11 ಅಭಿಮಾನಿಗಳ ಸಾವಿಗೆ ರಿವೇಂಜ್, ಆರ್‌ಸಿಬಿ ಅಧಿಕಾರಿಗಳು ಅರೆಸ್ಟ್! ಆರ್‌ಸಿಬಿ ಆಟಗಾರರಿಗೂ ಸಂಕಷ್ಟ... Virat Kohli
ಕನ್ನಡ ನಾಡಿನ ರಾಜಧಾನಿ ಬೆಂಗಳೂರು ಕ್ರಿಕೆಟ್ ತಂಡ ಇಡೀ ಜಗತ್ತಿನಾದ್ಯಂತ ದೊಡ್ಡ ಹೆಸರು ಮಾಡಿ ಹವಾ ಎಬ್ಬಿಸಿ ಗಮನ ಸೆಳೆದಿದೆ. 18 ವರ್ಷಗಳ ಸತತ ಪ್ರಯತ್ನದ ನಂತರ ಭರ್ಜರಿಯಾಗಿ ಆರ್‌ಸಿಬಿ ತಂಡ ಐಪಿಎಲ್ ಕಪ್ ಗೆದ್ದು ಬೀಗಿದ್ದು, ಕೋಟಿ ಕೋಟಿ ಅಭಿಮಾನಿಗಳು ಸಂಭ್ರಮ ಪಟ್ಟಿದ್ದಾರೆ. ಆದರೆ ಇಂತಹ ಸಂಭ್ರಮದ ಸಮಯದಲ್ಲೇ ಸಾವಿನ ಸೂತಕವೇ ಬಂದು ಎರಗಿ ಆಘಾತ ನೀಡಿದೆ. ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಉಂಟಾಗಿ 11 ಜನರು ಸಾವನ್ನಪ್ಪಿದ್ದಾರೆ. ಹೀಗಿದ್ದಾಗಲೇ, 11 ಅಭಿಮಾನಿಗಳ ಸಾವಿಗೆ ರಿವೇಂಜ್, ಆರ್‌ಸಿಬಿ ಅಧಿಕಾರಿಗಳು ಅರೆಸ್ಟ್! ಆರ್‌ಸಿಬಿ ಆಟಗಾರರಿಗೂ ಸಂಕಷ್ಟ...
ಆರ್‌ಸಿಬಿ ತಂಡ ಕಪ್ ಗೆದ್ದ ದಿನ ಅಂದ್ರೆ ಜೂನ್ 3ರ ತನಕ ಎಲ್ಲವೂ ಚನ್ನಾಗಿಯೇ ಇತ್ತು, ಎಲ್ಲೆಲ್ಲೂ ಸಂಭ್ರಮ ಇತ್ತು. ಜೂನ್ 4 ಬುಧವಾರ ಸಂಜೆ ತನಕ ಹೀಗೆ ಎಲ್ಲಾ ಚನ್ನಾಗಿಯೇ ಇತ್ತು, ಆದರೆ ದಿಢೀರ್ ಅಂತಾ ದೊಡ್ಡ ಬರಸಿಡಿಲಿನ ಆಘಾತ ಆರ್‌ಸಿಬಿ ಅಭಿಮಾನಿಗಳಿಗೆ ಬಂದು ಎರಗಿತ್ತು. ಅಂದಹಾಗೆ ಗುಜರಾತ್ ಕ್ರೀಡಾಂಗಣದಲ್ಲಿ ಐಪಿಎಲ್ 2025 ಫೈನಲ್ ಮ್ಯಾಚ್ ಆಡಿ ಗೆದ್ದಿದ್ದ ಆರ್‌ಸಿಬಿ ತಂಡದ ಆಟಗಾರರು ಬುಧವಾರ ಬೆಂಗಳೂರಿಗೆ ಬಂದಿದ್ದರು...

ಹೀಗಿದ್ದಾಗಲೇ, ಲಕ್ಷ ಲಕ್ಷಾಂತರ ಅಭಿಮಾನಿಗಳು ಒಟ್ಟಿಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗಲು ಸಿದ್ಧರಾಗಿದ್ದರು. ಇದೇ ಸಮಯದಲ್ಲಿ ಕಾಲ್ತುಳಿತ ಉಂಟಾಗಿ 11 ಆರ್‌ಸಿಬಿ ಅಭಿಮಾನಿಗಳ ಜೀವವೇ ಹೋಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಆರೋಪ ಕೇಳಿ ಬಂದಿದ್ದ ಆರ್‌ಸಿಬಿ ಟೀಂ ಆಡಳಿತ ಮಂಡಳಿಗೆ ಬೆಂಗಳೂರು ಪೊಲೀಸರು ಶಾಕ್ ಕೊಟ್ಟಿದ್ದಾರೆ! ಬೆಂಗಳೂರು ಪೊಲೀಸರು ಕೊಟ್ಟ ಶಾಕ್‌ಗೆ ಆರ್‌ಸಿಬಿ ಅಧಿಕಾರಿಗಳು ಇದೀಗ ಕಂಬಿ ಹಿಂದೆ ಬೀಳುವಂತೆ ಆಗಿದೆ...
ವಿಮಾನ ನಿಲ್ದಾಣದಲ್ಲೇ ಅರೆಸ್ಟ್ ಆದರು!
ಹೌದು, ನಮ್ಮ ಹೆಮ್ಮೆಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಉಂಟಾಗಿ 11 ಅಭಿಮಾನಿಗಳು ಮೃತಪಟ್ಟ ಘಟನೆ ಸಂಬಂಧ ಇದೀಗ ಬೆಂಗಳೂರಿನ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿ ಆದೇಶ ಹೊರಡಿಸಿದ್ದು, ಈಗಾಗಲೇ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಸೇರಿ ಹಲವಾರು ಪೊಲೀಸ್ ಆಫಿಸರ್ಸ್ ಸಸ್ಪೆಂಡ್ ಆಗಿದ್ದಾರೆ. ಹೀಗಿದ್ದಾಗಲೇ, ದುರಂತ ಹಿನ್ನೆಲೆ ಇದೀಗ ಪೊಲೀಸರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಮೂವರು ಆಯೋಜಕರು ಸೇರಿದಂತೆ 4 ಜನರನ್ನ ಅರೆಸ್ಟ್ ಮಾಡಿದ್ದಾರೆ.
ಆರ್‌ಸಿಬಿ ಅಧಿಕಾರಿ ಕೂಡ ಅರೆಸ್ಟ್?
ವಿಚಾರ ಗಂಭೀರವಾಗಿದ್ದ ಹಿನ್ನೆಲೆ ಸಿಸಿಬಿ & ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಹೀಗೆ ಕಾರ್ಯಾಚರಣೆ ನಡೆಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂವರನ್ನ ಅರೆಸ್ಟ್ ಮಾಡಲಾಗಿದೆ. ಆರ್‌ಸಿಬಿ ಮಾರ್ಕೆಟಿಂಗ್ ಹೆಡ್, ಖಾಸಗಿ ಮ್ಯಾನೇಜ್ಮೆಂಟ್ ಸಿಬ್ಬಂದಿ ಸೇರಿ 4 ಜನರನ್ನ ಅರೆಸ್ಟ್ ಮಾಡಲಾಗಿದೆ. ಈ ಮೂಲಕ ಆರ್‌ಸಿಬಿಗೆ ಬಿಗ್ ಶಾಕ್ ಎದುರಾಗಿದ್ದು, ಆರ್‌ಸಿಬಿ ಆಟಗಾರರಿಗೆ ಕೂಡ ಸಂಕಷ್ಟ ಎದುರಾಗುತ್ತಾ? ಎಂಬ ಪ್ರಶ್ನೆ ಮೂಡಿದೆ. ಅರೆಸ್ಟ್ ಆಗಿರುವವರನ್ನ ವಿಚಾರಣೆ ಮಾಡಲಾಗುತ್ತಿದೆ.
ವಿರಾಟ್ ಕೊಹ್ಲಿ ಕೂಡ ಅರೆಸ್ಟ್ ಆಗ್ತಾರಾ?
ಹೌದು, ಇಷ್ಟೆಲ್ಲದರ ನಡುವೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ವಿರುದ್ಧ ಕೂಡ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಮತ್ತೊಂದು ಕಡೆ ಈ ಘಟನೆಗೆಲ್ಲಾ ವಿರಾಟ್ ಕೊಹ್ಲಿ ಕಾರಣ ಹೀಗಾಗಿ ವಿರಾಟ್ ಕೊಹ್ಲಿ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ, ಆರ್‌ಸಿಬಿ ಆಟಗಾರರಿಗೂ ಸಂಕಷ್ಟ ಎದುರಾಯ್ತಾ? ಅನ್ನೋ ಪ್ರಶ್ನೆ ಮೂಡಿದೆ.












Click it and Unblock the Notifications