Ajinkya Rahane: ವೈಭವ್ ಸೂರ್ಯವಂಶಿ ಪೋಷಕರಿಗೆ ಮಹತ್ವದ ಸಲಹೆ ನೀಡಿದ ಅಜಿಂಕ್ಯ ರಹಾನೆ

Ajinkya Rahane: ಟೀಮ್ ಇಂಡಿಯಾ ಕ್ರಿಕೆಟ್‌ನ ಉದಯೋನ್ಮುಖ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ತಮ್ಮ ಆಕ್ರಮಣಕಾರಿ ಆಟದ ಮೂಲಕ ಕ್ರಿಕೆಟ್‌ ದಿಗ್ಗಜರ ಗಮನ ಸಳೆದಿದ್ದಾರೆ. ಇದೀಗ ಭಾರತದ ಮಾಜಿ ಕ್ರಿಕೆಟರ್ ಅಜಿಂಕ್ಯ ರಹಾನೆ ಅವರು ವೈಭವ್‌ಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ.

ಭಾರತೀಯ ಕ್ರಿಕೆಟ್‌ನ 15 ವರ್ಷದ ಅದ್ಭುತ ಪ್ರತಿಭೆ ವೈಭವ್ ಸೂರ್ಯವಂಶಿ ಕುರಿತು ಭಾರತ ತಂಡದ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಮಹತ್ವದ ಹೇಳಿಕೆ ನೀಡಿದ್ದಾರೆ. ವೈಭವ್ ಅವರ ಭವಿಷ್ಯ ರೂಪಿಸುವಲ್ಲಿ ಅವರ ಕುಟುಂಬದ ಪಾತ್ರ ಅತ್ಯಂತ ಪ್ರಮುಖವಾಗಿದೆ ಹಾಗೂ ಅವರು ಶಿಸ್ತು ಮತ್ತು ಸರಳತೆಯನ್ನ ಕಾಯ್ದುಕೊಳ್ಳುವುದು ಅಗತ್ಯ ಎಂದು ಹೇಳಿದ್ದಾರೆ.

Rahane Gives Crucial Advice to Vaibhav Suryavanshi Family Support Key to Team India Star s Future

ವೈಭವ್‌ ಕುರಿತು ರಹಾನೆ ಮಹತ್ವದ ಸಲಹೆ

ಮೈಕೆಲ್ ವೋಗನ್, ಅಲಸ್ಟ್ರೇರ್ ಕುಕ್, ಡೇವಿಡ್ ಲಾಯ್ಡ್ ಮತ್ತು ಫಿಲ್ ಟಫ್ನೆಲ್ ಅವರೊಂದಿಗಿನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅಜಿಂಕ್ಯ ರಹಾನೆ, 'ಪ್ರಸ್ತುತ ವೈಭವ್‌ ಸೂರ್ಯವಂಶಿಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ. ಈ ವಯಸ್ಸಿನಲ್ಲಿ ಕುಟುಂಬವೇ ಆತನಿಗೆ ಬೆನ್ನೆಲುಬಾಗಿ ನಿಲ್ಲಬೇಕು. ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲೇ ಹೆಚ್ಚಿನ ಪ್ರಸಿದ್ಧಿ, ಆಕರ್ಷಣೆ, ಪ್ರಯಾಣ ಹಾಗೂ ಆಡಂಬರಗಳು ಹೆಚ್ಚಾಗುತ್ತವೆ. ಇಂತಹ ಸಂದರ್ಭದಲ್ಲಿ ಆತನ ಕುಟುಂಬ ಗಟ್ಟಿಯಾಗಿ ನಿಂತು, ಯಾವುದು ಮುಖ್ಯ ಎಂಬುದನ್ನು ತಿಳಿಸಬೇಕು. ಈ ಮೂಲಕ ಮುಂಬರುವ 5 ರಿಂದ 10 ವರ್ಷಗಳ ಕಾಲ ಆತನನ್ನು ಶಿಸ್ತಿನಿಂದ ಇರುವಂತೆ ನೋಡಿಕೊಳ್ಳಬೇಕು,' ಎಂದು ಕಿವಿಮಾತು ಹೇಳಿದ್ದಾರೆ.

ಐಪಿಎಲ್ 2026ರ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ 776 ರನ್ ಗಳಿಸಿ ಅತ್ಯಂತ ಕಿರಿಯ ವಯಸ್ಸಿನಲ್ಲಿ 'ಆರೆಂಜ್ ಕ್ಯಾಪ್' ಗೆದ್ದು ದಾಖಲೆ ಬರೆದಿದ್ದ ವೈಭವ್, ಇಂಗ್ಲೆಂಡ್ ಹಾಗೂ ಜಿಂಬಾಬ್ವೆ ವಿರುದ್ಧದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದರು. ಅದರಲ್ಲೂ ಜಿಂಬಾಬ್ವೆ ವಿರುದ್ಧ ಆಕ್ರಮಣಕಾರಿ ಆಟ ಆಡಿ ಮತ್ತೊಮ್ಮೆ ದಿಗ್ಗಜರ ಗಮನ ಸೆಳೆದಿದ್ದರು.

'ಯಾವುದೇ ಅನಗತ್ಯ ಒತ್ತಡ ಹೇರಬಾರದು'

'ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಪೂರ್ಣ ವಿಭಿನ್ನವಾಗಿವೆ. ದೇಶವನ್ನು ಪ್ರತಿನಿಧಿಸುವಾಗ ಇರುವ ಒತ್ತಡವೇ ಬೇರೆ. ಐಪಿಎಲ್‌ನಲ್ಲಿ 4-5 ಓವರ್‌ಗಳಲ್ಲಿ 70 ರನ್ ಚೇಸ್ ಮಾಡುವುದು ಸುಲಭ ಎನಿಸಬಹುದು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದು ಕಷ್ಟ. ಆದ್ದರಿಂದ ಈ ಯುವ ಆಟಗಾರನ ಮೇಲೆ ಯಾವುದೇ ಅನಗತ್ಯ ಒತ್ತಡ ಹೇರಬಾರದು. ಆತನಿಗೆ ಬೆಳೆಯಲು ಸಮಯ ನೀಡಬೇಕು,' ಎಂದು ರಹಾನೆ ಸಲಹೆ ನೀಡಿದ್ದಾರೆ.

ಬಿಸಿಸಿಐ ಈ 15 ವರ್ಷದ ಬಾಲಕನಿಗೆ ಪ್ರತ್ಯೇಕ ಸೌಲಭ್ಯಗಳನ್ನು ಒದಗಿಸಿದ್ದು, ವಿದೇಶಿ ಪ್ರವಾಸಗಳಲ್ಲಿ ಕುಟುಂಬಕ್ಕೂ ಅವಕಾಶ ಮಾಡಿಕೊಟ್ಟಿದೆ. ಮುಂಬರುವ ಏಷ್ಯನ್ ಗೇಮ್ಸ್ ಹಾಗೂ 2028ರ ಒಲಿಂಪಿಕ್ಸ್‌ನಂತಹ ದೊಡ್ಡ ಟೂರ್ನಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಂಬರುವ 2-3 ವರ್ಷಗಳಲ್ಲಿ ಆತ ಹೇಗೆ ತನ್ನ ಆಟವನ್ನು ಮರುರೂಪಿಸಿಕೊಳ್ಳಲಿದ್ದಾನೆ ಎಂಬುದು ಆತನ ದೀರ್ಘಾವಧಿಯ ಕ್ರಿಕೆಟ್ ಭವಿಷ್ಯವನ್ನು ನಿರ್ಧರಿಸಲಿದೆ ಎನ್ನಲಾಗುತ್ತಿದೆ.

ವೈಭವ್ ಸೂರ್ಯವಂಶಿ ಸಾಧನೆಗಳ ವಿವರ

ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ ವೈಭವ್ ಸೂರ್ಯವಂಶಿ 16 ಪಂದ್ಯಗಳಿಂದ 776 ರನ್ ಕಲೆಹಾಕಿ ಅತ್ಯಂತ ಕಿರಿಯ ವಯಸ್ಸಿನಲ್ಲಿ 'ಆರೆಂಜ್ ಕ್ಯಾಪ್' ಗೆದ್ದ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಇನ್ನೂ ಅಂತರರಾಷ್ಟ್ರೀಯ ಟಿ20ಯಲ್ಲಿ ಜಿಂಬಾಬ್ವೆ ವಿರುದ್ಧ 151 ರನ್ ಬಾರಿಸಿ 'ಪ್ಲೇಯರ್ ಆಫ್ ದಿ ಸೀರೀಸ್' ಪ್ರಶಸ್ತಿ ತನ್ನದಾಗಿಸಿಕೊಂಡರು.

ಜೋಸ್ ಬಟ್ಲರ್ ಅಚ್ಚರಿ ಭವಿಷ್ಯ

ಈವರೆಗೆ 40ಕ್ಕೂ ಹೆಚ್ಚು ಟಿ-20 ಪಂದ್ಯಗಳನ್ನಾಡಿರುವ ವೈಭವ್ ಸೂರ್ಯವಂಶಿ ಅವರು 216ಕ್ಕೂ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 1,600ಕ್ಕೂ ಹೆಚ್ಚು ರನ್‌ಗಳನ್ನು ಸಿಡಿಸಿದ್ದಾರೆ. ಇನ್ನೂ ಟಿ20 ಕ್ರಿಕೆಟ್‌ನ ಸಾರ್ವಕಾಲಿಕ ಅತ್ಯಧಿಕ ರನ್ ಗಳಿಸಿ ವಿಶ್ವದಾಖಲೆ ಮಾಡಿದ ಇಂಗ್ಲೆಂಡ್‌ನ ಜೋಸ್ ಬಟ್ಲರ್ ಅವರು, 'ನನ್ನ ಟಿ20 ರನ್ ದಾಖಲೆಯನ್ನು ಮುಂದಿನ ದಿನಗಳಲ್ಲಿ ಮುರಿಯುವ ತಾಕತ್ತು ಭಾರತದ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿಗೆ ಇದೆ,' ಎಂದು ಭವಿಷ್ಯ ನುಡಿದು ಗಮನ ಸೆಳೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+