RCB: ಐಪಿಎಲ್ 2025 ಅಂಕಪಟ್ಟಿ; ಆರ್‌ಸಿಬಿ ಪ್ಲೇಆಫ್ ತಲುಪಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು
ಐಪಿಎಲ್ 2025ರ ಆವೃತ್ತಿಯಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಆವೃತ್ತಿಯಲ್ಲಿ ತವರಿನಲ್ಲಿ ಈವರೆಗೆ ಮೂರು ಪಂದ್ಯಗಳಲ್ಲೂ ಸೋಲು ಕಂಡಿದ್ದು ಮೊದಲ ಗೆಲುವಿನ ಹುಡುಕಾಟದಲ್ಲಿದೆ. ಆದರೆ ತವರಿನ ಹೊರಗೆ ಆರ್ ಸಿಬಿ ಈವರೆಗೆ ಸೋಲು ಕಂಡಿಲ್ಲ, ಆಡಿರುವ ಐದು ಪಂದ್ಯಗಳಲ್ಲೂ ಗೆಲುವು ಕಂಡಿದೆ.
ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಿರುವ ಆರ್ ಸಿಬಿ ಪ್ಲೇಆಫ್ ತಲುಪುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.

ಆಡಿರುವ 8 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಗೆದ್ದಿರುವ ಆರ್ ಸಿಬಿ 10 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ರನ್‌ರೇಟ್ ಕೂಡ ಉತ್ತಮವಾಗಿದ್ದು ಪ್ಲೇಆಫ್ ತಲುಪುವ ವಿಶ್ವಾಸದಲ್ಲಿದೆ. ಹಾಗಾದರೆ ಆರ್ ಸಿಬಿ ಪ್ಲೇಆಫ್ ತಲುಪಲು ಎಷ್ಟು ಪಂದ್ಯ ಗೆಲ್ಲಬೇಕು, ಮುಂದಿನ ಪಂದ್ಯಗಳ ಮಾಹಿತಿ ಇಲ್ಲಿದೆ.
ಎಷ್ಟು ಪಂದ್ಯ ಗೆಲ್ಲಬೇಕು?
ಆರ್ ಸಿಬಿ ಈಗಾಗಲೇ 8 ಪಂದ್ಯಗಳನ್ನು ಆಡಿದ್ದು ಲೀಗ್ ಹಂತದಲ್ಲಿ ಇನ್ನೂ 6 ಪಂದ್ಯಗಳನ್ನು ಆಡಬೇಕಿದೆ. ಈ ಆರು ಪಂದ್ಯಗಳಲ್ಲಿ ಕನಿಷ್ಠ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೂ ಆರ್ ಸಿಬಿ ಪ್ಲೇಆಫ್ ಸ್ಥಾನ ಬಹುತೇಕ ಖಚಿತವಾಗಲಿದೆ. ಒಂದು ವೇಳೆ 4-5 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಒಂದರಲ್ಲಿ ಪಡೆದು ಪ್ಲೇಆಫ್ ತಲುಪುವ ಸಾಧ್ಯತೆ ಇದೆ.
ಆರ್ ಸಿಬಿ ಮೊದಲ ಎರಡರಲ್ಲಿ ಒಂದು ಸ್ಥಾನದಲ್ಲಿ ಪ್ಲೇಆಫ್‌ಗೆ ಪ್ರವೇಶಿಸಿದರೆ ಫೈನಲ್‌ಗೆ ತಲುಪಲು ಎರಡು ಅವಕಾಶ ಇರುತ್ತದೆ. ಈ ಬಾರಿ ತಂಡವು ಬಲಿಷ್ಠವಾಗಿದ್ದು ಮೊದಲ ಎರಡರಲ್ಲಿ ಲೀಗ್ ಹಂತವನ್ನು ಮುಗಿಸುವ ಯೋಚನೆಯಲ್ಲಿದೆ. ಆದರೆ ಇದಕ್ಕೆ ಅವರು ತವರಿನಲ್ಲಿ ಗೆಲುವಿನ ಹಾದಿಗೆ ಮರಳಬೇಕಿದೆ.
ಮುಂದಿನ ಪಂದ್ಯಗಳು ಯಾರ ವಿರುದ್ಧ ಹಾಗೂ ಯಾವಾಗ?
ಆರ್ ಸಿಬಿ ಮುಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಏಪ್ರಿಲ್ 24 ರಂದು ಗುರುವಾರ ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
ಏಪ್ರಿಲ್ 27, ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಸೆಣೆಸಲಿದೆ. ಸ್ಥಳ; ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ.
ಮೇ 3, ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ, ಸ್ಥಳ; ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
ಮೇ 9, ಶುಕ್ರವಾರ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸ್ಥಳ: ಏಕಾನಾ ಸ್ಟೇಡಿಯಂ, ಲಕ್ನೋ.
ಮೇ 13, ಮಂಗಳವಾರ, ಸನ್‌ರೈಸರ್ಸ್ ಹೈದರಾಬಾದ್, ಸ್ಥಳ: ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
ಮೇ 17, ಶನಿವಾರ, ಕೋಲ್ಕತಾ ನೈಟ್ ರೈಡರ್ಸ್, ಸ್ಥಳ: ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.












Click it and Unblock the Notifications