RCB IPL 2026: ಐಪಿಎಲ್ 2026ಕ್ಕೆ ಆರ್‌ಸಿಬಿ ಟೀಂ ಹೇಗಿರಲಿದೆ ಗೊತ್ತಾ? ಇಲ್ಲಿದೆ ಮಾಹಿತಿ
RCB IPL 2026: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದು ಚೊಚ್ಚಲ ಟ್ರೋಫಿ ಗೆದ್ದಿದೆ. ಇದೀಗ ಎಲ್ಲರ ಚಿತ್ತ 19ನೇ ಆವೃತ್ತಿಯತ್ತ ನೆಟ್ಟಿದೆ. ಈ ನಡುವೆಯೇ ಮುಂದಿನ ಬಾರಿ ಅಂದರೆ 2026ಕ್ಕೆ ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಹಾಗಾದ್ರೆ, ಯಾರೆಲ್ಲಾ ಇರಲಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಎಲ್ಲಾ ಬಾರಿ ಆರ್‌ಸಿಬಿಯಲ್ಲಿ ಯಾರನ್ನು ಉಳಿಸಿಕೊಳ್ಳಬೇಕು, ಯಾರನ್ನು ಯಾವ ಪ್ಲೇಸ್‌ನಲ್ಲಿ ಆಡಿಸಬೇಕು ಎನ್ನುವ ಗೊಂದಲ ಇತ್ತು. ಆದರೆ, 2025ರಲ್ಲಿ ಉತ್ತಮ ತಂಡ ಸಿಕ್ಕಂತಾಗಿದ್ದು, ಇದೇ ತಂಡ ಟ್ರೋಫಿ ಗೆಲುವಿಗೆ ಪ್ರಮುಖ ಕಾರಣವಾಯಿತು. ಅಷ್ಟರ ಮಟ್ಟಿಗೆ ಬಲಿಷ್ಠ ಆಟಗಾರರನ್ನು ಹೊಂದಿತ್ತು. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸಿದೆ. ಈ ಮೂಲಕ ಮುಂದಿನ ಬಾರಿಯೂ ಟ್ರೋಫಿ ಗೆಲ್ಲುವ ಭರವಸೆಯನ್ನು ಹುಟ್ಟುಹಾಕಿದೆ.

ಇನ್ನೂ 2026ರ ಐಪಿಎಲ್ ಆರಂಭಕ್ಕೂ ಮುನ್ನವೇ ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಮಾಹಿತಿಯೊಂದು ಬಹಿರಂಗವಾಗಿದೆ. ಸೀಸನ್ 18ರ ಆರಂಭದಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬ್ಯಾಟಿಂಗ್, ಬೌಲಿಂಗ್ ಎರಡು ವಿಭಾಗದಲ್ಲೂ ಉತ್ತಮ ಪ್ರದಶರ್ನ ತೋರಿತು. ಈ ಮೂಲಕ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿ ಆಯಿತು.
ಆರ್‌ಸಿಬಿ ಪ್ಲೇಯಿಂಗ್ 11: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಜೋಶ್ ಹೇಜಲ್ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಸುಯೇಶ್ ಶರ್ಮಾ, ರೊಮಾರಿಯೋ ಶೆಫರ್ಡ್.
2026ಕ್ಕೆ ಆರ್‌ಸಿಬಿ ಪ್ಲೇಯಿಂಗ್ 11
* ರಜತ್ ಪಾಟಿದಾರ್ (ನಾಯಕ)
* ವಿರಾಟ್ ಕೊಹ್ಲಿ
* ಫಿಲ್ ಸಾಲ್ಟ್/ ಜಾಕೋಬ್ ಬೆಥೆಲ್
* ದೇವದತ್ ಪಡಿಕ್ಕಲ್/ ಮಯಾಂಕ್ ಅಗರ್ವಾಲ್
* ಜಿತೇಶ್ ಶರ್ಮಾ (ವಿಕೆಟ್ ಕೀಪರ್)
* ಕೃನಾಲ್ ಪಾಂಡ್ಯ
* ಟೀಂ ಡೆವಿಡ್ / ರೊಮಾರಿಯೋ ಶೇಫರ್ಡ್
* ಜೋಶ್ ಹೇಜಲ್‌ವುಡ್
* ಸುಯೇಶ್ ಶರ್ಮಾ
* ಭುವನೇಶ್ವರ್ ಕುಮಾರ್
* ಯಶ್ ದಯಾಳ್
ಇನ್ನು ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಐಪಿಎಲ್ 2025 ಫೈನಲ್ ಪಂದ್ಯ ನಡೆದಿದ್ದು, ಆರ್‌ಸಿಬಿಯು ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿಯಾಗಿ ಗೆದ್ದು ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಅಂದು ಇಡೀ ದೇಶವೇ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಮುಳುಬಿಟ್ಟಿತ್ತು. ಮಾರನೇ ದಿನ ಜೂನ್ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭಿವಿಸಿ 11 ಮಂದಿ ಪ್ರಾಣ ಕಳೆದುಕೊಂಡಿದದರು. ಈ ದುರಂತ ಆರ್‌ಸಿಬಿ ಪಾಲಿಗೆ ಕಪ್ಪು ಚುಕ್ಕೆಯಾಗಿಬಿಟ್ಟಿತು.
ಇತ್ತೀಚೆಗಷ್ಟೇ ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ನೆರವು ಘೋಷಣೆ ಮಾಡಿ ಭಾವುಕ ಸಂದೇಶವನ್ನು ಆರ್‌ಸಿಬಿ ಪ್ರಾಂಚೈಸಿ ರವಾನೆ ಮಾಡಿತ್ತು. ಜೊತೆಗೆ ಆಟಗಾರರು ಸಹ ಭಾವುಕ ಸಂದೇಶ ರವಾನೆ ಮಾಡಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರ್‌ಸಿಬಿ ಕೇರ್ಸ್ ಎಂಬ ಯೋಜನೆಯನ್ನು ಆರಂಭಿಸಿದ್ದು, ಇದರಡಿ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ವಿಶೇಷ ಸಂದೇಶದ ಜೊತೆಗೆ ತಲಾ 25,00,000 ರೂಪಾಯಿ ಘೋಷಣೆ ಮಾಡಿತು. ಈ ದುರಂತ ಸಂಬಂಧ ವಿರಾಟ್ ಕೊಹ್ಲಿ ಕೂಡ ತಮ್ಸ್ ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳಿಗೆ ಭಾವುಕ ಸಂದೇಶವನ್ನು ಕಳುಹಿಸಿದ್ದರು.
ಜೂನ್ 4ರಂದು ನಡೆದ ಹೃದಯವಿದ್ರಾವಕ ಘಟನೆಯನ್ನು ನಾವು ಜೀವನದಲ್ಲೇ ನಿರೀಕ್ಷಿಸಿರಲಿಲ್ಲ. ನಮ್ಮ ಫ್ರಾಂಚೈಸಿಯ ಇತಿಹಾಸದಲ್ಲಿ ಅತ್ಯಂತ ಸಂತೋಷದಾಯಕ ಕ್ಷಣ ಆಗಿರಬೇಕಾಗಿತ್ತು. ಆದರೆ, ದುರಂತವಾಗಿ ಮಾರ್ಪಟ್ಟಿತು ಎಂದು ಭಾವುಕ ಸಂದೇಶವನ್ನು ಬರೆದುಕೊಂಡಿದ್ದರು. ಮೃತಪಟ್ಟವರ ಕುಟುಂಬಗಳಿಗಾಗಿ ಹಾಗೂ ಗಾಯಗೊಂಡ ನಮ್ಮ ಅಭಿಮಾನಿಗಳ ಬಗ್ಗೆ ಯೋಚಿಸುತ್ತಿದ್ದೇನೆ ಮತ್ತು ಪ್ರಾರ್ಥಿಸುತ್ತಿದ್ದೇನೆ. ನಿಮ್ಮ ನಷ್ಟ ಈಗ ನಮ್ಮ ಕಥೆಯ ಭಾಗವಾಗಿದೆ. ಒಟ್ಟಾಗಿ, ನಾವು ಕಾಳಜಿ, ಗೌರವ ಮತ್ತು ಜವಾಬ್ದಾರಿಯೊಂದಿಗೆ ಮುಂದುವರಿಯೋಣ ಎಂದು ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದರು.












Click it and Unblock the Notifications