Ruturaj Gaikwad: 2023ರ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ಬಾರಿಸಿದ ರುತುರಾಜ್ ಗಾಯಕ್ವಾಡ್

ಶುಕ್ರವಾರ, ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಸೀಸನ್‌ನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾದವು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ 2023ರ ಐಪಿಎಲ್‌ನ ಚೊಚ್ಚಲ ಅರ್ಧಶತಕ ಬಾರಿಸಿ ಮಿಂಚಿದರು. ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ರುತುರಾಜ್ ಗಾಯಕ್ವಾಡ್ ಕೇವಲ 23 ಎಸೆತಗಳಲ್ಲಿ 50 ರನ್ ಚಚ್ಚಿದರು.

Ruturaj Gaikwad Half-century: CSKs Opener Ruturaj Gaikwad Hits 1st Half-century In IPL 2023

ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಅಲ್ಜಾರಿ ಜೋಸೆಫ್ ಅವರ ಮೊದಲ ಓವರ್‌ನಲ್ಲಿ ರುತುರಾಜ್ ಗಾಯಕ್ವಾಡ್ ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ 6ನೇ ವೇಗದ ಅರ್ಧಶತಕವನ್ನೂ ಬಾರಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಸರಣಿಯಲ್ಲಿ ಮಿಂಚಿದ್ದ ವೆಸ್ಟ್ ಇಂಡೀಸ್ ವೇಗದ ಬೌಲರ್ ಅಲ್ಜಾರಿ ಜೋಸೆಫ್ ಬೌಲಿಂಗ್‌ನಲ್ಲಿ ರುತುರಾಜ್ ಗಾಯಕ್ವಾಡ್ 3 ಸಿಕ್ಸರ್ ಸಿಡಿಸಿದರು.

ರುತುರಾಜ್ ಗಾಯಕ್ವಾಡ್ ತಮ್ಮ ಅರ್ಧಶತಕದ ಗಡಿ ದಾಟುವ ಹೊತ್ತಿಗೆ 5 ಸಿಕ್ಸರ್ ಮತ್ತು 3 ಬೌಂಡರಿಗಳನ್ನು ಬಾರಿಸಿದ್ದರು. ಈ ವೇಳೆ ಗುಜರಾತ್ ಟೈಟನ್ಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ತವರಿನ ಮೈದಾನದಲ್ಲಿ ಕಿಕ್ಕಿರಿದ ಪ್ರೇಕ್ಷಕರ ಮುಂದೆ ಸಿಕ್ಸರ್, ಬೌಂಡರಿ ಸಿಡಿಸಿ ಮನರಂಜಿಸಿದರು.

ಮೊಹಮ್ಮದ್ ಶಮಿ ತಮ್ಮ ಬೌಲಿಂಗ್‌ನಲ್ಲಿ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ ಅವರ ಆರಂಭಿಕ ವಿಕೆಟ್ ಪಡೆದರು. ನಂತರ ಮೊಯಿನ್ ಅಲಿ ಮತ್ತು ಸಿಎಸ್‌ಕೆ ಪರ ಚೊಚ್ಚಲ ಪಂದ್ಯವಾಡಿದ ಬೆನ್ ಸ್ಟೋಕ್ಸ್ ವಿಕೆಟ್‌ಗಳನ್ನು ರಶೀದ್ ಖಾನ್ ಪಡೆದರು. ಆಗಲೂ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 11ನೇ ಓವರ್‌ನಲ್ಲಿ 100 ರನ್‌ಗಳ ಗಡಿಯನ್ನು ತಲುಪಿತ್ತು. ಒಂದು ವಿಕೆಟ್ ಉರುಳುತ್ತಿದ್ದರೂ, ಮತ್ತೊಂದೆಡೆ ರುತುರಾಜ್ ಗಾಯಕ್ವಾಡ್ ಕ್ರೀಸ್‌ಗೆ ಅಂಟಿಕೊಂಡಿದ್ದರು.

Ruturaj Gaikwad- IPL 2023

"ರುತುರಾಜ್ ಗಾಯಕ್ವಾಡ್ ಉತ್ತಮ ಆಟಗಾರ ಎಂದು ನನಗೆ ತಿಳಿದಿತ್ತು. ಆದರೆ ಈ ಋತುವಿನ ಮೊದಲ ಪಂದ್ಯದಲ್ಲಿ ನಾನು ಈ ರೀತಿಯ ಆಟವನ್ನು ನಿರೀಕ್ಷಿಸಿರಲಿಲ್ಲ," ಎಂದು ಜಿಯೋ ಸಿನಿಮಾದಲ್ಲಿ ಕಾಮೆಂಟೇಟರ್ ಆಗಿರುವ ಎಬಿ ಡಿವಿಲಿಯರ್ಸ್ ಹೇಳಿದರು.

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ವೇಗದ ಅರ್ಧಶತಕಗಳು
* ಸುರೇಶ್ ರೈನಾ - 2014ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 16 ಎಸೆತಗಳಲ್ಲಿ ಅರ್ಧಶತಕ

* ಮೊಯಿನ್ ಅಲಿ - 2022ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 19 ಎಸೆತಗಳಲ್ಲಿ ಅರ್ಧಶತಕ

* ಎಂಎಸ್ ಧೋನಿ - 2012ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 20 ಎಸೆತಗಳಲ್ಲಿ ಅರ್ಧಶತಕ

* ಅಂಬಾಟಿ ರಾಯುಡು - 2021ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 20 ಎಸೆತಗಳಲ್ಲಿ ಅರ್ಧಶತಕ

* ಸ್ಯಾಮ್ ಬಿಲ್ಲಿಂಗ್ಸ್ - 2018ರಲ್ಲಿ ಕೆಕೆಆರ್ ವಿರುದ್ಧ 21 ಎಸೆತಗಳಲ್ಲಿ ಅರ್ಧಶತಕ

* ಫಾಫ್ ಡು ಪ್ಲೆಸಿಸ್ - 2014ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 22 ಎಸೆತಗಳಲ್ಲಿ ಅರ್ಧಶತಕ

* ಮ್ಯಾಥ್ಯೂ ಹೇಡನ್ - 2009ರಲ್ಲಿ ಆರ್‌ಸಿಬಿ ವಿರುದ್ಧ 22 ಎಸೆತಗಳಲ್ಲಿ ಅರ್ಧಶತಕ

* ಎಂಎಸ್ ಧೋನಿ - 2018ರಲ್ಲಿ ಆರ್‌ಸಿಬಿ ವಿರುದ್ಧ 22 ಎಸೆತಗಳಲ್ಲಿ ಅರ್ಧಶತಕ

* ಡ್ವೇನ್ ಸ್ಮಿತ್ - 2015ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 22 ಎಸೆತಗಳಲ್ಲಿ ಅರ್ಧಶತಕ

* ಮ್ಯಾಥ್ಯೂ ಹೇಡನ್ - 2009ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ 22 ಎಸೆತಗಳಲ್ಲಿ ಅರ್ಧಶತಕ

* ರುತುರಾಜ್ ಗಾಯಕ್ವಾಡ್ - 2023ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 23 ಎಸೆತಗಳಲ್ಲಿ ಅರ್ಧಶತಕ

ರುತುರಾಜ್ ಗಾಯಕ್ವಾಡ್ ಐಪಿಎಲ್ 2021ರಲ್ಲಿಯೂ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿ 635 ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ಗೆದ್ದಿದ್ದರು. ಆದರೆ ಕಳೆದ ಋತುವಿನಲ್ಲಿ ರುತುರಾಜ್ ಗಾಯಕ್ವಾಡ್ 30ಕ್ಕಿಂತ ಕಡಿಮೆ ಸರಾಸರಿಯಲ್ಲಿ ಕೇವಲ 368 ರನ್ ಗಳಿಸಿದರು.

ಗಾಯದ ಸಮಸ್ಯೆಗಳಿಂದ ಹೊರಬಂದ ನಂತರ ರುತುರಾಜ್ ಗಾಯಕ್ವಾಡ್ ಅವರು, ಮಹಾರಾಷ್ಟ್ರ ತಂಡದ ಪರ ದೇಶೀಯ ಋತುವಿನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು, ವಿಜಯ್ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಸೇರಿದಂತೆ 4 ಶತಕಗಳನ್ನು ಬಾರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+