Get Updates
Get notified of breaking news, exclusive insights, and must-see stories!

Smriti Mandhana: ಭಾರತ ಕ್ರಿಕೆಟ್‌ ತಂಡದ ಸ್ಮೃತಿ ಮಂಧಾನ ಮದುವೆ ರದ್ದು.. ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲೇನಿದೆ?

Smriti Mandhana's Marriage Cancelled: ಭಾರತ ಕ್ರಿಕೆಟ್‌ ತಂಡದ ಉಪನಾಯಕಿ, ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಮದುವೆ ರದ್ದಾಗಿದೆ. ಈ ಬಗ್ಗೆ ಸ್ವತಃ ಮಂಧಾನ ಅವರೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಹಾಗಾದ್ರೆ ಅವರು ಇದರಲ್ಲಿ ಏನೆಲ್ಲಾ ಹೇಳಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಸ್ಮೃತಿ ಮಂಧಾನ ಅವರು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧಾರ ಮಾಡಿದ್ದರು. ಅದರಂತೆಯೇ ನವೆಂಬರ್ 23ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ವಿವಾಹ ನಡೆಯಬೇಕಿತ್ತು. ಆದರೆ, ಮಂಧಾನ ತಂದೆ ಶ್ರೀನಿವಾಸ್ ಅವರ ಅನಾರೋಗ್ಯ ಹಿನ್ನೆಲೆ ಇದನ್ನು ಮುಂದೂಡಿಕೆ ಮಾಡಲಾಗಿತ್ತು. ಆಗಿನಿಂದಲೂ ಈ ಬಗ್ಗೆ ಒಂದಲ್ಲ ಒಂದು ರೀತಿಯಲ್ಲಿ ಎದ್ದಿದ್ದ ಊಹಾಪೋಹಗಳಿಗೆ ಇದೀಗ ಸ್ವತಃ ಮಂಧಾನ ಅವರೇ ತೆರೆ ಎಳೆದಿದ್ದಾರೆ.

RCB s Smriti Mandhana Confirms Marriage Cancellation Requests Privacy for Both Families

ತಮ್ಮ ವಿವಾಹ ಮುಂದೂಡಿಕೆಯಾದ ವಿವಾಹದ ಬಗ್ಗೆ ನಂತರ ಹಲವು ರೀತಿಯ ಗೊಂದಲದ ಸುದ್ದಿಗಳು ಹರಿದಾಡುತ್ತಲಿದ್ದವು. ಇದೀಗ ಸ್ವತಃ ಸ್ಮೃತಿ ಮಂಧಾನ ಅವರೇ ಈ ಬಗ್ಗೆ ಮೌನ ಮುರಿದಿದ್ದಾರೆ. ಅವರು ಇಂದು (ಡಿಸೆಂಬರ್ 7) ತಮ್ಮ ಇನ್ಸ್ಟಾಗ್ರಾಂನಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದರು. ಹಾಗಾದ್ರೆ ಇದರಲ್ಲಿ ಏನೆಲ್ಲಾ ಹೇಳಿಕೊಂಡಿದ್ದಾರೆ ಎನ್ನುವ ಕುತೂಹಲ ಬಹುತೇಕ ಮಂದಿಯ ತಲೆಯಲ್ಲಿರುತ್ತದೆ. ಅದೆಲ್ಲದಕ್ಕೂ ಉತ್ತರ ಇಲ್ಲಿದೆ ನೋಡಿ.

ಸ್ಮೃತಿ ಮಂಧಾನ ಪೋಸ್ಟ್‌: "ಕಳೆದ ಕೆಲವು ದಿನಗಳಿಂದ ನನ್ನ ಜೀವನದ ಕುರಿತು ಸಾಕಷ್ಟು ಊಹಾಪೋಹಗಳು ಸೃಷ್ಟಿಯಾಗಿವೆ. ಈ ಸಮಯದಲ್ಲಿ ನಾನು ಮಾತನಾಡುವುದು ಮುಖ್ಯ ಎಂದು ಭಾವಿಸುತ್ತೇನೆ. ನಮ್ಮ ವಿವಾಹವನ್ನು ರದ್ದುಗೊಳಿಸಲಾಗಿದೆ ಎಂದು ನಾನು ಸ್ಪಷ್ಟಪಡಿಸುತ್ತೇನೆ. ಈ ವಿಷಯವನ್ನು ಇಲ್ಲಿಗೆ ನಿಲ್ಲಿಸಲು ಬಯಸುತ್ತೇನೆ ಮತ್ತು ನಿಮ್ಮೆಲ್ಲರೂ ಅದೇ ರೀತಿ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ. ದಯವಿಟ್ಟು ಈ ಸಮಯದಲ್ಲಿ ಎರಡೂ ಕುಟುಂಬಗಳ ಗೌಪ್ಯತೆಯನ್ನು ಗೌರವಿಸಿ ಮತ್ತು ನಮಗೆ ಮುಂದುವರಿಯಲು ಅವಕಾಶ ಮಾಡಿಕೊಡಿ," ಎಂದು ಮನವಿ ಮಾಡಿದ್ದಾರೆ.

"ನಮ್ಮೆಲ್ಲರನ್ನೂ ಒಂದು ಉದ್ದೇಶ ಮುನ್ನಡೆಸುತ್ತದೆ ಎಂದು ಭಾವಿಸುತ್ತೇನೆ. ಅದು ಯಾವಾಗಲೂ ನನ್ನ ದೇಶವನ್ನು ಪ್ರತಿನಿಧಿಸುವುದಾಗಿದೆ. ನಾನು ಭಾರತಕ್ಕಾಗಿ ದೀರ್ಘಕಾಲ ಆಡುವುದನ್ನು ಮತ್ತು ಟ್ರೋಫಿಗಳನ್ನು ಗೆಲ್ಲುವುದನ್ನು ಮುಂದುವರಿಸಲು ಭಯಸುತ್ತೇವೆ. ಅದುವೇ ನನ್ನ ಮುಂದಿನ ಗುರಿಯಾಗಿದೆ. ನಿಮ್ಮೆರಲ ಬೆಂಬಲಕ್ಕೆ ಧನ್ಯವಾದಗಳು. ಮುಂದುವರಿಯುವ ಸಮಯ ಇದು," ಎಂದು ಸ್ಮೃತಿ ಮಂಧಾನ ಅವರು ಇನ್​ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸ್ಮೃತಿ ಮಂಧಾನ ಹಾಗೂ ಪಲಾಶ್ ಮುಚ್ಚಲ್ ಅವರ ವಿವಾಹ ನವೆಂಬರ್ 27ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆಯಬೇಕಿತ್ತು. ಆದರೆ, ಸ್ಮೃತಿ ತಂದೆ ಅನಾರೋಗ್ಯ ಹಿನ್ನೆಲೆ ಮದುವೆಯನ್ನು ಮುಂದೂಡಿಕೆ ಮಾಡಲಾಗಿತ್ತು. ಆಗಿನಿಂದಲೂ ಈ ಬಗ್ಗೆ ಕೆಲವರು ಊಹಾಪೋಗಳು ಹಬ್ಬಿದ್ದವು. ಇದೀಗ, ಸ್ಮೃತಿ ಮಂಧಾನ ಅವರ ಇನ್ಸ್ಟಾಗ್ರಾಂ ಖಾತೆಯ ಪೋಸ್ಟ್‌ನಲ್ಲಿ ಮದುವೆ ರದ್ದಾಗಿರುವುದಾಗಿ ತಿಳಿಸಲಾಗಿದೆ. ಇನ್ನೂ ಇವರ ವಿವಾಹ ಮುರಿದುಬಿದ್ದ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಸದ್ಯ ಸ್ಮೃತಿ ಮಂಧಾನ ಅವರು ಭಾರತ ತಂಡ ಉಪನಾಯಕಿ ಹಾಗೂ ಐಪಿಎಲ್‌ನಲ್ಲಿ ನಾಯಕಿಯಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+