ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಪಾಕಿಸ್ತಾನಿ ನಟಿಯಿಂದ ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್ ಸಂಬಂಧ ಹಳಸಿದೆಯೇ?

|
Google Oneindia Kannada News

ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ವಿಚ್ಛೇದನದ ಸುದ್ದಿಯ ನಡುವೆ ಪಾಕಿಸ್ತಾನಿ ನಟಿ ಆಯೇಶಾ ಉಮರ್ ಮುನ್ನೆಲೆಗೆ ಬರುತ್ತಿದ್ದಾರೆ. ಆಯೇಷಾ ಮತ್ತು ಶೋಯೆಬ್ ನಡುವೆ ಅನೈತಿಕ ಸಂಬಂಧವಿದೆ ಎಂದು ಪಾಕಿಸ್ತಾನಿ ಟಿವಿ ಸುದ್ದಿಗಳು ಹೇಳುತ್ತಿವೆ. ಈ ಕಾರಣದಿಂದಾಗಿ ಸಾನಿಯಾ ಮಿರ್ಜಾ ಶೋಯೆಬ್‌ನಿಂದ ಬೇರ್ಪಟ್ಟಿದ್ದಾರೆ.

ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ವಿಚ್ಛೇದನದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಇಬ್ಬರೂ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ಆದರೆ, ಈ ವಿಚಾರದಲ್ಲಿ ದಂಪತಿ ಮೌನ ವಹಿಸಿದ್ದಾರೆ.

ಇವರಿಬ್ಬರ ವಿಚ್ಛೇದನದ ಸುದ್ದಿಯ ನಡುವೆಯೇ ಪಾಕಿಸ್ತಾನಿ ನಟಿ ಆಯೇಷಾ ಉಮರ್ ಹೆಸರು ಮುನ್ನೆಲೆಗೆ ಬಂದಿದೆ. ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ನಟಿ ಆಯೇಷಾ ಉಮರ್ ಮತ್ತು ಪಾಕಿಸ್ತಾನಿ ಬ್ಯಾಟ್ಸ್‌ಮನ್ ಶೋಯೆಬ್ ಮಲಿಕ್ ರಹಸ್ಯ ಸಂಬಂಧ ಹೊಂದಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಇದೇ ಕಾರಣಕ್ಕೆ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಸಂಬಂಧ ಹಳಸಿದ್ದು, ಇಬ್ಬರೂ ದೂರವಾಗಿದ್ದಾರೆ.

 ನಟಿ ಆಯೇಶಾ - ಶೋಯೆಬ್ ಸಂಬಂಧದ ಸುದ್ದಿ

ನಟಿ ಆಯೇಶಾ - ಶೋಯೆಬ್ ಸಂಬಂಧದ ಸುದ್ದಿ

ಇತ್ತೀಚೆಗೆ ಸಾನಿಯಾ ಮಿರ್ಜಾ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕಷ್ಟದ ಸಮಯ ಎಂದು ಬರೆಯಲಾಗಿದೆ. ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಇನ್ಸ್ಟಾ ಹಾಕಿದ್ದರು. ಅದರಲ್ಲಿ ಮುರಿದ ಹೃದಯಗಳು ಎಲ್ಲಿ ಹೋಗುತ್ತವೆ? ನೀವು ಅಲ್ಲಾಹನನ್ನು ಹುಡುಕುತ್ತೀರಾ? ಎಂದು ಪ್ರಶ್ನಿಸಿರುವ ಸಾನಿಯಾ ಅವರ ಪೋಸ್ಟ್‌ಗಳ ನಡುವೆ ನಟಿ ಆಯೇಶಾ ಉಮರ್ ಅವರ ಶೋಯೆಬ್ ಅವರ ಸಂಬಂಧದ ಸುದ್ದಿಯೂ ಮುನ್ನೆಲೆಗೆ ಬರಲು ಪ್ರಾರಂಭಿಸಿದೆ. ಈ ವರದಿಗಳ ಮಧ್ಯೆ ಶೋಯೆಬ್ ಮಲಿಕ್ ಮತ್ತು ಆಯೇಶಾ ಉಮರ್ ಅವರ ಕೆಲವು ಹಳೆಯ ಫೋಟೋಶೂಟ್‌ಗಳ ಚಿತ್ರಗಳು ಸಹ ಮುನ್ನೆಲೆಗೆ ಬಂದಿವೆ. ಈಗ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

 ಫೋಟೋಶೂಟ್ ಬಗ್ಗೆ ಸಾನಿಯಾ ಮೌನ

ಫೋಟೋಶೂಟ್ ಬಗ್ಗೆ ಸಾನಿಯಾ ಮೌನ

ಶೋಯೆಬ್ ಮಲಿಕ್ ಮತ್ತು ಆಯೇಶಾ ಉಮರ್ 2021 ರಲ್ಲಿ ಒಟ್ಟಿಗೆ ಬೋಲ್ಡ್ ಫೋಟೋಶೂಟ್ ಮಾಡಿದರು. ಈ ಫೋಟೋಶೂಟ್‌ನ ಚಿತ್ರಗಳನ್ನು ಆಯೇಶಾ ಒಮರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಈ ಫೋಟೋಶೂಟ್ ಬಗ್ಗೆ ಸಾನಿಯಾ ಪ್ರತಿಕ್ರಿಯೆಯ ಬಗ್ಗೆ ಶೋಯೆಬ್ ಅವರನ್ನು ಕೇಳಿದಾಗ, ಅವರು ಅದಕ್ಕೆ ಪ್ರತಿಕ್ರಿಯಿಸಲಿಲ್ಲ. ನಂತರ, ಅವರ ಫೋಟೋಶೂಟ್ ಬಗ್ಗೆ ಮಾತನಾಡುವಾಗ, ಶೋಯೆಬ್ ಮಲಿಕ್ ಸಂದರ್ಶನವೊಂದರಲ್ಲಿ ಆಯೇಷಾ ಅವರನ್ನು ತೀವ್ರವಾಗಿ ಹೊಗಳಿದ್ದರು. ಚಿತ್ರೀಕರಣದ ವೇಳೆ ಸಾಕಷ್ಟು ಸಹಾಯ ಮಾಡಿದ್ದೇನೆ ಎಂದು ಹೇಳಿದ್ದರು.

 ಪಾಕಿಸ್ತಾನದಲ್ಲಿ ಸುದ್ದಿ ಆಗಿದೆ

ಪಾಕಿಸ್ತಾನದಲ್ಲಿ ಸುದ್ದಿ ಆಗಿದೆ

ಪಾಕಿಸ್ತಾನದ ಟಿವಿ ಸುದ್ದಿಯ ಪ್ರಕಾರ, ಶೋಯೆಬ್ ಮಲಿಕ್ ಸಾನಿಯಾ ಮಿರ್ಜಾಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕ್ರಿಕೆಟ್‌ಗೆ ಶೋಯೆಬ್ ಮಲಿಕ್ ಮತ್ತು ಆಯೇಷಾ ಜೊತೆಗಿನ ಸಂಬಂಧದಿಂದಾಗಿ ಸಾನಿಯಾ ತನ್ನ 12 ವರ್ಷಗಳ ದಾಂಪತ್ಯವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಾನಿಯಾ ಮತ್ತು ಶೋಯೆಬ್ 2010ರಲ್ಲಿ ವಿವಾಹವಾದರು. ಅಂದಿನಿಂದ ಈ ದಂಪತಿ ದುಬೈನಲ್ಲಿ ನೆಲೆಸಿದ್ದಾರೆ.

 ಆಯೇಷಾ ಸ್ಟೈಲ್ ಐಕಾನ್

ಆಯೇಷಾ ಸ್ಟೈಲ್ ಐಕಾನ್

ಆಯೇಶಾ ಉಮರ್ ಪಾಕಿಸ್ತಾನಿ ನಟಿ ಮತ್ತು ಯೂಟ್ಯೂಬರ್ ಕೂಡ. ಈ ಮೋಹಕ ಬೆಡಗಿಯನ್ನು ಪಾಕಿಸ್ತಾನದಲ್ಲಿ ಸ್ಟೈಲ್ ಐಕಾನ್ ಎಂದು ಪರಿಗಣಿಸಲಾಗಿದೆ. ಆಯೇಷಾ ಉಮರ್ ಪಾಕಿಸ್ತಾನದ ಪ್ರಸಿದ್ಧ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. 2012ರಲ್ಲಿ ಅವರು ತಮ್ಮ ಮೊದಲ ಸಿಂಗಲ್ ಆಲ್ಬಂ 'ಚಲ್ತೇ ಚಲ್ತೆ' ಮತ್ತು 'ಖಾಮೋಶಿ'ನ್ನು ಬಿಡುಗಡೆ ಮಾಡಿದರು. ಇದರೊಂದಿಗೆು ಉಮರ್ ಅತ್ಯುತ್ತಮ ಆಲ್ಬಂಗಾಗಿ ಲಕ್ಸ್ ಸ್ಟೈಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

English summary
Sania Mirza and Shoaib Malik divorce rumours: Reports cite that the main reason behind Malik and Mirza's divorce is a Pakistani model named Ayesha Omar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X