RCB: ಇಬ್ಬರು ವರ್ಜಿನ್‌ಗಳು.. ಅಂತ ಪೋಸ್ಟ್‌ ಮಾಡಿದ ಕಾಂಡೋಮ್ ಕಂಪನಿ!

RCB Vs PBKS: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 2025 ಟ್ವೆಂಟಿ - 20 ಕ್ರಿಕೆಟ್‌ ಟೂರ್ನಿಯು ರೋಚಕ ಹಾಗೂ ಅಂತಿಮ ಹಂತವನ್ನು ತಲುಪಿದೆ. ಈ ಬಾರಿ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ 17 ವರ್ಷಗಳ ವನವಾಸವನ್ನು ದಾಟಿ ಕಪ್‌ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಇಂದೇ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ನಡುವೆ ಪಂದ್ಯ ನಡೆಯಲಿದ್ದು. ಈ ಎರಡು ತಂಡದಲ್ಲಿ ಯಾವುದೇ ತಂಡ ಗೆದ್ದರೂ ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಎರಡೂ ತಂಡಗಳು ಎಪಿಎಲ್‌ ಟ್ರೋಫಿ ಗೆದ್ದಿಲ್ಲ. ಈ ಬಾರಿ ಆರ್‌ಸಿಬಿಯೇ ಟ್ರೋಫಿ ಗೆಲ್ಲಲಿದೆ ಎಂದು ಆರ್‌ಸಿಬಿ ಅಭಿಮಾನಿಗಳು ಹಾಗೂ ಕನ್ನಡಿಗರು ಕಾಯುತ್ತಿದ್ದಾರೆ. ಆರ್‌ಸಿಬಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇದರ ನಡುವೆ ಆರ್‌ಸಿಬಿ ಹಾಗೂ ಪಿಬಿಕೆಎಸ್‌ ನಡುವಿನ ರೋಚಕ ಪಂದ್ಯದ ಬಗ್ಗೆ Durex Condom Brand ಮಾಡಿರುವ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಆರ್‌ಸಿಬಿ ಹಾಗೂ ಪಿಬಿಕೆಎಸ್‌ ಪಂದ್ಯದ ಬಗ್ಗೆ ಕಾಂಡೋಮ್‌ ಕಂಪನಿ ಡುರೆಕ್ಸ್‌ ಮಾಡಿರುವ ಪೋಸ್ಟ್‌ಗೆ ಜನ ನಗುತ್ತಿದ್ದಾರೆ. ಈ ಕ್ರಿಯೆಟಿವಿಟಿಗೆ ಆಸ್ಕರ್‌ ಕೊಟ್ಟರೂ ಕಡಿಮೆನೇ ಅಂತ ಹೇಳುತ್ತಿದ್ದಾರೆ. ಮೊದಲ ಬಾರಿ ಯಾವಾಗಲೂ ವಿಶೇಷ.. ನೀವು ಯಾರನ್ನು ಪ್ರೀತಿಸುತ್ತಿದ್ದೀರಿ / ಈ ಎರಡು ತಂಡದಲ್ಲಿ ನಿಮ್ಮ ಮೆಚ್ಚಿನ ತಂಡ ಯಾವುದು ಎಂಬರ್ಥದಲ್ಲಿ ಪೋಸ್ಟ್‌ ಮಾಡಲಾಗಿದೆ. ಅದಕ್ಕೂ ಮುಂದುವರಿದು Durex ಮಾಡಿರುವ ಪೋಸ್ಟ್‌ ವೈರಲ್‌ ಆಗುತ್ತಿದೆ.

RCB Vs PBKS Match Durex Condom Company Posts Two Virgins Goes Viral

ಇದೀಗ ಕಾಂಡೋಮ್ ಕಂಪನಿ ಡುರೆಕ್ಸ್ ಎಂದಿನಂತೆ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ತನ್ನದೇ ಶೈಲಿಯಲ್ಲಿ ವಿಶ್‌ ಮಾಡಿದೆ. ಡುರೆಕ್ಸ್‌ನ ಪೋಸ್ಟ್‌ 18 ವರ್ಷ.. ಇಬ್ಬರು ವರ್ಜಿನ್‌ಗಳು. ಇಂದಿನ ರಾತ್ರಿ ಗೆಲ್ಲುವವರು ಯಾರು ಎಂದು ಪೋಸ್ಟ್‌ ಮಾಡಿದೆ. ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ಭರ್ಜರಿ ವೈರಲ್‌ ಆಗುತ್ತಿದ್ದು. ಕೊಡ್ರೋ ಅವಾರ್ಡು ಈ ಪೋಸ್ಟ್‌ ಮಾಡಿದವನಿಗೆ ಅಂತಿದ್ದಾರೆ ಆರ್‌ಸಿಬಿ ಫ್ಯಾನ್ಸ್‌.

Durex ಕಾಲೆಳೆದ ನೆಟ್ಟಿಗರು!

ಈ ಪೋಸ್ಟ್‌ ನೋಡಿ ನೆಟ್ಟಿಗರು Durex ಕಾಲೆಳೆದಿದ್ದಾರೆ. ಈ ಜಾಹೀರಾತಿಗಾಗಿ ಮಾರ್ಕೆಟಿಂಗ್ ತಂಡವು ಆಸ್ಕರ್ ಪ್ರಶಸ್ತಿಗೆ ಅರ್ಹವಾಗಿದೆ ಅಂತ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+