• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಜೆಂಟೀನಾ ವಿರುದ್ಧ ಗೆಲ್ಲುತ್ತಿದ್ದಂತೆ ಸೌದಿ ಅರೇಬಿಯಾದಲ್ಲಿ ರಜೆ ಘೋಷಣೆ

|
Google Oneindia Kannada News

ರಿಯಾದ್, ನವೆಂಬರ್ 23: ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಫುಟ್‌ಬಾಲ್ ತಂಡ 2-1 ಗೋಲುಗಳಿಂದ ರೋಚಕ ಗೆಲುವು ಸಾಧಿಸುತ್ತಿದ್ದಂತೆ ಸೌದಿ ಅರೇಬಿಯಾದಲ್ಲಿ ರಾಷ್ಟ್ರೀಯ ರಜೆಯನ್ನು ಘೋಷಿಸಲಾಗಿದೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ.

ಸೌದಿ ಅರೇಬಿಯಾದಲ್ಲಿ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಉದ್ಯೋಗಿಗಳಿಗೆ ರಜೆ ನೀಡಲಾಗುತ್ತದೆ ಎಂದು ಸೌದಿ ದೊರೆ ಸಲ್ಮಾನ್ ಘೋಷಿಸಿದ್ದಾರೆ. ಶಾಲೆಗಳಿಗೂ ಸಹ ರಜೆ ನೀಡಲಾಗಿದೆ. ಗಲ್ಫ್ ರಾಷ್ಟ್ರದ ಅಂತಿಮ ಪರೀಕ್ಷೆಗಳು ನಡೆಯುತ್ತಿರುವುದರ ಮಧ್ಯೆಯೇ ಈ ರಜೆಯನ್ನು ಘೋಷಿಸಲಾಗಿದ್ದು, ಅವುಗಳನ್ನು ಬೇರೆ ದಿನಾಂಕದಂದು ನಡೆಸುವುದಕ್ಕೆ ಸೂಚನೆ ನೀಡಲಾಗಿದೆ.

ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವ ಭಾರತೀಯರಿಗೆ ಇನ್ಮುಂದೆ ಕ್ಲಿಯರೆನ್ಸ್ ಅಗತ್ಯವಿಲ್ಲ ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವ ಭಾರತೀಯರಿಗೆ ಇನ್ಮುಂದೆ ಕ್ಲಿಯರೆನ್ಸ್ ಅಗತ್ಯವಿಲ್ಲ

ಮಂಗಳವಾರ ನಗರದ ಪ್ರಮುಖ ಥೀಮ್ ಪಾರ್ಕ್‌ಗಳು ಮತ್ತು ಮನರಂಜನಾ ಕೇಂದ್ರಗಳಲ್ಲಿ ಪ್ರವೇಶ ಶುಲ್ಕವನ್ನು ಮನ್ನಾ ಮಾಡಲಾಗುವುದು ಎಂದು ರಾಯಲ್ ಕೋರ್ಟ್‌ನ ಸಲಹೆಗಾರ ಮತ್ತು ಸೌದಿ ಅರೇಬಿಯಾದ ಜನರಲ್ ಎಂಟರ್‌ಟೈನ್‌ಮೆಂಟ್ ಅಥಾರಿಟಿಯ ಮುಖ್ಯಸ್ಥ ತುರ್ಕಿ ಅಲ್-ಶೇಖ್ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ.

ಸೌದಿ ರಾಜಧಾನಿಯಲ್ಲಿ ಹಬ್ಬದ ವಾತಾವರಣ: ದೋಹಾದ ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಸಲೇಹ್ ಅಲ್-ಶೆಹ್ರಿ ಈಕ್ವಲೈಜರ್ ಮತ್ತು ಸೇಲಂ ಅಲ್-ದವ್ಸಾರಿ ವಿಜೇತರಿಗೆ ಧನ್ಯವಾದ ತಿಳಿಸಲಾಯಿತು.

ರಾಜಧಾನಿ ರಿಯಾದ್‌ನಾದ್ಯಂತ ಸಂಭ್ರಮಾಚರಣೆಗಳು ಮುಗಿಲು ಮುಟ್ಟಿತು. ಅಭಿಮಾನಿಗಳು ಪೂರ್ವಸಿದ್ಧತೆಯಿಲ್ಲದೇ ನೃತ್ಯವನ್ನು ಮಾಡಿದರು. ಕುಣಿದು ಕುಪ್ಪಳಿಸಿದರು. ವೇಗದ ಕಾರುಗಳ ಕಿಟಕಿಗಳಲ್ಲಿ ಕತ್ತಿಯಿಂದ ಅಲಂಕರಿಸಿದ ರಾಷ್ಟ್ರಧ್ವಜಗಳು ರಾರಾಜಿಸಿದವು.

English summary
Saudi King Salman Declares Holiday to nationwide After Win against Argentina in FIFA World Cup
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X