RCB vs DC: ಡೆಲ್ಲಿನ ಗಿಲ್ಲಿ ಮಾಡಿ, ಊರಾಚೆ ಬಿಸಾಡಿದ ಆರ್‌ಸಿಬಿ ಆಟಗಾರರು!

2025ರ ಐಪಿಎಲ್ ಕಪ್ ಆರ್‌ಸಿಬಿ ತಂಡಕ್ಕೆ ಅನ್ನೋದು ಭಗವಂತನ ಕೈಯಲ್ಲೇ ಫಿಕ್ಸ್ ಆಗಿದೆ ಅಂತಾ ಕಾಣ್ತಿದೆ. ಯಾಕಂದ್ರೆ ಆರ್‌ಸಿಬಿ ತಂಡ ಭರ್ಜರಿಯಾಗಿ ಸಾಲು ಸಾಲು ಗೆಲುವು ಕಂಡು ಮುಂದೆ ನುಗ್ಗುತ್ತಿದೆ. ಅದರಲ್ಲೂ ಬೆಂಗಳೂರಿಗೆ ಬಂದು ಜಾಸ್ತಿ ಕೊಬ್ಬು ತೋರಿಸಿ ಅಹಂಕಾರ ಮೆರೆದ ತಂಡಗಳ ಹೆಡಮುರಿ ಕಟ್ಟುತ್ತಿದ್ದಾರೆ ಬೆಂಗಳೂರು ಬಾಯ್ಸ್. ಹೀಗಿದ್ದಾಗಲೇ, ಡೆಲ್ಲಿನ ಗಿಲ್ಲಿ ಮಾಡಿ, ಊರಾಚೆ ಬಿಸಾಡಿದ ಆರ್‌ಸಿಬಿ ಆಟಗಾರರು!

ಬೆಂಗಳೂರು ತಂಡ ಆರ್‌ಸಿಬಿ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದುಕೊಂಡಿದೆ, ಇದು ದೇವರು ಕೊಟ್ಟ ವರ ಅಂತಾರೆ ಕನ್ನಡಿಗರು. ಅದರಲ್ಲೂ ಬೆಂಗಳೂರು ತಂಡ ಆರ್‌ಸಿಬಿಯ ಎದುರು ಯಾರೇ ಕಿರಿಕ್ ಮಾಡಿಕೊಂಡರೂ, ಬಡ್ಡಿ ಸಮೇತ ವಾಪಸ್ ಕೊಡುವುದು ನಮ್ಮ ಬೆಂಗಳೂರು ಬಾಯ್ಸ್ ಅಭ್ಯಾಸ ಮಾಡ್ಕೊಂಡಿದ್ದಾರೆ. ಬೆಂಗಳೂರಿಗೆ ಬಂದು ಬೇಜಾನ್ ಎಗರಾಡಿ & ಕೂಗಾಡಿ ಹೋಗಿದ್ದ ದೆಹಲಿ ಆಟಗಾರರಿಗೆ ಇವತ್ತು ಸರಿಯಾಗೇ ಶಾಸ್ತಿ ಆಗಿತ್ತು. ಡೆಲ್ಲಿನ ಗಿಲ್ಲಿ ಮಾಡಿದ್ದ ಆರ್‌ಸಿಬಿ ಆಟಗಾರರು ಚಿನ್ನಿದಾಂಡು ಆಡಿಬಿಟ್ಟರು...

RCB Team Won Against Delhi Capitals And This Is The Speciality Of This Match

ಡೆಲ್ಲಿನ ಗಿಲ್ಲಿ ಮಾಡಿ, ಊರಾಚೆ ಬಿಸಾಡಿದರು...

ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಇದು ಬೆಂಗಳೂರಿಗರ ಹೃದಯ ಬಡಿತವೇ ಆಗಿ ಹೋಗಿದೆ. ಹೀಗಿದ್ದಾಗ ಆರ್‌ಸಿಬಿ ತಂಡವನ್ನ ಕೆಣಕಿದರೆ ಉಳಿಗಾಲ ಇಲ್ಲ ಎನ್ನಬಹುದು. ಈಗಾಗಲೇ ಹಲವು ಕ್ರಿಕೆಟ್ ಪ್ಲೇಯರ್ಸ್ ಆರ್‌ಸಿಬಿ ಸಹವಾಸಕ್ಕೆ ಬಂದು, ಐಪಿಎಲ್ ಬಿಟ್ಟು ಓಡಿ ಹೋಗಿದ್ದಾರೆ. ಹೀಗಿದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹವಾಸಕ್ಕೆ ಬಂದಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಹಾಗೂ ದೆಹಲಿ ಕ್ಯಾಪಿಟಲ್ಸ್ ತಂಡಕ್ಕೆ ಭಾನುವಾರ ಯಾವ ಸ್ಥಿತಿ ಆಗಿದೆ ಗೊತ್ತಾ?

ಆರ್‌ಸಿಬಿ ತಂಡ ಟಾಸ್ ಗೆದ್ದರೂ ದೆಹಲಿ ವಿರುದ್ಧ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು ಪಕ್ಕಾ ಪ್ಲಾನ್ ಮಾಡಿ ಅಖಾಡಕ್ಕೆ ಎಂಟ್ರಿ ಕೊಟ್ಟಿತ್ತು. 20 ಓವರ್ ಆಡಿದ ದೆಹಲಿ ತಂಡದ ಆಟಗಾರರು, 162 ರನ್ ಬಾರಿಸಲು ತಿಣುಕಾಡಿದರು. ಕೆಎಲ್ ರಾಹುಲ್ 41 ರನ್ ಗಳಿಸಿದ್ದು ಬಿಟ್ಟರೆ ದೆಹಲಿ ತಂಡದ ಬೇರೆ ಯಾವುದೇ ಆಟಗಾರ ಕೂಡ ಕೆಮ್ಮಲಿಲ್ಲ. ಆರ್‌ಸಿಬಿ ಭರ್ಜರಿ ಬೌಲಿಂಗ್ ದಾಳಿಗೆ ದೆಹಲಿ ತಂಡ ಉಡೀಸ್ ಆಗಿ ಹೋಗಿತ್ತು. ಹೀಗೆ, 163 ರನ್ ಗುರಿಯನ್ನ ಬೆನ್ನುಹತ್ತಿದ್ದ ಆರ್‌ಸಿಬಿ ತಂಡ ಆರಂಭದಲ್ಲೇ ಭಾರಿ ದೊಡ್ಡ ಆಘಾತವನ್ನೇ ಎದುರಿಸಿತ್ತು.

ಆರ್‌ಸಿಬಿ ಎದುರು ದೆಹಲಿ ಉಡೀಸ್!

163 ರನ್ ಸುಲಭದ ಗುರಿಯನ್ನು ಆರಾಮವಾಗಿ ಬಾರಿಸಲು ಆರ್‌ಸಿಬಿ ತಂಡ ಎಂಟ್ರಿಯನ್ನ ಕೊಟ್ಟಿತ್ತು. ಆದರೆ, 20 ರನ್‌ಗೆ ದಿಢೀರ್ 2 ವಿಕೆಟ್ ಕಳೆದುಕೊಂಡು ಪರದಾಡುವ ಪರಿಸ್ಥಿತಿ ಆರ್‌ಸಿಬಿಗೆ ಎದುರಾಗಿತ್ತು. ಕೊನೆಗೆ ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಕೂಡ ಕೇವಲ 6 ರನ್ ಗಳಿಸಿ ಔಟ್ ಆಗಿ ಪೆವಿಲಿಯನ್ ಸೇರಿದರು. ಆಗಲೇ ನೋಡಿ ಹೀರೋ ರೀತಿ ಎಂಟ್ರಿ ಕೊಟ್ಟಿದ್ದು ಕೃನಾಲ್ ಪಾಂಡ್ಯ.

ಹೀಗೆ ವಿರಾಟ್ ಕೊಹ್ಲಿಗೆ ಸಾಥ್ ನೀಡಿದ ಕೃನಾಲ್ ಪಾಂಡ್ಯ ಭರ್ಜರಿಯಾಗಿ 47 ಬಾಲ್ ಆಡಿ 4 ಸಿಕ್ಸರ್ ಸಹಿತ 73 ರನ್ ಚಚ್ಚಿದರು. ಈ ಮೂಲಕ ಮತ್ತೊಂದು ಬದಿಯಲ್ಲಿ ವಿರಾಟ್ ಕೊಹ್ಲಿ 51 ರನ್ ಗಳಿಸಿ ಆರ್‌ಸಿಬಿ ಗೆಲುವಿನ ದಡ ಸೇರಲು ನೆರವಾದರು. 18.3 ಓವರ್‌ಗೆ 165 ರನ್ ಚಚ್ಚಿದ ಆರ್‌ಸಿಬಿ 6 ವಿಕೆಟ್ ಅಂತರದಲ್ಲಿ ಗೆದ್ದು ಬೀಗಿತ್ತು. ಈ ಮೂಲಕ ಡೆಲ್ಲಿನ ಗಿಲ್ಲಿ ಮಾಡಿ, ಊರಾಚೆ ಬಿಸಾಡಿದರು ಆರ್‌ಸಿಬಿ ಆಟಗಾರರು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+