Ranji Trophy: ಕರ್ನಾಟಕ ತಂಡಕ್ಕೆ ಇನ್ನಿಂಗ್ಸ್ ಮುನ್ನಡೆ: ತಮಿಳುನಾಡು ಗೆಲುವಿಗೆ ಬೃಹತ್ ಗುರಿ
ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತಮಿಳುನಾಡು ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಬಿಗಿ ಹಿಡಿತ ಸಾಧಿಸಿದೆ. ತಮಿಳುನಾಡು ತಂಡದ ಗೆಲುವಿಗೆ ಇನ್ನೂ 319 ರನ್ ಗಳಿಸಬೇಕಿದ್ದು, ಕರ್ನಾಟಕ ಗೆಲುವಿನ ವಿಶ್ವಾಸದಲ್ಲಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 366 ರನ್ ಗಳಿಗೆ ಆಲೌಟ್ ಆಗಿತ್ತು. ಬಳಿಕ ಮೊದಲ ಇನ್ನಿಂಗ್ಸ್‌ನಲ್ಲಿ ತಮಿಳುನಾಡು 151 ರನ್‌ಗಳಿಗೆ ಆಲೌಟ್ ಆಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 215 ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡಿತ್ತು. ವಿಜಯ್ ಕುಮಾರ್ ವೈಶಾಖ್ 4 ವಿಕೆಟ್ ಪಡೆದು ಮಿಂಚಿದ್ದರು. ಶಶಿ ಕುಮಾರ್ 3 ವಿಕೆಟ್ ಪಡೆದರೆ, ಹಾರ್ದಿಕ್ ರಾಜ್ 2 ವಿಕೆಟ್ ಮತ್ತು ವಿಧ್ವತ್ ಕಾವೇರಪ್ಪ 1 ವಿಕೆಟ್ ಪಡೆದುಕೊಂಡಿದ್ದರು.

ಬಳಿಕ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಕರ್ನಾಟಕ ಕೇವಲ 139 ರನ್‌ಗಳಿಗೆ ಆಲೌಟ್ ಆಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ದೇವದತ್ ಪಡಿಕ್ಕಲ್ ಎರಡನೇ ಇನ್ನಿಂಗ್ಸ್‌ನಲ್ಲಿ 36 ರನ್ ಗಳಿಸಿದರು. ವೈಶಾಖ್ 22 ಮತ್ತು ಹಾರ್ದಿಕ್ ರಾಜ್ 20 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ ಗಳು ರನ್ ಗಳಿಸಲು ಪರದಾಡಿದರು.
ಸಮರ್ಥ್ 2 ರನ್, ನಾಯಕ ಮಯಾಂಕ್ ಅಗರ್ವಾಲ್ 11 ರನ್, ಮನಿಶ್ ಪಾಂಡೆ 14 ರನ್, ಕಿಶನ್ ಬೆದರೆ 9 ರನ್, ಎಸ್ ಶರತ್ 18 ರನ್ ಗಳಿಸಿದರು. ನಿಖಿನ್ ಜೋಸ್ ಮತ್ತು ಶಶಿ ಕುಮಾರ್ ಸೊನ್ನೆಗೆ ಔಟಾದರು. ಮೊದಲ ಇನ್ನಿಂಗ್ಸ್‌ನಲ್ಲಿ 215 ರನ್‌ಗಳ ಮುನ್ನಡೆ ಪಡೆದುಕೊಂಡಿದ್ದ ಕರ್ನಾಟಕ ಎರಡನೇ ಇನ್ನಿಂಗ್ಸ್‌ನಲ್ಲಿ 139 ರನ್ ಗಳಿಸುವ ಮೂಲಕ ತಮಿಳುನಾಡು ತಂಡಕ್ಕೆ 355 ರನ್‌ಗಳ ಗುರಿ ನೀಡಿತು.
ಅಜಿತ್ ರಾಮ್ 5 ವಿಕೆಟ್ ಪಡೆಯುವ ಮೂಲಕ ಕರ್ನಾಟಕ ತಂಡಕ್ಕೆ ಆಘಾತ ನೀಡಿದರು. ಸಾಯಿ ಕಿಶೋರ್ 2 ವಿಕೆಟ್ ಪಡೆದರೆ. ಮೊಹಮ್ಮದ್ ಮತ್ತು ಪ್ರದೋಶ್ ರಂಜನ್ ತಲಾ ಇಂದು ವಿಕೆಟ್ ಪಡೆದರು.
ತಮಿಳುನಾಡಿಗೆ ಆರಂಭಿಕ ಆಘಾತ
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ತಮಿಳುನಾಡು ಮೂರನೇ ದಿನದಾಟದ ಅಂತ್ಯಕ್ಕೆ 36 ರನ್ ಗಳಿಸಿದ್ದು ಮೊದಲ ವಿಕೆಟ್ ಕಳೆದುಕೊಂಡಿದೆ. ಎನ್ ಜಗದೀಶನ್ 8 ರನ್ ಗಳಿಸಿ ಔಟಾದರು. ವಿಮಲ್ ಕುಮಾರ್ ಅಜೇಯ 16 ಮತ್ತು ಪ್ರದೂಶ್ ರಂಜನ್ ಪೌಲ್ ಅಜೇಯ 10 ರನ್ ಗಳಿಸಿದ್ದು ನಾಲ್ಕನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ. ವೈಶಾಖ್ ಮೊದಲ ವಿಕೆಟ್ ಪಡೆದಿದ್ದಾರೆ. ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಗೆದ್ದು ಸಿ ಗುಂಪಿನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುವ ವಿಶ್ವಾಸದಲ್ಲಿದೆ ಕರ್ನಾಟಕ.












Click it and Unblock the Notifications