RCB vs SRH: ಇಂದಿನಿಂದ ಆದರೂ ಆರಂಭವಾಗುತ್ತಾ ಹೊಸ ಅಧ್ಯಯ; ಆರ್‌ಸಿಬಿ ಲಕ್ ಬದಲಿಸಲು ಈ ಪ್ಲೇಯರ್ ಬೇಕು
ಅನ್‌ಬಾಕ್ಸ್ ಇವೆಂಟ್‌ನಲ್ಲಿ ವಿರಾಟ್ ಕೊಹ್ಲಿ ಹೇಳಿದ ಆ ಮಾತಿಗೆ ಇನ್ನು ನಿಜವಾದ ಅರ್ಥ ಸಿಗುತ್ತಲೇ ಇಲ್ಲ. ಅಂದು ಅವರು ಹೊಸ ಅಧ್ಯಾಯ ಆರಂಭ ಎಂದು ತಿಳಿಸಿದ್ದರು. ಆದರೆ ಆರ್‌ಸಿಬಿ ಸತತ ಸೋಲು ತಂಡವನ್ನು ಮುಜುಗರಕ್ಕೆ ಈಡು ಮಾಡಿದೆ. ಅಲ್ಲದೆ ಹೊಸ ಅಧ್ಯಾಯ ಟ್ರೋಲ್‌ಗೆ ಗುರಿಯಾಗುತ್ತಿದೆ. ಸೋಮವಾರ ತಮ್ಮಲ್ಲಿರುವ ಕ್ಷಮತೆಗೆ ತಕ್ಕ ಆಟವನ್ನು ಆಡಲು ಫಾಫ್ ಡುಪ್ಲೇಸಿಸ್ ಪಡೆಗೆ ಬೆಸ್ಟ್ ಚಾನ್ಸ್..
ಬ್ಯಾಟಿಂಗ್ ಸ್ವರ್ಗ ಎಂದು ಕರೆಸಿಕೊಳ್ಳುವ ಬೆಂಗಳೂರು ಅಂಗಳದಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯ ಆರ್‌ಸಿಬಿ ತಂಡಕ್ಕೆ ಬಹು ಮುಖ್ಯವಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಮುಂದಿನ ಹಂತವನ್ನು ಪ್ರವೇಶಿಸುವ ಆಶಯವನ್ನು ಆರ್‌ಸಿಬಿ ತಂಡ ಹೊಂದಿದೆ. ಆದರೆ ತಂಡಕ್ಕೆ ಸ್ಟಾರ್ ಆಟಗಾರರು ನೆರವಾಗುತ್ತಿಲ್ಲ ಎಂಬ ನೋವು ತಂಡಕ್ಕೆ ಬಹುವಾಗಿ ಕಾಡುತ್ತಿದೆ.

ಟಾಪ್ ಆರ್ಡರ್ ಫಾರ್ಮ್‌ಗೆ ಮರಳುವುದು ಅವಶ್ಯ
ಟಾಪ್ ಆರ್ಡರ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೇಸಿಸ್ ಒಳ್ಳೆಯ ಟಚ್ ನಲ್ಲಿದ್ದಾರೆ ಇದೆ ರೀತಿಯ ಆಟವನ್ನು ಸೋಮವಾರವೂ ಮುಂದುವರೆಸುವ ಅವಶ್ಯಕತೆ ಇದೆ. ಅಂದಾಗ ಗೆಲುವಿನ ಆಸೆ ಈಡೇರಬಹುದು. ಮಧ್ಯಮ ಕ್ರಮಾಂಕದಲ್ಲಿ ರಜತ್ ಪಟೀದಾರ್ ಲಯ ಕಂಡು ಕೊಂಡಿದ್ದಾರೆ. ಇವರು ಫಾರ್ಮ್‌ಗೆ ಮರಳಿದ್ದು ತಂಡದ ಚಿಂತೆಯನ್ನು ದೂರ ಮಾಡಿದೆ.
ವಿದೇಶಿ ಆಟಗಾರರಾ ವಿಲ್ ಜಾಕ್ಸ್ ಕಳೆದ ಪಂದ್ಯದಲ್ಲಿ ಸ್ಥಿರ ಆಟದ ಪ್ರದರ್ಶನ ನೀಡುವ ಸೂಚನೆ ನೀಡಿದರು. ಆದರೆ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ತವರಿನಲ್ಲಿ ನಡೆಯುವ ಪಂದ್ಯದಲ್ಲಿ ಇವರು ಬಿಗ್ ಇನ್ನಿಂಗ್ಸ್ ಕಟ್ಟುವ ಅನಿವಾರ್ಯತೆ ಇದೆ. ಇನ್ನು ಸತತ ವೈಫಲ್ಯವನ್ನು ಅನುಭವಿಸುತ್ತಿರುವ ಗ್ಲೇನ್ ಮ್ಯಾಕ್ಸ್‌ವೆಲ್ ಅವರಿಗೆ ಬೆಂಚ್ ಕಾಯಿಸಬೇಕು. ಇವರ ಸ್ಥಾನದಲ್ಲಿ ಇನ್ನೊಬ್ಬ ದೇಶೀಯ ಆಟಗಾರನಿಗೆ ಅವಕಾಶ ನೀಡಿದರೆ ಉತ್ತಮ.
ಬಿಗುವಿನ ದಾಳಿಯೇ ಗೆಲುವಿನ ಮಂತ್ರ
ಆರ್‌ಸಿಬಿ ಕಳೆದ ಕೆಲವು ವರ್ಷಗಳಿಂದ ಅನುಭವಿಸುತ್ತಾ ಬಂದಿದ್ದ ಒಂದು ಪ್ರಾಬ್ಲಮ್ ಬೌಲಿಂಗ್ ವಿಭಾಗದ್ದಾಗಿದೆ. ಈ ಬಾರಿ ಕೊಂಚ ಬ್ಯಾಲೆನ್ಸ್ ಟೈಪ್ ಈ ವಿಭಾಗ ಕಂಡರೂ ಬೌಲರ್‌ಗಳು ಲಯಕ್ಕೆ ಮರಳಲು ಹೆಣಗಾಟ ನಡೆಸಿದ್ದಾರೆ. ಪವರ್ ಪ್ಲೇನಲ್ಲಿ ಹಾಗೂ ಡೆತ್ ಓವರ್‌ಗಳಲ್ಲಿ ರಾಶಿ ರಾಶಿ ರನ್‌ಗಳನ್ನು ಕೈ ಬಿಟ್ಟು ಪಂದ್ಯ ಸೋಲು ಕಾರಣವಾಗುತ್ತಿದ್ದಾರೆ. ದೇಶೀಯ ಬೌಲರ್‌ಗಳಾದ ಆಕಾಶ್ ದೀಪ್, ಕರ್ನಾಟಕದ ವಿಜಯ್ ಕುಮಾರ್ ವೈಶಾಖ್ ಕೊಂಚ ಪ್ರಭಾವ ಬೀರುತ್ತಿದ್ದಾರೆ.

ಮೊಹಮ್ಮದ್ ಸಿರಾಜ್ ದುಬಾರಿ ಆಗುತ್ತಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ರೋಸ್ ಟೆಪ್ಲಿ ಅವರ ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡುತ್ತಿದ್ದಾರೆ. ಇವರಿಗೆ ಲಾಕಿ ಫಾರ್ಗ್ಯುಸನ್ ಅವರು ಉತ್ತಮ ಸಾಥ್ ನೀಡಬಲ್ಲರು. ಆದರೆ ಇನ್ನು ವರೆಗೂ ಆರ್‌ಸಿಬಿ ಇವರನ್ನು ಕಣಕ್ಕೆ ಇಳಿಸಿಲ್ಲ. ಇಂದಿನ ಪಂದ್ಯದಲ್ಲಾದರೂ ಆರ್‌ಸಿಬಿ ಲಾಕಿ ಅವರನ್ನು ಕಣಕ್ಕಿಳಿಸಿದರೆ ಜಯ ಹತ್ತಿರವಾಗುತ್ತದೆ. ಇವರಿಗೆ ಡೆತ್ ಓವರ್‌ನಲ್ಲಿ ಬೌಲ್ ಮಾಡುವ ಕಲೆ ಚೆನ್ನಾಗಿ ತಿಳಿದಿದೆ.ಸೋಮವಾರ ಅಭಿಮಾನಿಗಳು ಸಹ ಹೊಸ ಅಧ್ಯಾಯದ ಕನಸಿನಲ್ಲಿದ್ದಾರೆ.












Click it and Unblock the Notifications