RCB: 228 ರನ್ ಓಡಾಡಿಸಿಕೊಂಡು ಹೊಡೆದ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ, ಹೊಸ ಇತಿಹಾಸ...
ಹೊಡಿ ಮಗ.. ಹೊಡಿ ಮಗ.. ಬಿಡಬೇಡ ಅವ್ನ... ಹಿಂಗೆ ಇವತ್ತು ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ 'ಲಖನೌ ಸೂಪರ್ ಜೈಂಟ್ಸ್' ತಂಡವನ್ನ ಓಡಾಡಿಸಿ ಓಡಾಡಿಸಿ ಬಾರಿಸಿದೆ. 227 ರನ್ ಬಾರಿಸಿ ಎಗರಾಡುತ್ತಿದ್ದ ರಿಷಬ್ ಪಂತ್ & ಲಖನೌ ಸೂಪರ್ ಜೈಂಟ್ಸ್ ನಮ್ಮ ಬೆಂಗಳೂರು ತಂಡಕ್ಕೆ ಚಾಲೆಂಜ್ ಹಾಕಿದ್ದರು. ಹೀಗಿದ್ದಾಗಲೇ, 228 ರನ್ ಓಡಾಡಿಸಿಕೊಂಡು ಹೊಡೆದ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ, ಹೊಸ ಇತಿಹಾಸ...
ನಮ್ಮ ಆರ್‌ಸಿಬಿ ಅಂದ್ರೆ ಬೆಂಗಳೂರು ತಂಡ... ಕನ್ನಡಿಗರ ತಂಡ... ರಾಯಲ್ ಚಾಲೆಂಜರ್ಸ್ ಬೆಂಗಳೂರು.. ಹೀಗೆ ಕನ್ನಡ ಕ್ರಿಕೆಟ್ ಅಭಿಮಾನಿಗಳು ಆರ್‌ಸಿಬಿ ಪರವಾಗಿ ಗಟ್ಟಿಯಾಗಿಯೇ ನಿಲ್ಲುತ್ತಾರೆ. ಆರ್‌ಸಿಬಿ ಹೆಸರು ಕೇಳಿದರೆ ಸಾಕು ಇಡೀ ಕ್ರಿಕೆಟ್ ಜಗತ್ತು ಹುಚ್ಚೆದ್ದು ಕುಣಿಯುತ್ತದೆ. ಯಾಕಂದ್ರೆ ಆರ್‌ಸಿಬಿ ತಂಡಕ್ಕೆ ಕೋಟಿ ಕೋಟಿ ಫ್ಯಾನ್ಸ್ ಇದ್ದಾರೆ. ಇಂತಿಪ್ಪ ಆರ್‌ಸಿಬಿ ತಂಡವು ಇದೀಗ ಮತ್ತೊಂದು ಇತಿಹಾಸ ನಿರ್ಮಾಣ ಮಾಡಿಬಿಟ್ಟಿದೆ! ಹಾಗಾದರೆ ಏನದು ಇತಿಹಾಸ? ಬನ್ನಿ ತಿಳಿಯೋಣ.

ಆರ್‌ಸಿಬಿ ಹೊಸ ಇತಿಹಾಸ ನಿರ್ಮಾಣ!
ಹೌದು, 2025 ಐಪಿಎಲ್ ಕಪ್ ಗೆಲ್ಲಬೇಕು ಅಂತಾ ತೊಡೆತಟ್ಟಿ ನಿಂತಿರುವ ನಮ್ಮ ಆರ್‌ಸಿಬಿ ತಂಡ ಸಾಕಷ್ಟು ಪ್ಲಾನ್ ಮಾಡಿ ಆಡುತ್ತಿದೆ. ಅದರಲ್ಲೂ, ವಿರಾಟ್ ಕೊಹ್ಲಿ ಹುಡುಗರು ಈ ಬಾರಿ ಯಾವುದೇ ಮಿಸ್ಟೇಕ್ ಮಾಡದೆ ಮುಂದೆ ಸಾಗುತ್ತಿದ್ದಾರೆ. ಹೀಗಿದ್ದಾಗ ಲಖನೌ ವಿರುದ್ಧ ಗೆಲ್ಲಬೇಕಾದ ಅನಿವಾರ್ಯ ಸ್ಥಿತಿಗೆ ಸಿಲುಕಿದ್ದರು. ಆದರೆ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಬೆಂಗಳೂರು ತಂಡಕ್ಕೆ ದೊಡ್ಡ ಆಘಾತ ಎದುರಾಗಿತ್ತು...
ಅಂದಹಾಗೆ 2025ರ ಇಡೀ ಐಪಿಎಲ್ ಟೂರ್ನಿ ಪೂರ್ತಿ ಮಕಾಡೆ ಮಲಗಿದ್ದ ರಿಷಬ್ ಪಂತ್ ಸಮೇತ ಇಡೀ ಲಖನೌ ತಂಡ ಬೆಂಗಳೂರು ವಿರುದ್ಧ ಭರ್ಜರಿ ಆಟ ಶುರು ಮಾಡಿತ್ತು. ಹೀಗೆ ನೋಡ ನೋಡುತ್ತಲೇ 20 ಓವರ್ ಆಡಿ ಬರೋಬ್ಬರಿ 227 ರನ್ ಚಚ್ಚಿತ್ತು. ಈ ಸ್ಕೋರ್ ಚೇಸ್ ಮಾಡುವುದು ಕನಸಿನ ಮಾತು ಅಂತಾ ಹೇಳುವಾಗಲೇ ಆರ್‌ಸಿಬಿ ತಂಡ ಸರಿಯಾಗಿ ಬಾರಿಸಿ ಲಖನೌ ತಂಡಕ್ಕೆ ಬುದ್ಧಿ ಕಲಿಸಿದೆ!
ಆರ್‌ಸಿಬಿ ಕೊಟ್ಟ ಏಟಿಗೆ ಲಖನೌ ಉಡೀಸ್!
227 ರನ್ ಗುರಿ ಬೆನ್ನು ಹತ್ತಿದ್ದ ಬೆಂಗಳೂರು ತಂಡ ಆರ್‌ಸಿಬಿ ಪರವಾಗಿ ವಿರಾಟ್ ಕೊಹ್ಲಿ & ಜಿತೇಶ್ ಶರ್ಮಾ ಅರ್ಧ ಶತಕ ಬಾರಿಸಿ ದೊಡ್ಡ ಕೊಡುಗೆ ನೀಡಿದರು. ವಿರಾಟ್ ಕೊಹ್ಲಿ 30 ಬಾಲ್ ಆಡಿ 54 ರನ್ ಮತ್ತು ಜಿತೇಶ್ ಶರ್ಮಾ 33 ಬಾಲ್ ಆಡಿ 85 ರನ್ ಚಚ್ಚಿದರು. ಇದೇ ಸಮಯದಲ್ಲಿ ಮಯಾಂಕ್ ಅಗರ್ವಾಲ್ ಜಿತೇಶ್ ಶರ್ಮಾಗೆ ಸಾಥ್ ನೀಡಿ 23 ಬಾಲ್ ಆಡುತ್ತಾ ಭರ್ಜರಿ 41 ರನ್ ಬಾರಿಸಿದ್ದಾರೆ. ಹಾಗೇ ಫಿಲ್ ಸಾಲ್ಟ್ ಕೂಡ 19 ಬಾಲ್ ಆಡಿ 30 ರನ್‌ಗಳ ಕೊಡುಗೆ ನೀಡಿದ್ದರು. ಈ ಮೂಲಕ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಕೇವಲ 18.4 ಓವರ್ ಆಡಿ 4 ವಿಕೆಟ್ ಕಳೆದುಕೊಂಡು 230 ರನ್ ಗುರಿ ತಲುಪಿತು...












Click it and Unblock the Notifications