Rishabh Pant: ಮಕ್ಕಳ ಜೊತೆ ಗೋಲಿ ಆಡಿದ ರಿಷಬ್ ಪಂತ್; ವಿಡಿಯೋ ವೈರಲ್
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) 2024ರ ಆವೃತ್ತಿಯಲ್ಲಿ ಕ್ರಿಕೆಟ್‌ಗೆ ಮರಳಲು ಸಜ್ಜಾಗುತ್ತಿರುವ ವಿಕೆಟ್ ಕೀಪರ್- ಬ್ಯಾಟರ್ ರಿಷಬ್ ಪಂತ್, ಮಕ್ಕಳ ಜೊತೆ ಗೋಲಿ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ.
ತನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾ, ರಿಷಬ್ ಪಂತ್ ಭಾರತದ ಜನಪ್ರಿಯ ಆಟಗಳಲ್ಲಿ ಒಂದಾದ ಗೋಲಿಯೊಂದಿಗೆ ನೆರೆಹೊರೆಯ ಮಕ್ಕಳೊಂದಿಗೆ ಆಡಿ ಖುಷಿ ಪಟ್ಟರು ಮಾಡುತ್ತಿದ್ದಾನೆ.

ರಿಷಬ್ ಪಂತ್ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ 'ಗೋಲಿ' ಆಡುವ ಸ್ಟೋರಿಯನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲಿ ಅವರು ಮುಖ ಮುಚ್ಚಿಕೊಂಡು ಮಕ್ಕಳ ಜೊತೆ ಆಡುವುದನ್ನು ನೋಡಬಹುದಾಗಿದೆ.
2022ರ ಡಿಸೆಂಬರ್ 31ರಂದು ನಡೆದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ರಿಷಬ್ ಪಂತ್ ಬಳಿಕ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ಅವರು ಒಂದೇ ಒಂದು ಕ್ರಿಕೆಟ್ ಪಂದ್ಯವನ್ನು ಆಡಿಲ್ಲ. ಸುದೀರ್ಘ ವಿಶ್ರಾಂತಿ ಪಡೆದುಕೊಂಡಿರುವ ರಿಷಬ್ ಪಂತ್ ಅಭ್ಯಾಸ ಆರಂಭಿಸಿದ್ದಾರೆ. ಫಿಟ್ ಆಗಿರುವ ಅವರು ಐಪಿಎಲ್‌ನಲ್ಲಿ ಆಡಲು ಸಜ್ಜಾಗಿದ್ದಾರೆ.
Rishabh Pant playing "Golli" with kids. 😄 👌[Pant Instagram] pic.twitter.com/v2IPgrkIrw
— Johns. (@CricCrazyJohns) March 3, 2024
ಬ್ಯಾಟರ್ ಆಗಿ ಆಡಲಿರುವ ಪಂತ್
ಭಾರತದ ಮಾಜಿ ನಾಯಕ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಅವರು ಮಾರ್ಚ್ 5 ರಂದು ಎನ್‌ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ಮೂಲಕ ರಿಷಬ್ ಪಂತ್ ಅವರು ಕ್ರಿಕೆಟ್‌ಗೆ ಮರಳಲು ಫಿಟ್ ಎಂದು ಘೋಷಿಸುತ್ತಾರೆ ಎಂದು ಹೇಳಿದರು.
ಮಾರ್ಚ್ 22 ರಿಂದ ಐಪಿಎಲ್ 17 ನೇ ಆವೃತ್ತಿ ಪ್ರಾರಂಭವಾಗಲಿದ್ದು, ರಿಷಬ್ ಫಿಟ್ ಆಗಿರುವುದು ದೆಹಲಿ ಫ್ರಾಂಚೈಸಿ ಮತ್ತು ಭಾರತ ತಂಡಕ್ಕೆ ಉತ್ತಮ ಸುದ್ದಿಯಾಗಿದೆ.
ಆದಾಗ್ಯೂ, ಐಪಿಎಲ್‌ನಲ್ಲಿ ರಿಷಬ್ ಅವರನ್ನು ನೇರವಾಗಿ ವಿಕೆಟ್ ಕೀಪಿಂಗ್ ಮಾಡುವುದಿಲ್ಲ ಬರೀ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ ಎಂದು ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ.
ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರೆ ಅವರ ಫಿಟ್‌ನೆಸ್ ನೋಡಿಕೊಂಡು ಅವರನ್ನು ಟಿ20 ವಿಶ್ವಕಪ್ ಪಂದ್ಯಾವಳಿಗೆ ಭಾರತ ತಂಡಕ್ಕೆ ಆಯ್ಕೆಯಾಗುವ ಅವಕಾಶ ಕೂಡ ಹೊಂದಿದ್ದಾರೆ.












Click it and Unblock the Notifications