RCB Sale: ಆರ್‌ಸಿಬಿ ಮಾರಾಟ.. ಎಷ್ಟು ಸಾವಿರ ಕೋಟಿಗೆ ಗೊತ್ತಾ?
RCB Sale: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿಯಾಗಿ ಗೆದ್ದು ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಆದರೆ, ಇದರ ಬೆನ್ನಲ್ಲೇ ಇದೀಗ 2026 ಆರಂಭದಲ್ಲೇ ಫ್ರಾಂಚೈಸಿ ಮಾರಾಟ ಮಾಡಲಾಗುತ್ತದೆ ಎನ್ನುವ ಶಾಕಿಂಗ್ ಮಾಹಿತಿಯೊಂದು ಹೊರಬಿದ್ದಿದೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಅಹಮದಬಾದ್‌ನ ನೆರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜೂನ್ 3ರಂದು ಐಪಿಎಲ್ ಫೈನಲ್ ಪಂದ್ಯ ನಡೆಯಿತು. ಈ ವೇಳೆ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಹೊಡೆದುರುಳಿಸುವ ಮೂಲಕ ಆರ್‌ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಹಿನ್ನೆಲೆ ಮಾರನೇ ದಿನ ಜೂನ್ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವ ಇಟ್ಟುಕೊಳ್ಳಲಾಗಿತ್ತು. ಆದರೆ, ಅಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಸಾವನ್ನಪ್ಪಿದ್ದರು.

ಈ ದುರಂತದ ಬಳಿಕ ಸಾಕಷ್ಟು ಬದಲಾವಣೆಗಳಾದ್ವು. ಆರ್‌ಸಿಬಿ ಪ್ರಾಂಚೈಸಿ, ಮಾರ್ಕೆಟಿಂಗ್ ಹೆಡ್ ವಿರುದ್ಧ ಎಫ್‌ಐಆರ್ ದಾಖಲಾಯಿತು. ಅಷ್ಟೇ ಸಾಲದೆಂಬಂತೆ ವಿರಾಟ್ ಕೊಹ್ಲಿ ವಿರುದ್ಧವೂ ಕೂಡ ದೂರು ದಾಖಲಾಯಿತು. ಬಳಿಕ ಇವೆಲ್ಲಾ ಕೇಸ್ ಇತ್ಯರ್ಥಗೊಂಡು ರಾಯಲ್ ಚಾಲಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿಶೇಷ ಸಂದೇಶದ ಮೂಲಕ ದುರಂತದಲ್ಲಿ ಸಾವನ್ನಪ್ಪಿದವರಿಗೆ ತಲಾ 25,00,000 ರೂಪಾಯಿ ಪರಿಹಾರ ಘೋಷಣೆ ಮಾಡಿತು.
ಇನ್ನೂ ಈ ದುರಂತದ ಬೆನ್ನಲ್ಲೇ ಆರ್‌ಸಿಬಿ ಮಾರಾಟ ಮಾಡಲಾಗುತ್ತದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆಗ ಇದಕ್ಕೆ ಪ್ರತಿಕ್ರಿಯಿಸಿದ್ದ ಫ್ರಾಂಚೈಸಿ ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ ಎಂದು ಹೇಳುವ ಮೂಲಕ ಸ್ಪಷ್ಟನೆ ನೀಡಿತ್ತು. ಆದರೆ, ಇದೀಗ ಅಧಿಕೃತವಾಗಿ ಆರ್‌ಸಿಬಿ ಫ್ರಾಂಚೈಸಿ ಮಾಡಲಾಗುತ್ತದೆ ಎನ್ನುವ ಬಗ್ಗೆ ವರದಿಯಾಗಿದೆ. ಹಾಗಾದ್ರೆ ಮಾರಾಟಕ್ಕೆ ಅಸಲಿ ಕಾರಣ ಏನು ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹೌದು.. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾರುಕಟ್ಟೆಗೆ ಬಂದಿರುವ ಅಧಿಕೃತ ಮಾಹಿತಿ ಲಭ್ಯವಾಗಿದೆ. ಆರ್‌ಸಿಬಿಯಯ ಐಪಿಎಲ್ ಮತ್ತು ಡಬ್ಯೂಪಿಎಲ್ ತಂಡಗಳ ಮಾಲೀಕತ್ವ ಹೊಂದಿರುವ ಯುಕೆ ಮೂಲದ ಮದ್ಯದ ದೈತ್ಯ ಡಿಯಾಜಿಯೊ, ಮಾರ್ಚ್ 31, 2026ರೊಳಗೆ ತನ್ನ ಫ್ರಾಂಚೈಸಿಯನ್ನು ಮಾರಾಟ ಮಾಡುವ ಪ್ರಕ್ರಿಯೆಯನ್ನ ಪ್ರಾರಂಭಿಸಿದೆ.
ಈ ಮಾಹಿತಿಯನ್ನು ನವೆಂಬರ್ 5ರಂದು ಬಹಿರಂಗಪಡಿಸಿದೆ. ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ತನ್ನ ಹೂಡಿಕೆಯ ಕಾರ್ಯತಂತ್ರದ ಪರಿಶೀಲನೆ ನಡೆಸುತ್ತಿರುವುದಾಗಿ ಡಿಯಾಜಿಯೊ ದೃಢಪಡಿಸಿತು.
"RCSPLನ ವ್ಯವಹಾರವು ಪುರುಷರ IPL ಮತ್ತು ಮಹಿಳಾ WPL ಪಂದ್ಯಾವಳಿಗಳಲ್ಲಿ ಭಾಗವಹಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತಂಡಗಳ ಮಾಲೀಕತ್ವವನ್ನ ಒಳಗೊಂಡಿದೆ" ಎಂದು ಹೇಳಿದೆ.
ಯುಎಸ್ಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪ್ರವೀಣ್ ಸೋಮೇಶ್ವರ್ ಈ ಬಗ್ಗೆ ಮಾತನಾಡಿದ್ದಾರೆ. "ಆರ್‌ಸಿಬಿ ನಮಗೆ ಮೌಲ್ಯಯುತ ಆಸ್ತಿ, ಆದರೆ ಅದು ನಮ್ಮ ಪ್ರಮುಖ ಮದ್ಯ ವ್ಯವಹಾರದ ಭಾಗವಲ್ಲ. ಈ ಹೆಜ್ಜೆ ನಮ್ಮ ದೀರ್ಘಕಾಲೀನ ಮೌಲ್ಯ ಸೃಷ್ಟಿಯ ಮೇಲಿನ ಕೇಂದ್ರೀಕರಣವನ್ನು ಹಾಗೂ ಆರ್‌ಸಿಬಿಗೆ ಉತ್ತಮವಾದುದನ್ನು ಮಾಡುವ ಬದ್ಧತೆಯನ್ನು ತೋರಿಸುತ್ತದೆ," ಎಂದು ಹೇಳಿದರು.
ಆರ್‌ಸಿಎಸ್‌ಪಿಎಲ್ ಕಂಪನಿಯು ಪುರುಷರ ಮತ್ತು ಮಹಿಳಾ ಆರ್‌ಸಿಬಿ ತಂಡಗಳನ್ನು ಹೊಂದಿದೆ. ಈಗಾಗಲೇ ಪುರುಷರ ತಂಡವು ಐಪಿಎಲ್ 2025 ಪ್ರಶಸ್ತಿಯನ್ನು ಗೆದ್ದಿದ್ದು, ಮಹಿಳಾ ತಂಡವು 2024ರಲ್ಲಿ ಡಬ್ಲ್ಯುಪಿಎಲ್ ಚಾಂಪಿಯನ್ ಆಗಿದೆ.
ಆರ್‌ಸಿಬಿ ಮಾರಾಟದ ಕುರಿತ ವದಂತಿಗಳು, 2025ರ ಜೂನ್ 4ರಂದು ಬೆಂಗಳೂರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ದುರ್ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ ಬಳಿಕ ಹೆಚ್ಚು ಹಬ್ಬಿದ್ದವು. ಇನ್ನೂ ಇದೀಗ 2026ರ ಮಾರ್ಚ್‌ನೊಳಗೆ ಆರ್‌ಸಿಬಿ ಮಾರಾಟ ಫಿಕ್ಸ್ ಎನ್ನುವ ಅಧಿಕೃತ ಮಾಹಿತಿ ಬಂದಿದೆ ಎನ್ನುವ ಬಗ್ಗೆ ವರದಿಯಾಗಿದೆ. ಇದೀಗ ಆರ್‌ಸಿಬಿ ಮಾರ್ಕೆಟಿಂಗ್ ವ್ಯಾಲ್ಯೂ ಕೂಡ ಹೆಚ್ಚಾಗಿದ್ದು, ಒಂದು ವೇಳೆ ಮಾರಾಟ ಆದರೆ, 5 ಸಾವಿಕ ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications