Rahul Dravid: ಟೀಮ್ ಇಂಡಿಯಾ ಟೆಸ್ಟ್ ಕೋಚ್ ಆಗಲು ಸಹ ದ್ರಾವಿಡ್ ನಕಾರ
ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ. ಈ ಟೂರ್ನಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಟೀಮ್ ಇಂಡಿಯಾ ಸಹ ಈ ಟೂರ್ನಿಯಲ್ಲಿ ಭಾಗವಹಿಸಲಿದೆ. ಅಂದಹಾಗೆ ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಇದು ಕೊನೆಯ ಅಸೈನ್ಮೆಂಟ್.
ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರ ಅವಧಿಯು ಇದೇ ಟಿ20 ವಿಶ್ವಕಪ್ ಬಳಿಕ ಮುಕ್ತಾಯವಾಗಲಿದೆ. ಅಸಲಿಗೆ ದ್ರಾವಿಡ್ ಅವರ ಅಧಿಕಾರ ಅವಧಿ ಏಕದಿನ ವಿಶ್ವಕಪ್ 2023ರಲ್ಲಿ ಮುಕ್ತಾಯವಾಗಿತ್ತು. ಆದರೆ ಹತ್ತಿರದಲ್ಲೇ ಟಿ20 ವಿಶ್ವಕಪ್ ಇದ್ದಿದ್ದರಿಂದ, ಇವರ ಒಪ್ಪಂದವನ್ನು ಮುಂದುವರೆಸಲಾಯಿತು. ಈಗ ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದೆ.

ಟೆಸ್ಟ್ ತಂಡದ ಕೋಚ್ ಆಗುವ ಆಸೆಯೂ ಇಲ್ಲ
ಇನ್ನು ಸ್ಪೋರ್ಟ್ಸ್ ಸ್ಟಾರ್ ವರದಿಯ ಪ್ರಕಾರ ರಾಹುಲ್ ದ್ರಾವಿಡ್ ಅವರು ಈ ಸ್ಥಾನದಲ್ಲಿ ಮುಂದುವರೆಯುವ ಆಸಕ್ತಿಯನ್ನು ಹೊಂದಿಲ್ಲ. ಅಲ್ಲದೆ ಅವರ ಒಪ್ಪಂದವನ್ನು ಮುಂದುವರೆಸುವ ಇಚ್ಛೆಯೂ ಅವರಿಗಿಲ್ಲ. ತಂಡದ ಮ್ಯಾನೇಜ್ಮೆಂಟ್ ನ ಕೆಲವರು ನೀವು ಟೆಸ್ಟ್ ತಂಡಕ್ಕಾದರೂ ಕೋಚಿಂಗ್ ಮಾಡಿ ಎಂದು ಕೇಳಿಕೊಂಡಿದ್ದರು. ಆದರೆ ದ್ರಾವಿಡ್ ಇವರ ಮನವಿಯನ್ನು ಸಹ ನಯವಾಗಿ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಒಂದು ವೇಳೆ ದ್ರಾವಿಡ್ ಟೆಸ್ಟ್ ತಂಡದ ಕೋಚ್ ಆಗುವ ಇಂಗಿತವನ್ನು ವ್ಯಕ್ತ ಪಡಿಸಿದ್ದರೆ, ಟೀಮ್ ಇಂಡಿಯಾ ಇನ್ನು ಎರಡೂ ಫಾರ್ಮೆಟ್‌ಗೆ ಬೇರೆ ಬೇರೆ ಕೋಚ್ ನೇಮಿಸಬೇಕಿತ್ತು. ಆದರೆ ಈಗ ಹಾಗೆ ಆಗುವುದಿಲ್ಲ.

ದ್ರಾವಿಡ್ ಸ್ಥಾನ ತುಂಬುವುದು ಯಾರು?
ರಾಹುಲ್ ದ್ರಾವಿಡ್ ಅವರ ಅನುಪಸ್ಥಿತಿಯಲ್ಲಿ ತಂಡದ ಕೋಚ್ ಸ್ಥಾನವನ್ನು ತುಂಬಿದ್ದ ವಿವಿಎಸ್ ಲಕ್ಷ್ಮಣ್ ಅವರು, ಭಾರತ ತಂಡದ ಮುಂದಿನ ಕೋಚ್ ಆಗಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿದ್ದವು. ಆದರೆ ವರದಿಯ ಪ್ರಕಾರ ಅವರಿಗೆ ಈ ಹುದ್ದೆಯಲ್ಲಿ ಆಸಕ್ತಿ ಇಲ್ಲ ಎಂಬ ಮಾಹಿತಿಗಳು ತಿಳಿದು ಬಂದಿವೆ. ಟೀಮ್ ಇಂಡಿಯಾ ಕೋಚ್ ಹುದ್ದೆಗೆ ದೇಶ ಹಾಗೂ ವಿದೇಶಿ ಕೋಚ್‌ಗಳಿಗೂ ಅರ್ಜಿ ಆಹ್ವಾನಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
ಟೀಮ್ ಇಂಡಿಯಾದ ಕೋಚ್ ಭಾರತದ್ದವರೇ ಆಗಿರಬೇಕೋ ಅಥವಾ ವಿದೇಶಿಗರು ಆಗಿರಬೇಕು ಎಂಬುದನ್ನು ಕ್ರಿಕೆಟ್ ಸಲಹಾ ಸಮಿತಿ (CAC) ವಿವೇಚನೆಗೆ ಬಿಟ್ಟಿದ್ದು.
ಕೋಚ್ ಸ್ಥಾನದ ಮೇಲೆ ಇವರ ಕಣ್ಣು
ಟೀಮ್ ಇಂಡಿಯಾದ ಹೆಡ್ ಕೋಚ್ ಆಗುವ ಕನಸನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಚ್ ಮಾಡುತ್ತಿರುವ ವಿದೇಶಿ ಕೋಚ್‌ಗಳು ಸಹ ಕಾಣುತ್ತಿದ್ದಾರೆ. ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಈ ಸ್ಥಾನದ ಮೇಲೆ ಕಣ್ಣು ನೆಟ್ಟಿರುವ ಪ್ರಮುಖರು. ಲಕ್ನೋ ಸೂಪರ್ ಜೈಂಟ್ಸ್ ತಂಡದ ತರಬೇತುದಾರ ಜಸ್ಟಿನ್ ಲ್ಯಾಂಗರ್ ಸಹ ಅವಕಾಶ ಸಿಕ್ಕರೆ ಇನ್ನೊಂದು ಚಾನ್ಸ್ ನೋಡೋಣ ಎಂದು ನೋಡುತ್ತಿದ್ದಾರೆ.












Click it and Unblock the Notifications