Sania Mirza: ಮೊಹಮ್ಮದ್ ಶಮಿ ಜೊತೆ ಸಾನಿಯಾ ಮಿರ್ಜಾ ಮದುವೆ? ಸಾನಿಯಾ ತಂದೆ ಮಹತ್ವದ ಹೇಳಿಕೆ
ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಭಾರತದ ಶ್ರೇಷ್ಠ ಕ್ರೀಡಾಪಟುಗಳು. ವೈಯಕ್ತಿಕ ಬದುಕಿನಲ್ಲಿ ಕಹಿ ನೆನಪುಗಳನ್ನು ಮೆಟ್ಟಿ ನಿಂತು ಕ್ರೀಡಾಲೋಕದಲ್ಲಿ ಸಾಧನೆ ಮಾಡಿದ್ದಾರೆ.
ಸಾನಿಯಾ ಮಿರ್ಜಾ ಭಾರತದ ಶ್ರೇಷ್ಠ ಮಹಿಳಾ ಟೆನಿಸ್ ಆಟಗಾರ್ತಿಯಾಗಿದ್ದರೆ, ಶಮಿ ಚಾಂಪಿಯನ್ ವೇಗದ ಬೌಲರ್ ಆಗಿದ್ದಾರೆ, 2023ರ ಏಕದಿನ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಭಾರತ ಫೈನಲ್‌ಗೆ ಹೋಗಲು ಶಮಿ ಕೂಡ ಮಹತ್ವದ ಕೊಡುಗೆ ನೀಡಿದ್ದಾರೆ.

ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಇತ್ತೀಚೆಗೆ ಹರಿದಾಡುತ್ತಿದೆ. ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟಿಗ ಶೊಯೆಬ್ ಮಲಿಕ್ ಜೊತೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಮೊಹಮ್ಮದ್ ಶಮಿ ಕೂಡ ಪತ್ನಿ ಹಸಿನ್ ಜಹಾನ್‌ರಿಂದ ವಿಚ್ಛೇದನ ಪಡೆದಿದ್ದಾರೆ.
ಸಾನಿಯಾ ಮಿರ್ಜಾ ತಂದೆ ಹೇಳಿದ್ದೇನು
ಸಾನಿಯಾ-ಶಮಿ ಮದುವೆಯಾಗುತ್ತಾರೆ ಎನ್ನುವ ವದಂತಿಗಳ ಬಗ್ಗೆ ಸಾನಿಯಾ ಮಿರ್ಜಾ ತಂದೆ ಇಮ್ರಾನ್ ಪ್ರತಿಕ್ರಿಯೆ ನೀಡಿದ್ದಾರೆ. "ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಮದುವೆಯಾಗುತ್ತಾರೆ ಎನ್ನುವುದು ಸುಳ್ಳು, ಇಬ್ಬರೂ ಕೂಡ ಭೇಟಿಯಾಗಿಲ್ಲ" ಎಂದು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಸಾನಿಯಾ ಮಿರ್ಜಾ ಏನು ಮಾಡ್ತಿದ್ದಾರೆ?
ಟೆನಿಸ್ ತಾರೆ ಸಾನಿಯಾ ಮಿರ್ಜಾ ಶೊಯೆಬ್ ಮಲಿಕ್ ಅವರಿಗೆ ವಿಚ್ಛೇದನ ನೀಡಿದ 5 ತಿಂಗಳ ಬಳಿಕ ಪುಣ್ಯಕ್ಷೇತ್ರ ಹಜ್‌ಗೆ ಪ್ರಯಾಣ ಮಾಡಿದ್ದರು. ವೃತ್ತಿಪರ ಟೆನ್ನಿಸ್‌ನಿಂದ ನಿವೃತ್ತಿಯಾಗಿರುವ ಸಾನಿಯಾ ಮಿರ್ಜಾ ಪ್ರತಿಷ್ಠಿತ ಫ್ರೆಂಚ್ ಓಪನ್ 2024 ಗಾಗಿ ಪಂಡಿತರಾಗಿ ಕೆಲಸ ಮಾಡುತ್ತಿದ್ದರು.
ತಮ್ಮ ಸಾಮಾಜಿಕ ಮಾಧ್ಯಮದಲ್ಲಿ 'ಪರಿವರ್ತನೆಯ ಅನುಭವ'ಕ್ಕಾಗಿ ಸಜ್ಜಾಗುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಇದೆಲ್ಲಾ ನೋವಿನಿಂದ ಹೊರಬಂದು ಜೀವನ ಮಾಡಲು ಅವರು ಬಯಸಿದ್ದಾರೆ.
ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ನಲ್ಲಿ, ನಾನು ಈ ಪರಿವರ್ತಕ ಅನುಭವಕ್ಕಾಗಿ ತಯಾರಿ ನಡೆಸುತ್ತಿರುವಾಗ, ಯಾವುದೇ ತಪ್ಪುಗಳು ಮತ್ತು ನ್ಯೂನತೆಗಳಿಗಾಗಿ ನಾನು ನಿಮ್ಮ ಕ್ಷಮೆಯನ್ನು ನಮ್ರತೆಯಿಂದ ಕೇಳುತ್ತೇನೆ. ಅಲ್ಲಾಹನು ತನ್ನ ಪ್ರಾರ್ಥನೆಯನ್ನು ಸ್ವೀಕರಿಸುತ್ತಾನೆ ಮತ್ತು ಈ ಆಶೀರ್ವಾದದ ಹಾದಿಯಲ್ಲಿ ತನಗೆ ಮಾರ್ಗದರ್ಶನ ನೀಡುತ್ತಾನೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಸಾನಿಯಾ ಇತ್ತೀಚೆಗೆ ಪ್ರಸಿದ್ಧ ಹಾಸ್ಯ ಕಾರ್ಯಕ್ರಮ ಕಪಿಲ್ ಶರ್ಮಾ ಅವರೊಂದಿಗೆ ತಮ್ಮ ಅಲಂಕೃತ ವೃತ್ತಿಜೀವನದ ಬಗ್ಗೆ ಮಾತನಾಡಿದ್ದರು.
ಚೇತರಿಸಿಕೊಳ್ಳುತ್ತಿರುವ ಶಮಿ
ಮತ್ತೊಂದೆಡೆ ಶಮಿ ಕೂಡ ಮತ್ತೆ ಮೈದಾನಕ್ಕೆ ಬರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಏಕದಿನ ವಿಶ್ವಕಪ್ ಸಂದರ್ಭದಲ್ಲಿ ಗಾಯಗೊಂಡಿದ್ದ ಅವರು, ವಿಶ್ವಕಪ್ ಬಳಿಕ ಯಾವುದೇ ಪಂದ್ಯಗಳನ್ನು ಆಡಿಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು, ಚೇತರಿಸಿಕೊಳ್ಳುತ್ತಿದ್ದು, ಈ ವರ್ಷದ ಕೊನೆಯಲ್ಲಿ ಮತ್ತೆ ಮೈದಾನಕ್ಕೆ ಇಳಿಯುವ ವಿಶ್ವಾಸದಲ್ಲಿದ್ದಾರೆ.












Click it and Unblock the Notifications