RCB: ಆರ್‌ಸಿಬಿ ಫೈನಲ್‌ ಪಂದ್ಯ ರದ್ದು ಸಾಧ್ಯತೆ

IPL 2025 RCB: ಐಪಿಎಲ್ 2025 ಆವೃತ್ತಿ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಈಗಾಗಲೇ ಆರ್‌ಸಿಬಿ ಗುರುವಾರ ನಡೆದ ಮೊದಲ ಕ್ವಾಪಿಫೈಯರ್‌ನಲ್ಲೇ ಪಂಜಾಬ್‌ ಕಿಂಗ್ಸ್‌ ವಿರುದ್ಧ ಗೆದ್ದು ಬೀಗಿ ನೇರವಾಗಿ ಫೈನಲ್‌ ಪ್ರವೇಶ ಮಾಡಿದೆ. ಫೈನಲ್‌ ಮ್ಯಾಚ್‌ ಜೂನ್‌ 3ರಂದು ನಡೆಯಲಿದ್ದು, ಅಂದಿನ ಪಂದ್ಯಕ್ಕೆ ಆಘಾತವೊಂದು ಎದುರಾಗಿದೆ. ಅದೇನು ಅಂತೀರಾ ಇಲ್ಲಿದೆ ನೋಡಿ ಮಾಹಿತಿ.

ಈ ಆವೃತ್ತಿಯ ಆರಂಭದಿಂದಲೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟಿಂಗ್‌, ಬೌಲಿಂಗ್ ಎರಡು ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಇದೀಗ ಫೈನಲ್‌ ಪ್ರವೇಶ ಮಾಡಿದೆ. ಈ ಪಂದ್ಯ ಜೂನ್ 3ರಂದು ನಡೆಯಲಿದ್ದು, ಅಂದಿನ ಪಂದ್ಯಕ್ಕೆ ಆತಂಕವೊಂದು ಎದುರಾಗಿಬಿಟ್ಟಿದೆ.

RCB final Match Likely to Be cancellation on June 3

ಆರ್‌ಸಿಬಿ ಫೈನಲ್‌ ಪಂದ್ಯವನ್ನು ಯಾವ ತಂಡದ ಮೇಲೆ ಆಡಲಿದೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಯಾಕೆಂದ್ರೆ, ಮೊದಲ ಕ್ವಾಲಿಫೈಯರ್‌ನಲ್ಲಿ ಸೋತಿರುವ ಪಂಜಾಬ್ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದ ಮೇಲೆ ಕ್ವಾಲಿಫೈಯರ್ 2 ಆಡಬೇಕಿದೆ. ಇದರಲ್ಲಿ ಗೆಲ್ಲುವ ತಂಡ ಆರ್‌ಸಿಬಿ ವಿರುದ್ಧ ಫೈನಲ್‌ ಆಡಲಿದೆ. ಆದರೂ ಈ ಬಾರಿ ಬೆಂಗಳೂರು ಟೀಂ ತವರಿನಾಂದ ಆಚೆ ಆಡಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸವನ್ನೇ ನಿರ್ಮಾಣ ಮಾಡುವುದಲ್ಲದೇ, ಟ್ರೋಫಿ ಗೆಲ್ಲುವ ಎಲ್ಲಾ ಭರವಸೆಯನ್ನು ಮೂಡಿಸಿದೆ.

ಸದ್ಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್‌ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಇಂದು (ಮೇ 30) ಎಲಿಮಿನೇಟರ್ ಪಂದ್ಯ ಆಡಲಿವೆ. ಈ ಪಂದ್ಯದಲ್ಲಿ ಗೆದ್ದ ಟೀಂ ಜೂನ್‌ 1ರಂದು ಕ್ವಾಪಿಫೈಯರ್ 2ನಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೆಣಸಲಿದ್ದು, ಇದರಲ್ಲಿ ಜಯಗಳಿಸಿದ ತಂಡವು ಜೂನ್‌ 3ರಂದು ಆರ್‌ಸಿಬಿ ವಿರುದ್ಧ ಫೈನಲ್ ಆಡಲಿದೆ.

ಆದರೆ, ಜೂನ್‌ 3ರಂದು ನಡೆಯುವ ಫೈನಲ್‌ ಪಂದ್ಯಕ್ಕೆ ಮಳೆಯಡ್ಡಿಯ ಆತಂಕ ಎದುರಾಗಿದೆ. ಈಗಾಗಲೇ ಅವಧಿಗೂ ಮುನ್ನ ಮುಂಗಾರು ಎಂಟ್ರಿ ಕೊಟ್ಟಿರುವ ಹಿನ್ನೆಲೆ ದೇಶದ ಬಹುತೇಕ ರಾಜ್ಯಗಳಲ್ಲಿ ಭಾರೀ ಮಳೆ ಮುಂದುವರೆದಿದೆ. ಹಾಗೆಯೇ ಜೂನ್ 3ರಂದು ಕೂಡ ಹಲವೆಡೆ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Take a Poll

ಒಂದು ವೇಳೆ ಆ ದಿನ ಅಹಮದಾಬಾದ್‌ನಲ್ಲಿ ಮಳೆಯಾದ್ರೆ ಪಂದ್ಯ ರದ್ದಾಗುವ ಸಾಧ್ಯತೆ ಇರುತ್ತದೆ. ರದ್ದಾದ್ರೆ, ಮಾರನೇ ದಿನಕ್ಕೆ ಪಂದ್ಯ ಮುಂದೂಡಿಕೆ ಮಾಡುವ ಸಾಧ್ಯತೆ ಇರುತ್ತದೆ. ಆದರೂ, ಯಾವುದೇ ಅಡ್ಡಿಯಾಗದೇ ಆರ್‌ಸಿಬಿ ಫೈನಲ್‌ ಗೆದ್ದು ಟ್ರೋಫಿ ಗೆದ್ದು ಬರಲಿ ಎನ್ನುವುದೇ ನಮ್ಮೆಲ್ಲರ ಆಶಯವಾಗಿದೆ. ಮತ್ತೊಂದೆಡೆ ಅಭಿಮಾನಿಗಳು ಸಹ ಈ ಬಾರಿ ಆರ್‌ಸಿಬಿ ಐಪಿಎಲ್‌ ಟ್ರೋಫಿ ಎತ್ತಲಿದೆ ಎನ್ನುವ ಭರವಸೆಯಲ್ಲಿದ್ದಾರೆ. ಅಷ್ಟರ ಮಟ್ಟಿಗೆ ಆರ್‌ಸಿನಿ ಈ ಬಾರಿ ಆರಂಭದಿಂದ ಉತ್ತಮ ಪ್ರದರ್ಶನ ತೋರುವ ಮೂಲಜ ಫೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದೆ.

* ಎಲಿಮಿನೇಟರ್ ಪಂದ್ಯ - ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ (ಮೇ 30, 2025)
* ಕ್ವಾಲಿಫೈಯರ್ 2 ಪಂದ್ಯ - ಅಹಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ (ಜೂನ್‌ 1, 2025)
* ಫನಲ್‌ ಪಂದ್ಯ - ಅಹಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ (ಜೂನ್‌ 3, 2025)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+