Suryakumar Yadav: ಜೂನಿಯರ್‌ ಎಬಿಡಿ ಫಿಟ್ನೆಸ್‌ ಬಗ್ಗೆ ಬಿಗ್‌ ಅಪ್‌ಡೇಟ್‌; ಸ್ಕೈ ಹೇಳಿದ್ದೇನು?

ಮುಂಬೈ ಇಂಡಿಯನ್ಸ್‌ ತಂಡದ ಸ್ಟಾರ್ ಆಟಗಾರ ಸೂರ್ಯಕುಮಾರ್‌ ಯಾದವ್‌ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಇವರು ಪಂಜಾಬ್‌ ವಿರುದ್ಧದ ಪಂದ್ಯದಲ್ಲೂ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾದರು. ಅಲ್ಲದೆ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಟಿ20 ವಿಶ್ವಕಪ್‌ಗೂ ಮುನ್ನ ಸ್ಕೈ ಲಯಕ್ಕೆ ಮರಳಿರುವುದು ಟೀಮ್ ಇಂಡಿಯಾಕ್ಕೆ ಬೂಸ್ಟ್‌ ನೀಡಿದಂತೆ ಆಗಿದೆ.

ಐಪಿಎಲ್‌ನಲ್ಲಿ ಸೂರ್ಯಾ ಧಮಾಕೆದಾರ್ ಬ್ಯಾಟಿಂಗ್ ನಡೆಸುತ್ತಾ ಇದ್ದರೂ ಅವರ ಫಿಟ್ನೆಸ್‌ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಅವರು ಇನ್ನು 100 ಪರ್ಸೆಂಟ್‌ ಫಿಟ್ ಆಗಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇದಕ್ಕೆ ಉತ್ತರವನ್ನು ಸಹ ಅವರು ಪಂಜಾಬ್‌ ವಿರುದ್ಧದ ಪಂದ್ಯದ ಬಳಿಕ ನೀಡಿದ್ದಾರೆ.

Reaching Full Stride Suryakumar Yadav Shares Progress on Fitness Post-Surgery

ಸ್ಕೈ ಹೇಳಿದ್ದೇನು?

ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ. ನಾನು ಸಹ ಪೂರ್ಣ ಪ್ರಮಾಣದಲ್ಲಿ ಫಿಟ್ ಆಗುವ ಬಗ್ಗೆ ಯೋಚನೆ ನಡೆಸಿದ್ದೇನೆ. ನಾನು ಫೀಲ್ಡಿಂಗ್ ಮಾಡಲು ಸಹ ಆರಂಭಿಸಿದ್ದೇನೆ. ಅಭ್ಯಾಸವನ್ನು ಸಹ ಸರಿಯಾಗಿ ಮಾಡುತ್ತಿದ್ದೇನೆ. ಕೊಂಚ ನಿಧಾನವಾಗಿ ಹಾಗೂ ಅರಾಮವಾಗಿ 40 ಓವರ್‌ ಮೈದಾನದಲ್ಲಿ ಇರುವಂತೆ ನೋಡಿಕೊಳ್ಳುವೆ ಎಂದು ಸೂರ್ಯಕುಮಾರ್‌ ಯಾದವ್ ತಿಳಿಸಿದ್ದಾರೆ.

ಸೂರ್ಯಕುಮಾರ್‌ ಯಾದವ್ ಹೀಗೆ ಹೇಳಿರುವುದು ನಿಜಕ್ಕೂ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದಂತೆ ಆಗಿದೆ. ಇವರು ಸಂಪೂರ್ಣವಾಗಿ ಫಿಟ್‌ ಆದಲ್ಲಿ ಟಿ20 ವಿಶ್ವಕಪ್‌ನಲ್ಲಿ ಆರ್ಭಟವನ್ನು ನಡೆಸಬಲ್ಲರು. ಅಲ್ಲದೆ ಇವರು ಟಿ20 ವಿಶ್ವಕಪ್ ವೇಳೆಗೆ ಸೂರ್ಯಕುಮಾರ್ ಯಾದವ್ ಸಂಪೂರ್ಣ ಫಿಟ್ ಆಗಲಿದ್ದಾರೆ ಎಂದು ನಂಬಲಾಗಿದೆ.

ಸೂರ್ಯ ಪ್ರಸ್ತುತ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಆದರೆ ಅವರು ಸಂಪೂರ್ಣವಾಗಿ ಫಿಟ್ ಆಗಿಲ್ಲ. ಯಾದವ್‌ ಫೀಲ್ಡಿಂಗ್ ಮಾಡುವ ವೇಳೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಸದ್ಯ ಮುಂಬೈ ಬ್ಯಾಟಿಂಗ್ ವೇಳೆ ಸೂರ್ಯಕುಮಾರ್‌ ಅಬ್ಬರಿಸುತ್ತಿದ್ದಾರೆ.

Reaching Full Stride Suryakumar Yadav Shares Progress on Fitness Post-Surgery

ಪಂಜಾಬ್‌ ವಿರುದ್ಧ ಅಬ್ಬರ

ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಜಯ ಸಾಧಿಸುವಲ್ಲಿ ಸೂರ್ಯಕುಮಾರ್ ಯಾದವ್ ಪ್ರಮುಖ ಪಾತ್ರ ವಹಿಸಿದ್ದರು. ಪಂಜಾಬ್ ಕಿಂಗ್ಸ್ ವಿರುದ್ಧ ಸೂರ್ಯಕುಮಾರ್ ಯಾದವ್ 53 ಎಸೆತಗಳಲ್ಲಿ 78 ರನ್‌ಗಳ ಇನಿಂಗ್ಸ್ ಆಡಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ ಸೇರಿದ್ದವು.

ಐಪಿಎಲ್‌ನಲ್ಲಿ ಹೇಗಿದೆ ಪ್ರದರ್ಶನ

ಡೆಲ್ಲಿ ವಿರುದ್ಧ ನಿರಾಸೆ ಅನುಭವಿಸಿದ್ದ ಸೂರ್ಯ, ಆರ್‌ಸಿಬಿ ವಿರುದ್ಧ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಸಂಭ್ರಮಿಸಿದ್ದರು. ಬೆಂಗಳೂರು ವಿರುದ್ಧ 19 ಎಸೆತಗಳಲ್ಲಿ 52 ರನ್ ಗಳಿಸಿದರು. ಅವರು ತಮ್ಮ ಬಿರುಸಿನ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದ್ದರು. ಸಿಎಸ್‌ಕೆ ವಿರುದ್ಧ ತಂಡಕ್ಕೆ ಉತ್ತಮ ಕೊಡುಗೆ ನೀಡುವಲ್ಲಿ ವಿಫಲರಾದರು. ನಂತರ ಪಂಜಾಬ್ ಕಿಂಗ್ಸ್ ವಿರುದ್ಧ ಉತ್ತಮ ಕಮ್‌ಬ್ಯಾಕ್ ಮಾಡಿದ್ದಾರೆ. ವಾಸ್ತವವಾಗಿ, ಈ ಋತುವಿನಲ್ಲಿ ಇಲ್ಲಿಯವರೆಗೆ, ಸೂರ್ಯಕುಮಾರ್ ಯಾದವ್ 4 ಇನ್ನಿಂಗ್ಸ್‌ಗಳಲ್ಲಿ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಆದರೆ 2 ಇನ್ನಿಂಗ್ಸ್‌ಗಳಲ್ಲಿ ಐವತ್ತು ರನ್‌ಗಳ ಗಡಿ ದಾಟಿದೆ.

ಟಿ20 ವಿಶ್ವಕಪ್‌ಗೆ ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಟೀಂ ಇಂಡಿಯಾದ ಯಶಸ್ಸಿಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+