Get Updates
Get notified of breaking news, exclusive insights, and must-see stories!

RCB: ಕನ್ನಡಿಗ ಮಯಾಂಕ್ ಅಗರ್ವಾಲ್ ಸೇರಿ ಐವರು ಸ್ಟಾರ್ ಆಟಗಾರರು ಆರ್‌ಸಿಬಿಯಿಂದ ಔಟ್..

RCB: ಐಪಿಎಲ್ 2025 ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಭರ್ಜರಿಯಾಗಿ ಗೆದ್ದು ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಇದೀಗ ಎಲ್ಲರ ಚಿತ್ತ ಸೀಸನ್‌ 19 ರತ್ತ ನೆಟ್ಟಿದೆ. ಈ ನಡುವೆಯೇ ಇದೀಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಕನ್ನಡಿ ಮಯಾಂಕ್‌ ಅಗರ್ವಾಲ್ ಸೇರಿದಂತೆ ಐವರು ಸ್ಟಾರ್ ಆಟಗಾರರನ್ನು ಕೈಬಿಡಲು ನಿರ್ಧರಿಸಿದೆ ಎನ್ನುವ ಶಾಕಿಂಗ್‌ ಸಂಗತಿಯೊಂದು ಹೊರಬಿದ್ದಿದೆ. ಹಾಗಾದ್ರೆ ಯಾರೆಲ್ಲಾ ಈ ಸಾಲಿನಲ್ಲಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಆರ್‌ಸಿಬಿಯು ಆಡಿದ 17 ಆವೃತ್ತಿಯಲ್ಲೂ ಒಂದೇ ಒಂದು ಟ್ರೋಫಿ ಗೆದ್ದಿರಲಿಲ್ಲ. ಆದರೆ, 18ನೇ ಆವೃತ್ತಿಯ ಫೈನಲ್‌ನಲ್ಲಿ ಭರ್ಜರಿಯಾಗಿ ಗೆಲವು ಸಾಧಿಸುವ ಮೂಲಕ ಟ್ರೋಫಿ ಇಲ್ಲ ಎನ್ನುವ ಕೊರಗಿಗೆ ತೆರೆ ಎಳೆಯಿತು. ಇದರ ಬೆನ್ನಲ್ಲೇ ಇದೀಗ 2026ರ ಐಪಿಎಲ್‌ ಮಿನಿ ಹರಾಜಿಗೂ ಮುನ್ನ ಕಳೆದ ಬಾರಿ ಟ್ರೋಫಿ ಗೆಲುವಿಗೆ ಕಾರಣರಾದ ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಸೇರಿದಂತೆ ಐವರು ಸ್ಟಾರ್ ಆಟಗಾರರನ್ನು ಆರ್‌ಸಿಬಿ ಕೈಬಿಡುವ ಸಾಧ್ಯತೆಯಿದೆ ಎನ್ನುವ ಶಾಕಿಂಗ್ ವಿಚಾರ ಹೊರಬಿದ್ದಿದೆ.

RCB to Release Five Star Players Including Mayank Agarwal Ahead of IPL 2026 Mini Auction

ಹೌದು.. ಆರ್‌ಸಿಬಿಯು 2025ರ ಐಪಿಎಲ್ ಟ್ರೋಫಿ ಗೆಲ್ಲಲು ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಅವರ ಕೊಡುಗೆ ಕೂಡ ಅಪಾರವಾಗಿದೆ. ಇದೀಗ ಅವರನ್ನು ಫ್ರಾಂಚೈಸಿ ಕೈಬಿಡಲು ನಿರ್ಧಾರ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಆರ್‌ಸಿಬಿ 2025ರ ವರೆಗೂ ಯಾರನ್ನು ಯಾವ ಸ್ಥಾನದಲ್ಲಿ ಆಡಿಸಬೇಕು ಎನ್ನುವ ಗೊಂದದಲ್ಲಿತ್ತು.

ಆದರೆ, ಕೊನೆಗೂ 2025ರಲ್ಲಿ ಬ್ಯಾಟಿಂಗ್‌, ಬೌಲಿಂಗ್ ಎರಡು ವಿಭಾಗದಲ್ಲೂ ಉತ್ತಮ ಲಯ ಕಂಡುಕೊಳ್ಳುವ ಮೂಲಕ ಅದೇ ತಂಡ ಫಿಕ್ಸ್‌ ಆಗಿದೆ. ಇದರಿಂದ ತಂಡ ಬದಲಾಯಿಸುವ ಯೋಚನೆಗೂ ಪ್ರಾಂಚೈಸಿ ನಿರ್ಧಾರ ಮಾಡಿಲ್ಲ. ಆದರೆ, ಇರುವ ಕೆಲ ಆಟಗಾರರನ್ನೇ ಬಿಡುಗಡೆಗೊಳಿಸುವ ಚಿಂತನೆಯಲ್ಲಿದೆ ಎಂದು ವರದಿಯಾಗಿದೆ. ಈ ಸಾಲಿನಲ್ಲಿ ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಕೂಡ ಇದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಯಾಂಕ್‌ ಅಗರ್ವಾಲ್: ಐಪಿಎಲ್ 2025ರಲ್ಲಿ ದೇವದತ್ ಪಡಿಕ್ಕಲ್ ಗಾಯಗೊಂಡು ಹೊರಗುಳಿದ ಕಾರಣ ಅವರ ಬದಲಿಯಾಗಿ ಮತ್ತೊಬ್ಬ ಕನ್ನಡಿದ ಮಯಾಂಕ್ ಅಗರ್ವಾಲ್ ಅವರನ್ನು ಒಪ್ಪಂದ ಮಾಡಿಕೊಂಡು ಕಣಕ್ಕಿಳಿಸಿತು. ಪಂದ್ಯಾವಳಿಯಿಂದ ಹೊರಗುಳಿಯುವ ಮೊದಲು ಪಡಿಕ್ಕಲ್ ಉತ್ತಮ ಫಾರ್ಮ್‌ನಲ್ಲಿದ್ದರು. ಅವರು ಆಡಿದ 10 ಪಂದ್ಯಗಳಲ್ಲಿ ಎರಡು ಅರ್ಧಶತಕಗಳ ಸಹಾಯದಿಂದ 247 ರನ್ ಕಲೆಹಾಕಿದರು.

ಇನ್ನೂ ದೇವದತ್ ಪಡಿಕ್ಕಲ್‌ ಬದಲಿಗೆ ಕಣಕ್ಕಿಳಿದ ಕನ್ನಡಿದ ಮಯಾಂಕ್ ಅಗರ್ವಾಲ್‌ ಅವರು ಆರ್‌ಸಿಬಿ ಪರ ಕೇವಲ 4 ಪಂದ್ಯಗಳನ್ನು ಆಡಿದ್ದು, ಸರಾಸರಿ 31.66 ಮತ್ತು 148.43ರ ಸ್ಟ್ರೈಕ್ ರೇಟ್‌ನೊಂದಿಗೆ 94 ರನ್ ಗಳಿಸಿದರು. ಇನ್ನೂ ಮುಂದಿನ 19ನೇ ಸೀಸನ್‌ನಲ್ಲಿ ಪಡಿಕ್ಕಲ್ ಮರಳುವ ನಿರೀಕ್ಷೆಯಿದೆ. ಆದ್ದರಿಂದ ಐಪಿಎಲ್ 2026ರ ಹರಾಜಿಗೆ ಮುನ್ನ ಮಯಾಂಕ್ ಅವರನ್ನು ಬಿಡುಗಡೆಗೊಳಿಸು ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇನ್ನು ಈ ಹಿಂದೆ ಬೇರೆ ಫ್ರಾಂಚೈಸಿಗಳಿಗಾಗಿ ಆಡಿರುವ ಮಯಾಂಕ್ ಅಗರ್ವಾಲ್, ಇದುವರೆಗೆ 131 ಐಪಿಎಲ್ ಪಂದ್ಯಗಳಲ್ಲಿ 22.96 ಸರಾಸರಿ ಮತ್ತು 133.52 ಸ್ಟ್ರೈಕ್ ರೇಟ್‌ನೊಂದಿಗೆ 2,756 ರನ್‌ಗಳನ್ನು ಕಲೆಹಾಕಿದ್ದಾರೆ. ಒಂದು ವೇಳೆ ದೇವದತ್ ಪಡಿಕ್ಕಲ್‌ ಅಲಭ್ಯರಾದಲ್ಲಿ ಮತ್ತೆ ಇವರನ್ನು ಮುಂದುವರೆಸುವ ಸಾಧ್ಯತೆಯಿದೆ ಅಂತಲೂ ಹೇಳಲಾಗುತ್ತಿದೆ.

ಲುಂಗಿ ಎನ್‌ಗಿಡಿ: ಐಪಿಎಲ್ 2025ರಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್‌ಗಿಡಿ ಅವರನ್ನು ಆರ್‌ಸಿಬಿ 1 ಕೋಟಿ ರೂಪಾಯಿಗೆ ಖರೀದಿಸಿತು. ಗಾಯಗೊಂಡ ಜೋಶ್ ಹ್ಯಾಜಲ್‌ವುಡ್ ಅನುಪಸ್ಥಿತಿಯಲ್ಲಿ ಎನ್‌ಗಿಡಿ ಕೇವಲ ಎರಡು ಪಂದ್ಯಗಳನ್ನು ಆಡಿ ನಾಲ್ಕು ವಿಕೆಟ್‌ಗಳನ್ನು ಪಡೆದರು. ಇನ್ನು ಆರ್‌ಸಿಬಿ ನಿರ್ವಹಣೆ ಕಾರಣ 2026ರ ಐಪಿಎಲ್‌ ಮಿನಿ ಹರಾಜಿಗೂ ಮುನ್ನ ಎನ್‌ಗಿಡಿ ಅವರನ್ನು ಬಿಡುಗಡೆಗೊಳಿಸುವ ಸಾಧ್ಯತೆಯಿದೆ.

ಲಿಯಾಮ್ ಲಿವಿಂಗ್‌ಸ್ಟೋನ್: ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಆರ್‌ಸಿಬಿ 8.75 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿತು. ಆದರೆ, ಇಟ್ಟುಕೊಂಡಿದ್ದ ನಿರೀಕ್ಷೆಯಷ್ಟು ಅವರಿಂದ ಉತ್ತಮ ಪ್ರದರ್ಶನ ಕಂಡುಬರಲಿಲ್ಲ. 10 ಪಂದ್ಯಗಳಲ್ಲಿ ಕೇವಲ 112 ರನ್ ಗಳಿಸಿ, ಬರೀ ಎರಡು ವಿಕೆಟ್‌ಗಳನ್ನು ಮಾತ್ರ ಪಡೆದರು.

ಆದ್ದರಿಂದ ಟೂರ್ನಮೆಂಟ್‌ನ ಮಧ್ಯದಲ್ಲೇ ಅವರನ್ನು ಆರ್‌ಸಿಬಿಯ ಆಡುವ 11ರ ಬಳಗದಿಂದ ಕೈಬಿಡಲಾಯಿತು. ಬಳಿಕ ನಾಕೌಟ್‌ಗಳ ಸಮಯದಲ್ಲಿ ಗಾಯಗೊಂಡ ಟಿಮ್ ಡೇವಿಡ್ ಬದಲಿಗೆ ಅವರನ್ನು ಆಡಿಸಲಾಯಿತು. ಆದರೆ ಅವರು ಅಂದುಕೊಂಡಷ್ಟು ಪ್ರದರ್ಶನ ತೋರದ ಕಾರಣ ಈ ಬಾರಿ ಕೈಬಿಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

ರಸಿಕ್ ದಾರ್ ಸಲಾಂ: ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ ರಸಿಕ್ ಸಲಾಂ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ಕೋಟಿ ರೂಪಾಯಿಗೆ ಖರೀದಿಸಿತು. ಆದರೂ ಅವರು ಐಪಿಎಲ್ 2025ರ ಋತುವಿನಲ್ಲಿ ಅವರು ಕೇವಲ 2 ಪಂದ್ಯಗಳನ್ನು ಆಡಿದರು. ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್ ಮತ್ತು ಇತರ ವೇಗಿಗಳ ಉಪಸ್ಥಿತಿಯಲ್ಲಿ ಪ್ಲೇಯಿಂಗ್ XIನಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವುದು ತುಂಬಾ ಕಷ್ಟಕರವಾಗಿತ್ತು.

ಅಲ್ಲದೆ, ಅವರ ಹೆಚ್ಚಿನ ಸಂಬಳ ಮತ್ತು ಕಡಿಮೆ ಉಪಯುಕ್ತತೆಯನ್ನು ಗಮನದಲ್ಲಿಟ್ಟುಕೊಂಡು, ಐಪಿಎಲ್ 2026ರ ಹರಾಜಿನ ಸಮಯದಲ್ಲಿ ಬಿಡುಗಡೆಗೊಳಿಸಲಿದ್ದು, ಅವರ ಬದಲಿಗೆ ಮತ್ತೊಬ್ಬ ವೇಗಿಯನ್ನು ಆಯ್ಕೆ ಮಾಡಲು ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಸ್ವಪ್ನಿಲ್ ಸಿಂಗ್: ಐಪಿಎಲ್ 2024ರಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ, ಆರ್‌ಸಿಬಿ ಎಡಗೈ ಸ್ಪಿನ್ನರ್ ಮತ್ತು ಕೆಳ ಕ್ರಮಾಂಕದ ಬಲಗೈ ಬ್ಯಾಟ್ಸ್‌ಮನ್ ಸ್ವಪ್ನಿಲ್ ಸಿಂಗ್ ಅವರನ್ನು 2025ರ ಸೀಸನ್‌ಗೆ ಮುಂಚಿತವಾಗಿ 50 ಲಕ್ಷ ರೂಪಾಯಿ ಕೊಟ್ಟು ಉಳಿಸಿಕೊಂಡಿತು. ಆದರೂ, ಐಪಿಎಲ್ 2025 ಸೀಸನ್‌ನಲ್ಲಿ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ. ಇದೇ ಕಾರಣದಿಂದ ಅವರನ್ನು ಐಪಿಎಲ್ 2026 ಹರಾಜಿಗೂ ಮುನ್ನ ಬಿಡುಗಡೆಗೊಳಿಸುವ ಸಾಧ್ಯತೆಯಿದೆ.

ಆರ್‌ಸಿಬಿ 2025ರ ಐಪಿಎಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. ಈ ಮೂಲಕ ಬರೋಬ್ಬರಿ 18 ವರ್ಷಗಳ ಬಳಿಕ ಚೊಚ್ಚಲ ಟ್ರೋಫಿ ಗೆಲ್ಲುವ ಮೂಲಕ ಅಭಿಮಾನಿಗಳ ಕನಸನ್ನು ನನಸು ಮಾಡಿದೆ. ಉತ್ತಮ ತಂಡ ಹೊಂದಿರುವ ಆರ್‌ಸಿಬಿ 2026ರ ಐಪಿಎಲ್‌ ಟೂರ್ನಿಯಲ್ಲೂ ಟ್ರೋಫಿ ಗೆಲ್ಲುವ ಭರವಸೆ ಹುಟ್ಟುಹಾಕಿದೆ. ಅದರಂತೆಯೇ ಮಿನಿ ಹರಾಜಿಗೆ ಎಲ್ಲಾ ಟೀಂಗಳಂತೆ ಭರ್ಜರಿ ಸಿದ್ಧತೆ ನಡೆಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+