RCB: 'ಈ ಸಲ ಕಪ್ ನಮ್ದೆ' ಎಂದು ಕೂಗಿದ ಎಬಿ ಡಿವಿಲಿಯರ್ಸ್ ; ವಿಡಿಯೋ ನೋಡಿ

ಎಬಿ ಡಿವಿಲಿಯರ್ಸ್ ಬಹುಶ ದಕ್ಷಿಣ ಆಫ್ರಿಕಾಗಿಂತ ಭಾರತದಲ್ಲೇ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಆಟಗಾರ. ಮಿಸ್ಟರ್ 360 ಎಂದೇ ಹೆಸರಾಗಿದ್ದ ಅವರ ಬ್ಯಾಟಿಂಗ್ ನೋಡುವುದೇ ಅಭಿಮಾನಿಗಳ ಹಬ್ಬವಾಗಿತ್ತು. ಆರ್‌ಸಿಬಿ ತಂಡದಲ್ಲಿ ಗೇಲ್, ಕೊಹ್ಲಿ ಜೊತೆ ಸಾಕಷ್ಟು ಪ್ರಸಿದ್ಧಿಯಾಗಿದ್ದು ಎಬಿಡಿ.

ಎಬಿಡಿ ಅಂದರೆ ಇಂದಿಗೂ ಆರ್‌ಸಿಬಿ ಅಭಿಮಾನಿಗಳು ಆಪದ್ಭಾಂಧವ ಎಂದೇ ಕರೆಯುತ್ತಾರೆ. ತಂಡ ಸಂಕಷ್ಟದಲ್ಲಿದ್ದಾಗ ಒತ್ತಡದಲ್ಲಿ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದ ಅವರು, ಹಲವು ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿದ ಉದಾಹರಣೆಗಳಿವೆ. ಎಲ್ಲಾ ಮಾದರಿ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಅವರು, ಸದ್ಯ ಐಪಿಎಲ್‌ನಲ್ಲಿ ವೀಕ್ಷಕ ವಿವರಣೆಗಾರರಾಗಿದ್ದಾರೆ.

RCB AB de Villiers shouts Ee Sala Cup Namde during vacation

ಆರ್‌ಸಿಬಿ ತಂಡದಲ್ಲಿ ಇಲ್ಲದೇ ಇದ್ದರೂ ಅವರಿಗೆ ತಂಡದ ಮೇಲಿನ ಪ್ರೀತಿ, ಅಭಿಮಾನ ಒಂಚೂರು ಕಡಿಮೆಯಾಗಿಲ್ಲ. ಅದೇ ರೀತಿ ಅಭಿಮಾನಿಗಳಿಗೂ ಕೂಡ ಎಬಿಡಿ ಅಂದ್ರೆ ಇಂದಿಗೂ ಅಚ್ಚು ಮೆಚ್ಚು. ಈ ಸಲ ಕಪ್ ನಮ್ದೇ ಎನ್ನುವ ಅಭಿಮಾನಿಗಳ ಕೂಗು ಎಷ್ಟರ ಮಟ್ಟಿಗೆ ಜನಪ್ರಿಯವಾಗಿದೆ ಅಂದರೆ, ಸ್ವತಃ ಎಬಿಡಿ ಕೂಡ ಹಲವು ಬಾರಿ ಈ ಡೈಲಾಗ್ ಹೇಳಿದ್ದಾರೆ.

ತಮ್ಮ ರಜಾ ದಿನಗಳನ್ನು ಎಂಜಾಯ್ ಮಾಡುವಾಗಲೂ ಈ ಸಲ ಕಪ್ ನಮ್ದೇ ಎಂದು ಕೂಗುವ ಮೂಲಕ ಮತ್ತೊಮ್ಮೆ ಆರ್‌ಸಿಬಿ ಅಭಿಮಾನಿಗಳ ಮನಗೆದ್ದಿದ್ದಾರೆ. ಆರ್‌ಸಿಬಿ ಕಪ್ ಗೆಲ್ಲುತ್ತೋ ಇಲ್ವೋ, ಎಬಿಡಿ ಮಾತ್ರ ಅಭಿಮಾನಿಗಳ ಮನಗೆದ್ದಿದ್ದಾರೆ.

ವಿಡಿಯೋ ಹಂಚಿಕೊಂಡ ಎಬಿಡಿ

ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಎಬಿ ಡಿವಿಲಿಯರ್ಸ್ ಅವರು ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ ಅವರು ಇನ್ನೂ ಆರ್ ಸಿಬಿ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ ಎಂದು ತೋರಿಸಿದ್ದಾರೆ. ವೀಡಿಯೊದಲ್ಲಿ, ಅವರು "ಈ ಸಲಾ ಕಪ್ ನಮ್ದೆ" ಎಂದು ಕೂಗುತ್ತಾ ಆನಂದಿಸುತ್ತಿದ್ದಾರೆ. ಈ ಸಲ ಕಪ್‌ ನಮ್ದೇ ಎನ್ನುವ ಕೂಗು ಅಭಿಮಾನಿಗಳು ಆಟಗಾರರಿಗೆ ಭರವಸೆ ತುಂಬಲು ಕಂಡುಕೊಂಡ ಘೋಷವಾಕ್ಯವಾಗಿದೆ.

ಎಬಿ ಡಿವಿಲಿಯರ್ಸ್ 2011 ರಿಂದ 2021 ರವರೆಗೆ ಒಂದು ದಶಕಗಳ ಕಾಲ ಆರ್ ಸಿಬಿ ತಂಡಕ್ಕಾಗಿ ಆಡಿದ್ದಾರೆ. 157 ಪಂದ್ಯಗಳಲ್ಲಿ 4,522 ರನ್ ಗಳಿಸಿದರು. ಅವರು ಐಪಿಎಲ್ ಟ್ರೋಫಿಯನ್ನು ಗೆಲ್ಲದಿದ್ದರೂ, ಅವರ ಪ್ರದರ್ಶನಗಳು ಮತ್ತು ತಂಡ, ನಗರ ಮತ್ತು ಅಭಿಮಾನಿಗಳ ಮೇಲಿನ ಪ್ರೀತಿ ಅವರನ್ನು ಆರ್ ಸಿಬಿಯ ಅತ್ಯಂತ ಪ್ರೀತಿಯ ಆಟಗಾರರನ್ನಾಗಿ ಮಾಡಿದೆ.

ಆರ್‌ಸಿಬಿ ಪ್ಲೇಆಫ್ ತಲುಪಬಹುದೇ?

2024ರ ಐಪಿಎಲ್‌ನಲ್ಲಿ ಆರ್‌ಸಿಬಿ ಹತ್ತು ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಗೆದ್ದಿದ್ದು ಪ್ಲೇ ಆಫ್ ಹಾದಿ ತುಂಬಾ ಕಠಿಣವಾಗಿದೆ. ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದರೂ, ಉಳಿದ ತಂಡಗಳ ಸೋಲು ಗೆಲುವಿನ ಲೆಕ್ಕಾಚಾರದ ಮೇಲೆ ಆರ್‌ಸಿಬಿ ಪ್ಲೇ ಆಫ್ ತಲುಪುವ ಅವಕಾಶ ನಿಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+