RCB: ಆರ್‌ಸಿಬಿ ಹೋಂ ಗ್ರೌಂಡ್ ಬದಲಾವಣೆ ಬಗ್ಗೆ ಮಹತ್ವದ ಅಪ್ಡೇಟ್
RCB: ಐಪಿಎಲ್ 2025 ಫೈನಲ್‌ನಲ್ಲಿ ಆರ್‌ಸಿಬಿ ಭರ್ಜರಿಯಾಗಿ ಗೆದ್ದು ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಈ ಹಿನ್ನೆಲೆ ಮಾರನೇ ದಿನ ಜೂನ್ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು. ಈ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದರು. ಇದಾದ ಬಳಿಕ ಸುಮಾರು ಬೆಳವಣಿಗೆಗಳಾದ್ವು. ಇದರ ಬೆನ್ನಲ್ಲೇ ಇದೀಗ ರಾಯಲ್ ತಂಡಕ್ಕೆ ಹೋಂ ಗ್ರೌಂಡ್ ಬದಲಾವಣೆ ಬಗ್ಗೆ ಮಹತ್ವದ ಅಪ್ಡೇಟ್ ಹೊರಬಿದ್ದಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಐಪಿಎಲ್ 2025ರ ಫೈನಲ್ ಪಂದ್ಯ ಜೂನ್ 3ರಂದು ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಈ ವೇಳೆ ಬಲಿಷ್ಠ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿಯಾಗಿ ಗೆದ್ದು ಟ್ರೋಫಿ ಇಲ್ಲ ಎನ್ನುವ ಕೊರಗನ್ನು ದೂರ ಮಾಡಿತು. ಆರ್‌ಸಿಬಿ ಟ್ರೋಫಿ ಗೆದ್ದ ಹಿನ್ನೆಲೆ ಮಾರನೇ ದಿನ ಜೂನ್ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಆದರೆ, ಇದೇ ವೇಳೆ ಎಂ.ಚಿನ್ನಸ್ವಾಮಿ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಜನರು ಪ್ರಾಣ ಕಳೆದುಕೊಂಡರು.

ದುರಂತದ ಬಳಿಕ ತುಂಬಾ ಬೆಳೆವಣಿಗಗಳಿ ಆದ್ವು. ಪ್ರಕರಣ ಸಂಬಂಧ ಆರ್‌ಸಿಬಿ ಪ್ರಾಂಚೈಸಿ ಹಾಗೂ ಮಾರ್ಕೆಟಿಂಗ್ ಹೆಡ್ ವಿರುದ್ಧ ಎಫ್‌ಐಆರ್ ದಾಖಲಾಯಿತು. ಅಷ್ಟೇ ಅಲ್ಲದೆ, ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ವಿರುದ್ಧವೂ ದೂರು ದಾಖಲಾಯಿತು. ಇದೇ ವೇಳೆ ಆರ್‌ಸಿಬಿ ಮಾರಾಟ ಮಾಡಲಾಗುತ್ತದೆ ಹಾಗೂ ಐಪಿಎಲ್‌ನಿಂದಲೇ ಬ್ಯಾನ್ ಮಾಡಲಾಗುತ್ತದೆ ಎನ್ನುವ ವದಂತಿಗಳು ಹಬ್ಬಿದ್ದವು. ಆದರೆ ಇದಕ್ಕೆಲ್ಲ ಸ್ಪಷ್ಟನೆ ನೀಡಿದ ಪ್ರಾಂಚೈಸಿಯು, ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ ಎಂದು ಹೇಳಿತ್ತು.
ಆದರೆ, ಕಳೆದ ಕೆಲ ದಿನಗಳ ಹಿಂದೆಯಷ್ಟೇ ಆರ್‌ಸಿಬಿ ಮಾರಾಟ ಮಾಡಲಾಗುತ್ತದೆ ಎಂದು ಪ್ರಾಂಚೈಸಿ ಅಧಿಕೃತವಾಗಿ ತಿಳಿಸಿದೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಇದೀಗ ಆರ್‌ಸಿಬಿ ಹೋಂ ಗ್ರೌಂಡ್ ಬದಲಾವಣೆ ಬಗ್ಗೆ ಬಿಗ್ ಅಪ್ಡೇಟ್‌ವೊಂದು ಲಭ್ಯವಾಗಿದೆ. ಕಾಲ್ತುಳಿತ ಸಂಭವಿಸಿದ ಬಳಿಕ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಪಂದ್ಯಗಳನ್ನು ಆಡಿಸಲಾಗಿತ್ತು. ಮುಂದಿನ ಐಪಿಎಲ್‌ಗೆ ಆರ್‌ಸಿಬಿ ಹೋಂ ಗ್ರೌಂಡ್ ಯಾವ್ದು ಎನ್ನುವ ಚಿಂತೆಯಲ್ಲಿತ್ತು. ಆದರೆ, ಇದೀಗ ಪರಿಹಾರವೊಂದು ಸಿಕ್ಕಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಬಹುನಿರೀಕ್ಷಿತ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯು ಚಿನ್ನಸ್ವಾಮಿ ಸ್ಟೇಡಿಯಂನಿಂದ ಬೇರೆಡೆಗೆ ಶಿಪ್ಟ್ ಆಗಿತ್ತು. ಇನ್ನೂ ಮೂಲಗಳ ಪ್ರಕಾರ, ಇನ್ಮಂದೆ ಕೆಲಕಾಲ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯಾವುದೇ ಪಂದ್ಯಗಳು ನಡೆಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಇದೇ ಕಾರಣದಿಂದ ಚಾಂಪಿಯನ್ ತಂಡ ಆರ್‌ಸಿಬಿ ಫ್ರಾಂಚೈಸಿ ತನ್ನ ತವರು ಮೈದಾನವನ್ನು ಬೇರೆಡೆ ಬದಲಾಯಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಇದರ ಬೆನ್ನಲ್ಲೇ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯು ಆರ್‌ಸಿಬಿಗೆ ಆಫರ್‌ವೊಂದನ್ನು ನೀಡಿದೆ. 2026ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಪುಣೆಯಲ್ಲಿನ ಮಹರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂ ಅನ್ನು ತಮ್ಮ ಹೋಮ್ ಗ್ರೌಂಡ್ ಮಾಡಿಕೊಳ್ಳಲು ಆಫರ್ ನೀಡಿದೆ ಎಂದು ವರದಿ ಆಗಿದೆ. ಈ ಕುರಿತು ಆರ್‌ಸಿಬಿ ಹಾಗೂ ಮಹರಾಷ್ಟ್ರ ಕ್ರಿಕೆಟ್ ಸಂಸ್ಥೆಯ ನಡುವೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆದೆ.
ಈ ಬಗ್ಗೆ ಎಂಸಿಎಯ ಕಮಲೇಶ್ ಫಿಸಲ್ ಮಾತನಾಡಿದ್ದು, "ಇಲ್ಲಿ ಆರ್‌ಸಿಬಿ ಆತಿಥ್ಯ ವಹಿಸುವ ವಿಚಾರ ಚರ್ಚೆಯಲ್ಲಿ ಇದೆ. ಆದರೆ ಇಲ್ಲೇ ಆರ್‌ಸಿಬಿ ತವರು ಮೈದಾನವಾಗಿಸಿಕೊಳ್ಳಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಕರ್ನಾಟಕದಲ್ಲಿ ಆದಂತಹ ದುರಂತದಿಂದ ಅಲ್ಲಿ ಟೂರ್ನಿ ನಡೆಸಲು ಕಷ್ಟ ಆಗಿದೆ. ಆದ್ದರಿಂದ ಅವರು ಹೊಸ ಹೋಮ್ ಗ್ರೌಂಡ್ ಹುಡುಕಾಟದಲಿದ್ದಾರೆ. ನಾವು ನಮ್ಮ ಸ್ಟೇಡಿಯಂ ನೀಡಲು ಸಿದ್ದವಿದ್ದೇವೆ. ಇದೀಗ ಮಾತುಕತೆ ಆರಂಭಿಕ ಹಂತದಲ್ಲಿದೆ. ಎಲ್ಲವೂ ಸಾಧ್ಯವಾದರೆ ಪುಣೆ ಈ ಬಾರಿ ಆರ್‌ಸಿಬಿಯ ತವರು ಮೈದಾನವಾಗಿ ಐಪಿಎಲ್‌ಗೆ ಆತಿಥ್ಯ ವಹಿಸಲಿದೆ," ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿರುವ ಎಂ.ಚಿನ್ನಸ್ವಾಮಿ ಕ್ರೀಂಡಾಗಣ ಆರ್‌ಸಿಬಿ ತವರು ಮೈದಾನವಾಗಿದೆ. ಇದನ್ನು ಹೊರತುಪಡಿಸಿ ಈ ಗ್ರೌಂಡ್ ಆರ್‌ಸಿಬಿಗೆ ಎಂಟ್ರಿ ಕೊಟ್ಟ ಯಾವುದೇ ಆಟಗಾರರನ್ನು ತನ್ನತ್ತ ಸೆಳೆಯುತ್ತಲೇ ಇದೆ. ಅಷ್ಟರ ಮಟ್ಟಿಗೆ ಆರ್‌ಸಿಬಿ ಆಟಗಾರರು ಹಾಗೂ ಈ ಗ್ರೌಂಡ್ ನಡುವೆ ಭಾವತ್ಮಕತೆ ಇದೆ. ಇದಕ್ಕೆಲ್ಲ ಕಾರಣ ಇಲ್ಲಿನ ಅಭಿಮಾನಿಗಳು. ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯ ನಡೆಯುತ್ತದೆ ಅಂದ್ರೆ ಸಾಕು ಒಂದು ವಾರ ಮುಂಚಿತವಾಗಿಯೇ ಟಿಕೆಟ್‌ಗಳೆಲ್ಲಾ ಖಾಲಿ ಆಗಿಬಿಡುತ್ತಿದ್ದವು. ಜೊತೆಗೆ ಯಾವುದೇ ಆಟಗಾರರು ತಂಡಕ್ಕೆ ಆಗಮಿಸಿದ್ರೆ, ಅವರಿಗೆ ಪ್ರಮುಖ ಉತ್ತೇಜನ ಧೈರ್ಯ ಅಂದ್ರೆ ಅದು ಅಭಿಮಾನಿಗಳೇ ಅಂದ್ರೆ ತಪ್ಪಾಗಲಾರದು. ಆದ್ದರಿಂದ ಒಂದು ವೇಳೆ ಹೋಂ ಗ್ರೌಂಡ್ ಕರ್ನಾಟಕ ಬಿಟ್ಟು ಬೇರೆಡೆ ಅಪಾರ ಅಭಿಮಾನಿಗಳನ್ನು ಕಳೆದುಕೊಳ್ಳುವ ಆತಂಕದಲ್ಲಿ ಪ್ರಾಂಚೈಸಿ ಇದೆ.












Click it and Unblock the Notifications