RCB ಕಪ್‌ ಗೆಲುವಿನ ಆಸೆ ಜೀವಂತ: 2016 ರಲ್ಲೂ ಇಂತಹದ್ದೇ ಪರಿಸ್ಥಿತಿಯಿಂದ ಪುಟಿದೆದ್ದು ಫೈನಲ್‌ ಪ್ರವೇಶಿಸಿದ್ದ ಚಾಲೆಂಜರ್ಸ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಹೀನಾಯ ಪ್ರದರ್ಶನ ನೀಡಿದೆ. ಆಡಿದ ಆರು ಪಂದ್ಯಗಳಲ್ಲಿ ಐದು ಸೋಲು ಕಂಡಿರುವ ಆರ್‌ಸಿಬಿ, ಪ್ಲೇ ಆಫ್‌ ಪ್ರವೇಶಿಸುವ ಕನಸು ದೂರ ಸರಿಯುವಂತೆ ಆಗುತ್ತಿದೆ. ಆದರೆ ಇಷ್ಟಕ್ಕೆ ಅಭಿಮಾನಿಗಳು ಹೆದರುವ ಅವಶ್ಯಕತೆ ಇಲ್ಲವೇ ಇಲ್ಲ. 2016ರಲ್ಲೂ ಆರ್‌ಸಿಬಿ ಇಂತಹದ್ದೇ ಪರಿಸ್ಥಿತಿಯಿಂದ ಪುಟಿದೆದ್ದಿತ್ತು.

ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿರುವ ಆರ್‌ಸಿಬಿ, ಪುರುಷರ ತಂಡ ಸಹ ಇದೇ ರೀತಿ ಪ್ರದರ್ಶನ ನೀಡಬೇಕು ಎಂಬ ಆಶಯ ಹೊಂದಿತ್ತು. ಆದರೆ ಆರ್‌ಸಿಬಿ ತಂಡದ ಪ್ರದರ್ಶನ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಈ ಐಪಿಎಲ್‌ನಲ್ಲಿ ಆರ್‌ಸಿಬಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರೂ ಸಹ, ಫ್ಯಾನ್ಸ್‌ ಈ ಬಾರಿ ಕಪ್‌ ನಮ್ದೇ ಎನ್ನುತ್ತಲ್ಲೇ ತಿರುಗಾಡುತ್ತಿದ್ದಾರೆ.

RCB s Cup Dream Lives On Bouncing Back from 2016 Challengers Eye Final

9ನೇ ಸ್ಥಾನ

ಈ ಬಾರಿಯ ಐಪಿಎಲ್ 2024 ಆರಂಭ ಆರ್‌ಸಿಬಿ ತಂಡಕ್ಕೆ ಬಹುವಾಗಿ ಕಾಡುತ್ತಿದೆ. ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ತಂಡ ಸತತ ಸೋಲನ್ನು ಕಂಡಿರುವ ಆರ್‌ಸಿಬಿ ಮುಂದಿನ ಹಾದಿಯನ್ನು ಕಷ್ಟವಾಗಿಸಿಕೊಂಡಿದೆ. ತಂಡದಲ್ಲಿ ಸ್ಟಾರ್‌ ಆಟಗಾರರ ಗೊಂಚಲವೇ ಇದ್ದರೂ ಆಟಗಾರರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿರುವುದು ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ.

ಐದು ಪಂದ್ಯಗಳಲ್ಲಿ ತಂಡ ಸೋಲು ಕಂಡಿದ್ದು, 2 ಅಂಕಗಳೊಂದಿಗೆ, ಅಂಕ ಪಟ್ಟಿಯಲ್ಲಿ 9ನೇ ಸ್ಥಾನ ಹೊಂದಿದೆ. ಈ ಪರಿಸ್ಥಿತಿಯಲ್ಲಿ ಆರ್‌ಸಿಬಿ ಮುಂದಿನ ಹಾದಿಯನ್ನು ಪ್ರವೇಶಿಸುವುದು ಕಷ್ಟದಂತೆ ಕಾಣುತ್ತಿದೆ. ಆದರೆ ಅಸಾಧ್ಯವಂತೂ ಅಲ್ಲವೇ ಅಲ್ಲ. ಉಳಿದ 8 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ನಂತರ ಅವರಿಗೆ ಪ್ಲೇಆಫ್‌ನ ಬಾಗಿಲು ತೆರೆಯಬಹುದು.

RCB s Cup Dream Lives On Bouncing Back from 2016 Challengers Eye Final

2016ರಲ್ಲೂ ಇದೇ ಸ್ಥಿತಿ

ಐಪಿಎಲ್ 2016 ರಲ್ಲಿ, RCB ತಂಡವು ತನ್ನ ಮೊದಲ 7 ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆದ್ದಿತ್ತು. ಆದರೆ ಇದರ ನಂತರ ತಂಡವು ಭರ್ಜರಿಯಾಗಿ ಕಮ್‌ಬ್ಯಾಕ್‌ ಮಾಡಿತ್ತು. ಉಳಿದ 7 ಪಂದ್ಯಗಳಲ್ಲಿ 5 ಅನ್ನು ಗೆಲ್ಲುವ ಮೂಲಕ ಪ್ಲೇ ಆಫ್‌ಗೆ ಅರ್ಹತೆ ಪಡೆದಿತ್ತು. ಅಲ್ಲದೆ ತಂಡ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ ಫೈನಲ್‌ನಲ್ಲಿ ಆರ್‌ಸಿಬಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 8 ರನ್‌ಗಳಿಂದ ಸೋಲನುಭವಿಸಬೇಕಾಯಿತು.

ಕೊಹ್ಲಿ ಪ್ರದರ್ಶನ

ಐಪಿಎಲ್ 2016ರಲ್ಲಿ ವಿರಾಟ್ ಕೊಹ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಐಪಿಎಲ್ 2016ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಕೊಹ್ಲಿ ಅವರಿಗೆ ಪಾತ್ರವಾಗಿದ್ದರು. ಆ ಋತುವಿನಲ್ಲಿ ಅವರು 973 ರನ್ ಗಳಿಸಿದ್ದರು. ಆ ಋತುವಿನಲ್ಲಿ ಅವರು ನಾಲ್ಕು ಶತಕಗಳನ್ನು ಗಳಿಸಿದ್ದು ವಿಶೇಷವಾಗಿತ್ತು.

ಈ ಬಾರಿಯೂ ವಿರಾಟ್‌ ಕೊಹ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಅಲ್ಲದೆ ಆರೆಂಜ್‌ ಕ್ಯಾಪ್‌ನ್ನು ಸಹ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಈ ಬಾರಿ ವಿರಾಟ್‌ ಕೊಹ್ಲಿ ಫಾರ್ಮ್‌ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಂತೂ ಸುಳ್ಳಲ್ಲವೇ ಅಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+