಹೊರಗುಳಿಯಲಿದ್ದಾರೆ. ರಾಷ್ಟ್ರೀಯ ಆಯ್ಕೆ ಸಮಿತಿಯು ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ದಕ್ಷಿಣ ಆಫ್ರಿಕಾ ಸರಣಿಗೆ ವಾಪಸ್ ಕರೆಸಿಕೊಳ್ಳಲು ಸಜ್ಜಾಗಿದೆ. ಶಮಿ ಅವರು ತಮ್ಮ ಕೋವಿಡ್-19 ನಿಂದ ಚೇತರಿಸಿಕೊಂಡಿಲ್ಲ. ಅವರಿಗೆ ಹೆಚ್ಚಿನ ಸಮಯ ಬೇಕಾಗಿದ್ದು, ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿಯಲಿದ್ದಾರೆ. ದಕ್ಷಿಣ ಆಫ್ರಿಕಾ ಸರಣಿಗೆ ಶಮಿ ಬದಲಿ ಆಟಗಾರನಾಗಿ ಉಮೇಶ್ ಯಾದವ್ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
Team India New Jersey : ಫ್ಯಾನ್ಸ್ಗೆ ಗೌರವ ಸಲ್ಲಿಸಲಿರುವ ಹೊಸ ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ
ಆದಾಗ್ಯೂ, ಪಾಂಡ್ಯ ಬದಲಿಗೆ ಶಹಬಾಜ್ ಅವರನ್ನು ಏಕೆ ಆಯ್ಕೆ ಮಾಡಲಾಗಿದೆ ಎಂದು ಕೇಳಿದಾಗ, "ಹಾರ್ದಿಕ್ ಅನ್ನು ಬದಲಾಯಿಸಬೇಕಾದರೆ ಯಾರಾದರೂ ಸೀಮ್ ಬೌಲಿಂಗ್ ಆಲ್‌ರೌಂಡರ್ ಇದ್ದಾರೆಯೇ, ರಾಜ್ ಬಾವಾ ಇನ್ನು ಅನನುಭವಿ ಮತ್ತು ಅದಕ್ಕಾಗಿಯೇ ನಾವು ಅವರನ್ನು ಬಹಿರಂಗಪಡಿಸಲು ಭಾರತ ಎ ತಂಡದಲ್ಲಿ ಇರಿಸಿದ್ದೇವೆ. ಆತ್ ಬೆಳೆಯಲು ಸಮಯ ಬೇಕಾಗುತ್ತದೆ ಎಂದರು.
ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಆರ್. ಅಶ್ವಿನ್, ಶಹಬಾಜ್ ಅಹ್ಮದ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ ತಂಡದಲ್ಲಿ ಆಡಲಿದ್ದಾರೆ.