ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕರು ನನ್ನ ಕೆನ್ನೆಗೆ ಬಾರಿಸಿದ್ದರು: ರಾಸ್ ಟೇಲರ್ ಗಂಭಿರ ಆರೋಪ
ಐಪಿಎಲ್ ಪಂದ್ಯವೊಂದರಲ್ಲಿ ಶೂನ್ಯಕ್ಕೆ ಔಟಾಗಿದ್ದಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕರೊಬ್ಬರು ಕೆನ್ನೆಗೆ ಬಾರಿಸಿದ್ದರು ಎಂದು ನ್ಯೂಜಿಲೆಂಡ್‌ನ ಮಾಜಿ ಬ್ಯಾಟರ್ ರಾಸ್ ಟೇಲರ್ ಗಂಭೀರ ಆರೋಪ ಮಾಡಿದ್ದಾರೆ.
ಇತ್ತೀಚೆಗಷ್ಟೆ ಬಿಡುಗಡೆಯಾದ ತಮ್ಮ ಆತ್ಮಚರಿತ್ರೆಯಲ್ಲಿ ಈ ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಬ್ಲ್ಯಾಕ್ & ವೈಟ್ ಎಂಬ ಶೀರ್ಷಿಕೆಯ ಪುಸ್ತಕದಲ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸ್‌ನೊಂದಿಗೆ ರಾಜಸ್ಥಾನ್ ರಾಯಲ್ಸ್‌ನ ಮಾಲೀಕರಲ್ಲಿ ಒಬ್ಬರು ಪಂಜಾಬ್ ಕಿಂಗ್ಸ್ ವಿರುದ್ಧ ಬೃಹತ್ ಮೊತ್ತವನ್ನು ಚೇಸ್ ಮಾಡುವ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ಹೊರಬಂದ ನಂತರ ತನ್ನ ಮುಖಕ್ಕೆ ಕಪಾಳಮೋಕ್ಷ ಮಾಡಿದ ಘಟನೆಯನ್ನು ಟೇಲರ್ ನೆನಪಿಸಿಕೊಂಡರು.
ಅವರು ಗಟ್ಟಿಯಾಗಿ ಏನು ಹೊಡೆಯಲಿಲ್ಲ ಆದರೆ ಅದು ನಾಟಕೀಯ ಎಂದು ನನಗೆ ಅನಿಸಲಿಲ್ಲ ಎಂದು ರಾಸ್ ಟೇಲರ್ ಐಪಿಎಲ್‌ನಲ್ಲಿ ಮತ್ತೊಂದು ಕರಾಳ ಮುಖವನ್ನು ಪರಿಚಯಿಸಿದ್ದಾರೆ.

"ರಾಜಸ್ಥಾನ ಮೊಹಾಲಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಪಂದ್ಯವನ್ನಾಡಿತ್ತು. 195 ರನ್‌ಗಳನ್ನು ನಾವು ಚೇಸ್ ಮಾಡಬೇಕಿತ್ತು, ಆದರೆ ನಾನು ಶೂನ್ಯಕ್ಕೆ ಔಟಾಗಿದ್ದೆ. ಆ ಪಂದ್ಯದಲ್ಲಿ ನಾವು ಸೋತಿದ್ದೆವು" ಎಂದು ಟೇಲರ್ ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.
ಶೂನ್ಯಕ್ಕೆ ಔಟಾಗಲು ನಿನಗೆ ಹಣ ನೀಡಿಲ್ಲ; "ನಂತರ, ತಂಡ, ಸಹಾಯಕ ಸಿಬ್ಬಂದಿ ಮತ್ತು ಮ್ಯಾನೇಜ್‌ಮೆಂಟ್ ಹೋಟೆಲ್‌ನ ಮೇಲಿನ ಮಹಡಿಯಲ್ಲಿರುವ ಬಾರ್‌ನಲ್ಲಿದ್ದರು. ಶೇನ್ ವಾರ್ನ್ ಮತ್ತು ಲಿಜ್ ಹರ್ಲಿ ಕೂಡ ಅಲ್ಲಿ ಇದ್ದರು," ಎಂದು ಹೇಳಿದ್ದಾರೆ.
"ರಾಯಲ್ಸ್ ಮಾಲೀಕರೊಬ್ಬರು ನನಗೆ ಹೇಳಿದರು, "ರಾಸ್, ಶೂನ್ಯಕ್ಕೆ ಔಟಾಗಲು ನಾವು ನಿಮಗೆ ಮಿಲಿಯನ್ ಡಾಲರ್ ಪಾವತಿಸಿಲ್ಲ ಎಂದು ಹೇಳಿದರು ಮತ್ತು ಮೂರು ಅಥವಾ ನಾಲ್ಕು ಬಾರಿ ಕಪಾಳಮೋಕ್ಷ ಮಾಡಿದರು," ಟೇಲರ್ ಬಹಿರಂಗಪಡಿಸಿದರು.
"ಕೆನ್ನೆಗೆ ಹೊಡೆಯುವಾಗ ಅವರು ನಗುತ್ತಿದ್ದರು ಮತ್ತು ಅವರು ಗಟ್ಟಿಯಾಗಿ ಏನು ಹೊಡೆಯಲಿಲ್ಲ, ಆದರೆ ಇದು ಸಂಪೂರ್ಣವಾಗಿ ನಾಟಕ-ನಟನೆ ಎಂದು ನನಗೆ ಖಚಿತವಿಲ್ಲ. ಪರಿಣಾಮಗಳನ್ನು ಗಮನಿಸಿ ಇದನ್ನು ದೊಡ್ಡದು ಮಾಡಲು ಹೋಗಲಿಲ್ಲ. ಆದರೆ ವೃತ್ತಿಪರ ಕ್ರೀಡಾ ಪರಿಸರಗಳಲ್ಲಿ ಇದು ಅನೇಕ ಕ್ರೀಡೆಗಳಲ್ಲಿ ನಡೆಯುತ್ತಿದೆ ಎಂದು ನಾನು ಊಹಿಸಲು ಸಾಧ್ಯವಾಗಲಿಲ್ಲ" ಎಂದು ಹೇಳಿದ್ದಾರೆ.

ಟೇಲರ್ 2008 ರಿಂದ 2010 ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದರು ಮತ್ತು ನಂತರ 2011 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ ಇದ್ದರು. ಅವರು ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಕೂಡ ಆಡಿದ್ದರು. ನಂತರ ಪುಣೆ ವಾರಿಯರ್ಸ್ ಇಂಡಿಯಾವನ್ನು ಪ್ರತಿನಿಧಿಸಿದ್ದರು.












Click it and Unblock the Notifications