RCB: ಲೀಗ್‌ನಿಂದ ಹೊರಬಿದ್ದ ಆರ್‌ಸಿಬಿ
RCB: ಐಪಿಎಲ್ 2025 ಟ್ರೋಫಿ ಗೆದ್ದುಕೊಂಡ ಬಳಿಕ ಆರ್‌ಸಿಬಿಗೆ ಎದುರಾದ ಆಘಾತಗಳು ಒಂದಲ್ಲ ಎರಡಲ್ಲ. ಈ ನಡುವೆಯೇ ಲೀಗ್‌ನಿಂದ ಹೊರಬಿದ್ದಿದೆ ಎನ್ನುವ ಸುದ್ದಿಯೊಂದು ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ. ಇದು ಬಹುತೇಕರಲ್ಲಿ ಆಶ್ಚರ್ಯ ಹುಟ್ಟುಹಾಕಲೂಬಹುದು.. ಹಾಗಾದ್ರೆ ಇದಕ್ಕೆಲ್ಲ ಸಂಪೂರ್ಣ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆರ್‌ಸಿಬಿ ಆಡಿದ 17 ವರ್ಷಗಳಲ್ಲಿ ಒಂದೇ ಇಂದು ಐಪಿಎಲ್ ಟ್ರೋಫಿ ಗೆದ್ದಿರಲಿಲ್ಲ. ಆದರೆ, 2025ರ 18ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ಭರ್ಜರಿಯಾಗಿ ಗೆಲ್ಲುವ ಮೂಲಕ ಟ್ರೋಫಿ ಇಲ್ಲ ಎನ್ನುವ ಕೊರಗಿಗೆ ತೆರೆ ಎಳೆಯಿತು. ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜೂನ್ 3ರಂದು ಫೈನಲ್ ಪಂದ್ಯ ನಡೆಯಿತು.

ಅಂದು ರಾಯಲ್ ಚಾಲೆಂಜರ್ಸ್ ಬೆಂಗಳೂರ ತಂಡದ ಗೆಲುವನ್ನು ಇಡೀ ದೇಶವೇ ಸಂಭ್ರಾಮಾಚರಣೆ ಮಾಡಿತು. ಮಾರನೇ ದಿನ ಜೂನ್ 4ರಂದು ಬೆಂಗಳೂರಿನಲ್ಲಿ ವಿಜಯೋಯತ್ಸವ ಇಟ್ಟುಕೊಳ್ಳಲಾಗಿತ್ತು. ಈ ವೇಳೆ ಎಂ.ಚಿನ್ನಸ್ವಾಮಿ ಬಳಿ ಕಾಲ್ತುಳಿದ ಸಂಭವಿಸಿ 11 ಮಂದಿ ಪ್ರಾಣ ಕಳೆದುಕೊಂಡರು. ರಾಜ್ಯ ಸರ್ಕಾರ ಈ ದುರತಂತ ಹೊಣೆಯನ್ನು ಆರ್‌ಸಿಬಿ ಹಾಗೂ ಕೆಎಸ್‌ಸಿಎ ಮೇಲೆ ಹೊರಿಸಿ ಎಫ್‌ಐಆರ್ ದಾಖಲಿಸಿತು. ಬಳಿಕ ತುಂಬಾ ಬೆಳವಣಿಗಳು ಆದ್ವು..
ಈ ವೇಳೆ ಆರ್‌ಸಿಬಿ ತಂಡವನ್ನು ಮಾರಾಟ ಮಾಡಲಾಗುತ್ತದೆ ಹಾಗೂ ಐಪಿಎಲ್‌ನಿಂದಲೇ ಈ ತಂಡವನ್ನು ಬ್ಯಾನ್ ಮಾಡಲಾಗುತ್ತದೆ ಎನ್ನುವ ವದಂತಿಗಳು ಹಬ್ಬಿದ್ದವು. ಬಳಿಕ ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ ಎಂದು ಪ್ರಾಂಚೈಸಿ ಸ್ಪಷ್ಟನೆ ನೀಡುವ ಮೂಲಕ ವದಂತಿಗಳಿಗೆ ತೆರೆ ಎಳೆಯುವ ಕೆಲಸವನ್ನು ಮಾಡಿತ್ತು. ಆದರೆ, ಈ ನಡುವೆಯೂ ಇದೀಗ ಆರ್‌ಸಿಬಿ ಲೀಗ್‌ನಿಂದ ಹೊರಬಿದ್ದಿದೆ ಅಂತಾ ಸುದ್ದಿ ಹರಿದಾಡುತ್ತಿದೆ.
ವಿಶ್ವದಲ್ಲೇ ಅತೀ ಶ್ರೀಮಂತರ ಲೀಗ್ ಐಪಿಎಲ್‌ನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅಂದ್ರೆ ಅದು ಆರ್‌ಸಿಬಿ ಮಾತ್ರ. ಅಲ್ಲದೆ, ಇಂಡಿಯನ್ಸ್ ಪ್ರೀಮಿಯರ್ ಲೀಗ್ ಅಂದ್ರೇನೆ ಆರ್‌ಸಿಬಿ ಎನ್ನುವಂತಾಗಿ. ಇಂತಹದ್ಧರಲ್ಲಿ ಈ ತಂಡವನ್ನು ಹೊರತಳ್ಳುವ ಮಾತೇ ಇಲ್ಲ.
ಆರ್‌ಸಿಬಿ ಲೀಗ್‌ನಿಂದ ಹೊರಕ್ಕೆ: 2008ರಲ್ಲಿ ಆರಂಭವಾದ ಐಪಿಎಲ್ ಬಿಟ್ಟರೆ ಕ್ರಿಕೆಟ್‌ನಲ್ಲಿ ಅತ್ಯಂತ ದೊಡ್ಡ ಲೀಗ್ ಇಲ್ಲ. ಆದರೂ, ಚಿಕ್ಕ ಚಿಕ್ಕ ಲೀಗ್‌ಗಳನ್ನು ಆಡಿಸಲಾಗುತ್ತದೆ. ಈ ಪೈಕಿ ದಿ ಹಂಡ್ರೆಡ್ ಲೀಗ್ ಸಹ ಒಂದಾಗಿದೆ. ಇದು 2021ರಲ್ಲಿ ಆರಂಭ ಆಗಿದೆ. ಇನ್ನು ಈ ಟೂರ್ನಿಯಲ್ಲಿ 100 ಎಸೆತಗಳ ಪಂದ್ಯ ನಡೆಯಲಿದೆ. ಟಿ-20 ಬದಲಿಗೆ ಪ್ರತಿ ಇನಿಂಗ್ಸ್ಗೆ 100 ಎಸೆತಗಳನ್ನು ಎಸೆಯಲಾಗುತ್ತದೆ. ಹಾಗೆಯೇ ಒಂದು ಓವರ್ನಲ್ಲಿ 5 ಎಸೆತಗಳು ಇರಲಿವೆ.
ಒಬ್ಬ ಬೌಲರ್ ಸತತ 2 ಓವರ್ ಅಥವಾ 10 ಎಸೆತಗಳನ್ನು ಹಾಕಬಹುದು. ಹೀಗೆ ಹಲವು ರೀತಿಯಲ್ಲಿ ವಿಭಿನ್ನವಾಗಿ ಟೂರ್ನಿಗೆ ಇದೀಗ ಐಪಿಎಲ್ ಫ್ರಾಂಚೈಸಿಗಳು ಎಂಟ್ರಿ ಕೊಟ್ಟಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜನೆ ಮಾಡಿರುವ ದಿ ಹಂಡ್ರೆಡ್ ಲೀಗ್‌ನಲ್ಲಿ ಐಪಿಎಲ್ನ 4 ಫ್ರಾಂಚೈಸಿಗಳು ತಂಡಗಳನ್ನು ಖರೀದಿ ಮಾಡಿದ್ದಾರೆ.
ಐಪಿಎಲ್ನ 4 ಪ್ರಮುಖ ಫ್ರಾಂಚೈಸಿಗಳಾದ ಮುಂಬೈ ಇಂಡಿಯನ್ಸ್ (Mumbai Indians), ಲಕ್ನೋ ಸೂಪರ್ ಜೈಂಟ್ಸ್ (LSG), ಡೆಲ್ಲಿ ಕ್ಯಾಪಿಟಲ್ಸ್ (DC), ಸನ್ರೈಸರ್ಸ್ ಹೈದರಾಬಾದ್ (SRH) ದಿ ಹಂಡ್ರೆಡ್ ಲೀಗ್ ತಂಡಗಳ ಮಾಲೀಕತ್ವ ಹೊಂದಿದ್ದಾರೆ. ಇನ್ನೂ ಇದರಲ್ಲಿ ರಾಯಲ್ ಚಾಲೆಂಜರ್ಸ್ ಪಾತ್ರವೇನಿಲ್ಲ.. ಆದ್ದರಿಂದ ಈ ಲೀಗ್‌ನಿಂದ ಹೊರಬಿದ್ದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
* ಮುಂಬೈ ಇಂಡಿಯನ್ಸ್ (MI) ಓವಲ್ ಇನ್ವಿನ್ಸಿಬಲ್ ತಂಡದ ಶೇಕಡ 49ರಷ್ಟು ಪಾಲನ್ನು ಖರೀದಿ ಮಾಡಿದೆ. ಅಲ್ಲದೆ, ಈ ಫ್ರಾಂಚೈಸಿ ಎಂಐ ಓವಲ್ ಹೆಸರಿನಲ್ಲಿ ಕಣಕ್ಕೆ ಇಳಿಕೆ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
* ಲಕ್ನೋ ಸೂಪರ್ ಜೈಂಟ್ಸ್ (LSG) ಮ್ಯಾಂಚೆಸ್ಟರ್ ಒರಿಜಿನಲ್ಸ್ ಫ್ರಾಂಚೈಸಿಯ ಶೇಕಡ 70ರಷ್ಟು ಪಾಲನ್ನು ಖರೀದಿ ಮಾಡಿದೆ.
* ಸನ್ರೈಸರ್ಸ್ ಹೈದರಾಬಾದ್ (SRH) ಫ್ರಾಂಚೈಸಿ ಯಾರ್ಕ್‌ಷೈರ್ ಒಡೆತನದಲ್ಲಿ ಇದ್ದ ನಾರ್ದರ್ನ್ ಸೂಪರ್‌ಚಾರ್ಜರ್ಸ್‌ನ ಸಂಪೂರ್ಣ ಪಾಲನ್ನು ಖರೀದಿಸಿದೆ. ಆದ್ದರಿಂದ ನಾರ್ದರ್ನ್ ಸೂಪರ್‌ಚಾರ್ಜರ್ಸ್ ತಂಡ ಸನ್ರೈಸರ್ಸ್ ಹೆಸರಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
* ಇನ್ನು ಡೆಲ್ಲಿ ಕ್ಯಾಪಿಟಲ್ಸ್ (DC) ಸಹ-ಮಾಲೀಕರಾದ ಜಿಎಂಆರ್ ಗ್ರೂಪ್ ಸದರ್ನ್ ಬ್ರೇವ್ ಫ್ರಾಂಚೈಸಿಯ ಶೇಕಡಾ 49ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ. ಆದ್ದರಿಂದ ದಿ ಹಂಡ್ರೆಡ್ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದೆ. ಒಟ್ಟಿನಲ್ಲಿ ಹೇಳೋದಾದ್ರೆ, ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಹಾಗೂ ಶ್ರೀಮಂತ ತಂಡ ಆರ್‌ಸಿಬಿ ಈ ಲೀಗ್‌ನಲ್ಲಿ ಪಾಲು ಖರೀದಿಸಿಲ್ಲ ಯಾಕೆ ಎನ್ನುವ ಪ್ರಶ್ನೆ ಬಹುತೇಕರಲಿದೆ. ಆದರೆ, ಆರ್‌ಸಿಬಿಗೆ ಈ ಲೀಗ್‌ನ ಸಂಪೂರ್ಣ ಒಂದು ತಂಡವನ್ನು ಖರೀದಿ ಮಾಡುವುದು ದೊಡ್ಡ ಮ್ಯಾಟರ್ ಅಲ್ಲ.. ಮುಂದಿನ ಬಾರಿ ಕೊಂಡುಕೊಂಡರೂ ಆಶ್ಚರ್ಯಪಡಬೇಕಿಲ್ಲ.. ಅಂತಾ ಶ್ರೀಮಂತ ಲೀಗ್ ಐಪಿಎಲ್‌ನಲ್ಲೇ ಅತೀ ಹೆಚ್ಚು ಹಣ ವ್ಯಯ ಮಾಡಿ ಪ್ಲೇಯರ್ಸ್‌ಗಳನ್ನು ಕೊಂಡುಕೊಳ್ಳುವ ಆರ್‌ಸಿಬಿಗೆ ಈ ಲೀಗ್‌ನಲ್ಲಿ ಒಂದು ತಂಡವನ್ನು ಖರೀದಿ ಮಾಡುವುದೇನು ದೊಡ್ಡ ಪ್ರಶ್ನೆಯಲ್ಲ.












Click it and Unblock the Notifications