RCB: ಆರ್‌ಸಿಬಿ ನಾಯಕನ ರೇಸ್‌ನಲ್ಲಿ ಮೂವರು ಪ್ರಬಲ ಆಟಗಾರರು.!
Royal Challengers Bengaluru: ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಐಪಿಎಲ್ 2025ರ ಮೆಗಾ ಹರಾಜಿಗೆ ಕೆಲವೇ ದಿನಗಳಷ್ಟೇ ಬಾಕಿಯಿವೆ. ಇನ್ನು ಆರ್‌ಸಿಬಿ ವಿಚಾರಕ್ಕೆ ಬಂದರೆ, ಇಲ್ಲಿನ ಫ್ರಾಂಚೈಸಿ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ. ಮತ್ತೊಂದೆಡೆ ತಂಡ ಇದೀಗ ಚಾಣಕ್ಷ ನಾಯಕನ ಹುಡುಕಾಟದಲ್ಲಿದೆ. ಈ ಸರದಿಯಲ್ಲಿ ಮೂವರು ಸ್ಟಾರ್ ಆಟಗಾರಿದ್ದಾರೆ.
ಐಪಿಎಲ್ 2025ರ ಮೆಗಾ ಹರಾಜಿಗೆ 10 ಫ್ರಾಂಚೈಸಿಗಳು ಭರ್ಜರಿ ಸಿದ್ಧತೆಯನ್ನು ಮಾಡಿಕೊಂಡಿವೆ. ನವೆಂಬರ್ 24-25 ರಂದು ಜೆಡ್ಡಾದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡೆದಿರುವ 17 ಆವೃತ್ತಿಗಳಲ್ಲೂ ಕಪ್ ಗೆದ್ದಿಲ್ಲ. ಆದರೆ ಈ ಬಾರಿ 18ನೇ ಆವೃತ್ತಿಯಲ್ಲಿ ಶತಾಯಗತಾಯ ಕಪ್ ಗೆದ್ದೇ ಗೆಲ್ಲಬೇಕೆನ್ನುವ ಹಠದಲ್ಲಿ ಆರ್‌ಸಿಬಿ ಇದೆ.

2022ರಲ್ಲಿ ಆರ್‌ಸಿಬಿ ಗ್ಲೇನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸೀರಾಜ್, ವಿರಾಟ್ ಕೊಹ್ಲಿಯಷ್ಟೇ ಉಳಿಸಿಕೊಂಡ ಇನ್ನು ಮಿಕ್ಕಿದವರನ್ನೆಲ್ಲ ಕೈಬಿಟ್ಟಿತ್ತು. ಇದೀಗ 2025ನೇ ಆವೃತ್ತಿಗೆ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್ ಅವರನ್ನು ಮಾತ್ರ ಉಳಿಸಿಕೊಂಡು ಇನ್ನೆಲ್ಲ ಪ್ಲೇಯರ್ಸ್‌ಗಳನ್ನು ಕೈಬಿಟ್ಟಿದೆ.
ಇದೀಗ ಆರ್‌ಸಿಬಿ ವಿಕೇಟ್ ಕೀಪರ್ ಮತ್ತು ನಾಯಕನಿಗಾಗಿ, ಬ್ಯಾಟ್ಸ್‌ಮನ್‌ಗಾಗಿ ಹುಡುಕಾಟ ನಡೆಸುತ್ತಿದೆ. ಈ ಪಟ್ಟಿಯಲ್ಲಿ ಕೆ.ಎಲ್.ರಾಹುಲ್, ರಿಷಬ್ ಪಂತ್, ಇಶಾನ್ ಕಿಶನ್ ಸೇರಿದಂತೆ ಹಲವು ಪ್ರಬಲ ಹೆಸರುಗಳು ಕೇಳಿಬಂದಿವೆ. ಅದರಲ್ಲೂ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಮತ್ತು ರಿಷಬ್ ಪಂತ್ ಐಪಿಎಲ್ 2025ರಲ್ಲಿ ಆರ್‌ಸಿಬಿಯನ್ನು ಮುನ್ನಡೆಸುವ ಸ್ಪರ್ಧಿಗಳಾಗಬಹುದು ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಇನ್ನು ಈ ಮೂವರಲ್ಲಿ ಫಾಫ್ ಡು ಪ್ಲೆಸಿಸ್ ನಂತರ ನಾಯಕ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂದು ಕಾದುನೋಡಬೇಕಿದೆ.
ಅದರಲ್ಲೂ ವಿಕೆಟ್ ಕೀಪರ್, ಬ್ಯಾಟರ್ ರಿಷಬ್ ಪಂತ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಯಕನನ್ನಾಗಿ ಮಾಡುವ ಮಾಡುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಮೆಗಾ ಹರಾಜಿನ ಮೊದಲು ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಕೈಬಿಟ್ಟಿದೆ. ರಿಷಬ್ ಪಂತ್ ಐಪಿಎಲ್ 2024ರಲ್ಲಿ ಡೆಲ್ಲಿ ತಂಡಕ್ಕೆ ನಾಯಕರಾಗಿದ್ದರು. ಆದರೆ, ಕಪ್ ಗೆಲ್ಲುವಲ್ಲಿ ವಿಫಲರಾದರು ಎಂಬುದು ಗಮನಿಸಬೇಕಾದ ವಿಚಾರವಾಗಿದೆ.
ಇದರ ನಡುವೆ ಆರ್‌ಸಿಬಿ ತಂಡ ರಿಷಬ್ ಪಂತ್ ಅವರ ಉತ್ತಮ ಪ್ರದರ್ಶನವನ್ನು ಗುರುತಿಸುವ ಮೂಲಕ ಅವರನ್ನೇ ನಾಯಕನ ಸ್ಥಾನಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಪಂತ್ ಇದುವರೆಗೆ 111 ಐಪಿಎಲ್ ಪಂದ್ಯಗಳನ್ನು ಆಡಿದ್ದು, 3,284 ರನ್ ಗಳಿಸಿದ್ದಾರೆ. ಈ ಮೂಲಕ ಅವರು 35.31 ಸರಾಸರಿಯನ್ನು ಕಾಯ್ದುಕೊಂಡಿದ್ದಾರೆ ಎಂಬುದನ್ನು ಗಮನಿಸಲೇಬೇಕಾದ ಸಂಗತಿಯಾಗಿದೆ.
ಇದೀಗ ಆರ್‌ಸಿಬಿ ಬಳಿ 83 ಕೋಟಿ ರೂಪಾಯಿ ಇದ್ದು, ಸೂಕ್ತ ನಾಯಕನಿಗಾಗಿ ಹುಡುಕಾಟ ನಡೆಸುತ್ತಿದೆ. ಈ ಸರದಿಯಲ್ಲಿ ಪಂತ್ ಇದ್ದಾರೆ ಎನ್ನುವ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿವೆ.
-
Virat Kohli: ಘನತೆಗೆ ತಕ್ಕ ಆಟ ಇಲ್ಲ; ವಿರಾಟ್ ಕೊಹ್ಲಿ ಬದಲಿಗೆ ಬೆಥೆಲ್ ಆಡಿಸುವ ಸೂಚನೆ ನೀಡಿದ್ರಾ ಭಾರತದ ಮಾಜಿ ಕ್ರಿಕೆಟಿಗ? -
ಸುಮ್ನೆ ಬಾಲ್ ಕೊಡೋ ಮಾರಾಯ.. ನಾ ಕೊಡಕಿಲ್ಲ ಏನ್ ಮಾಡ್ತೀರಾ? ಟಿಮ್ ಡೇವಿಡ್-ಅಂಪೈರ್ ಫನ್ನಿ ವಿಡಿಯೋ ಭಾರೀ ವೈರಲ್ -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್‌ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಆರ್‌ಸಿಬಿ ಗೆಲುವಿನ ಸಂಭ್ರಮದಲ್ಲಿ ಮುಳುಗಿದ ಅನುಷ್ಕಾ-ಅನನ್ಯಾ ಬಿರ್ಲಾ: ನೆಟ್ಟಿಗರ ಮನಗೆದ್ದ ಆ ಹ್ಯಾಂಡ್ಶೇಕ್ ವಿಡಿಯೋ -
ಬೆಂಗಳೂರಲ್ಲಿ RCB ಪಂದ್ಯ: ಏ.15ರಂದು ಸ್ಟೇಡಿಯಂ ಸುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು











Click it and Unblock the Notifications