Virat Kohli and Gautam Gambhir: ಮುನಿಸು ಮರೆತು ಫ್ಯಾನ್ಸ್ ಮನಗೆದ್ದ ದಿಗ್ಗಜರು
ಆರ್‌ಸಿಬಿಯ ವಿರಾಟ್ ಕೊಹ್ಲಿ ಮತ್ತು ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ನಡುವೆ ಎಲ್ಲವೂ ಸರಿಯಾಗಿದೆ ಎಂದು ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸಾಬೀತಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದ ವರ್ಷ ಐಪಿಎಲ್ ಪಂದ್ಯದ ವೇಳೆ ಕಿರಿಕ್ ಮಾಡಿಕೊಂಡಿದ್ದ ಗಂಭೀರ್ ಈ ಬಾರಿ ಶಾಂತವಾಗಿದ್ದು, ಅಭಿಮಾನಿಗಳ ಮನಗೆದ್ದಿದ್ದಾರೆ.
ಐಪಿಎಲ್ 2024 ರ 10ನೇ ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯದ ವೇಳೆ ಇಬ್ಬರು ಪರಸ್ಪರ ತಬ್ಬುಕೊಳ್ಳುವ ಮೂಲಕ ಇಬ್ಬರ ನಡುವಿನ ಪೈಪೋಟಿ, ದ್ವೇಷದ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ

ಶುಕ್ರವಾರದ ಪಂದ್ಯಕ್ಕೆ ಮುನ್ನ ಇದು ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಕದನ ಎಂದೇ ಬಿಂಬಿಸಲಾಗಿತ್ತು. ಇಬ್ಬರೂ ಕೂಡ ಮುಂಗೋಪಿಗಳಾಗಿದ್ದು, ಮೈದಾನದಲ್ಲಿ ಹಲವು ಬಾರಿ ಕಿತ್ತಾಡಿಕೊಂಡಿದ್ದು ಇದಕ್ಕೆ ಕಾರಣ. ಆದರೆ ಈ ಬಾರಿ ಇಬ್ಬರೂ ಕೂಡ ಮುನಿಸು ಮರೆತು, ಕ್ರೀಡಾ ಮನೋಭಾವ ಮೆರೆದಿದ್ದಾರೆ.
ಇಬ್ಬರ ನಡುವಿನ ತಿಕ್ಕಾಟ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಐಪಿಎಲ್ 2023 ರ ಲೀಗ್ ಹಂತದ ಪಂದ್ಯದಲ್ಲಿ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವೆ ಜಗಳವಾಗಿತ್ತು.
ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಇಬ್ಬರ ನಡುವೆ ಶುರುವಾದ ಜಗಳ, ನಂತರ ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಗಂಭೀರ್ ಮತ್ತು ಕೊಹ್ಲಿ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಗಿತ್ತು. ಅದಾದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯಾಗಿತ್ತು.
ಅರ್ಧಶತಕ ಸಿಡಿಸಿದ ಕೊಹ್ಲಿ
ಐಪಿಎಲ್ 2024ರಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಫಾರ್ಮ್ ಮುಂದುವರೆಸಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 59 ಎಸೆತಗಳಲ್ಲಿ 4 ಬೌಂಡರಿ 4 ಸಿಕ್ಸರ್ ಸಹಿತ ಅಜೇಯ 83 ರನ್ ಗಳಿಸಿದರು. ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಆರ್ ಸಿಬಿ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿದ್ದು, ಕೆಕೆಆರ್ ತಂಡಕ್ಕೆ 183 ರನ್‌ಗಳ ಸವಾಲಿನ ಗುರಿ ನೀಡಿದೆ.












Click it and Unblock the Notifications