ಆರ್‌ಸಿಬಿ ಐಪಿಎಲ್ 2025 ಟ್ರೋಫಿ ಗೆದ್ದಿದ್ದು ಹೇಗೆ? ಆರ್.ಅಶ್ವಿನ್ ಹೇಳಿಕೆ ಭಾರೀ ವೈರಲ್
ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿಯಾಗಿ ಗೆದ್ದು 17 ವರ್ಷಗಳ ಬಳಿ ಮೊಟ್ಟ ಮೊದಲ ಬಾರಿ ಟ್ರೋಫಿಗೆ ಮುತ್ತಿಟ್ಟಿತು. ಈ ರಾಯಲ್ ತಂಡದ ಗೆಲುವನ್ನು ಬರೀ ಕರ್ನಾಟಕ ಮಾತ್ರವಲ್ಲದೆ, ಇಡೀ ದೇಶವೆ ಸಂಭ್ರಮಿಸಿತು. ಬಳಿಕ ತುಂಬಾ ಬೆಳವಣಿಗೆಗಳಾದ್ವು.. ಈಗಲೂ ಆಗುತ್ತಲಿವೆ. ಈ ನಡುವೆಯೇ ಆರ್‌ಸಿಬಿ ಟ್ರೋಫಿ ಗೆಲುವಿನ ಬಗ್ಗೆ ಆರ್.ಅಶ್ವಿನ್ ಹೇಳಿಕೆಯೊಂದನ್ನು ನೀಡಿದ್ದು, ಇದು ಸಖತ್ ವೈರಲ್ ಆಗುತ್ತಿದೆ.
ಆರ್ ಅಶ್ವಿನ್ ಅವರ ಬುದ್ಧಿಗೆ ಏನಾಗಿದೆಯೋ ಗೊತ್ತಿಲ್ಲ..ಆರ್‌ಸಿಬಿ ಹಾಗೂ ಕೊಹ್ಲಿ ಅಂದ್ರೆ ಸಾಕು ಉರಿದುಬೀಳುತ್ತಿರುತ್ತಾರೆ. ಆದರೆ, ಇದೀಗ ಆರ್‌ಸಿಬಿ ಹೇಗೆ ಟ್ರೋಫಿ ಗೆದ್ದಿತು ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

2025ರ ಮೆಗಾ ಹರಾಜಿನ ಸಮಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಅವರ ಮೇಲೆ ಕಣ್ಣಿಡುವಂತೆ ಎಲ್ಲಾ ಐಪಿಎಲ್ ತಂಡಗಳಿಗೆ ಸಲಹೆ ನೀಡಿದೆ. ಆದರೆ, ನನ್ನ ಮಾತುಗಳನ್ನು ನಿರ್ಲಕ್ಷ್ಯಿಸಿದರು ಎಂದು ಟಿಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಆರ್.ಅಶ್ವಿನ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.
2024ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಟಿಮ್ ಡೇವಿಡ್ ಅವರನ್ನು 2025ರಲ್ಲಿ ಕೈಬಿಡಲಾಯಿತು. ಆಗ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 3,00,00,000 ರೂಪಾಯಿಗೆ ಖರೀದಿ ಮಾಡಿತು. ಆದರೆ, ಅವರು ಆರ್‌ಸಿಬಿ ಪರ ಅಷ್ಟೇ ನಿಯತ್ತಾಗಿ ಅಬ್ಬರದ ಬ್ಯಾಟ್ ಬೀಸುವ ಮೂಲಕ ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸಿದ್ದರು. ಆದರೆ, ಟೀಮ್ ಡೇವಿಡ್ ಅವರನ್ನು ನನ್ನ ಮಾತಿನಂತೆ ಬೇರೆ ಯಾವ ತಂಡವೂ ಖರೀದಿ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಿಮ್ ಡೇವಿಡ್ ನಡೆ ಆರ್‌ಸಿಬಿಗೆ ವರವಾಗಿ ಸಿಕ್ಕಿದ್ದು, ಇದರಿಂದ ತಂಡಕ್ಕೆ ಮತ್ತಷ್ಟು ಬಲ ಬಂದಂತಾಯಿತು. 17 ವರ್ಷಗಳ ಬಳಿಕ ಆರ್‌ಸಿಬಿ ಚೊಚ್ಚಲ ಟ್ರೋಫಿಗೆ ಗೆಲುವಿಗೆ ಟಿಮ್ ಡೇವಿಡ್ ಅವರ ಪಾತ್ರವೂ ಪ್ರಮುಖವಾಗಿದೆ. ಐಪಿಎಲ್ 2025ರಲ್ಲಿ 12 ಪಂದ್ಯಗಳನ್ನ ಆಡಿದ ಅವರು ಅಬ್ಬರದ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳಿಗೆ ನಡುಕ ಹುಟ್ಟಿಸಿದ್ದರು.
ಇನ್ನು ಐಪಿಎಲ್ 2025ನೇ ಆವೃತ್ತಿಯಲ್ಲಿ ಸಿಎಸ್‌ಕೆ ಪರ ಆಡಿದ್ದ ಆರ್.ಅಶ್ವಿನ್ ಅವರು ಹರಾಜಿನಲ್ಲಿ ಟಿಮ್ ಡೇವಿಡ್ ಅವರನ್ನು ಹಿಂಬಾಲಿಸಲು ಎಲ್ಲಾ ತಂಡಗಳಿಗೆ ಶಿಫಾರಸು ಮಾಡಿದ್ದೆ. ಆದರೆ, ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿ ಮಾಡಿದ್ದು ಉತ್ತಮ ನಡೆ ಎಂದು ಹೇಳಿದರು. ಈ ಹೇಳಿಕೆ ಹೇಗಿದೆ ಅಂದ್ರೆ, ಆರ್‌ಸಿಬಿ ಟ್ರೋಫಿ ಗೆದ್ದಿದ್ದೇ ತಪ್ಪು.. ಗೆಲ್ಲಲೇಬಾರದಾಗಿತ್ತು ಎಂಬಂತಿದೆ.
"ಕೆಲ ಐಪಿಎಲ್ ತಂಡಗಳಿಗೆ ಕಳೆದ ಮೆಗಾ ಹರಾಜಿಗೂ ಮುನ್ನ ಅವರನ್ನು ಆಯ್ಕೆ ಮಾಡಿಕೊಳ್ಳಲು ಹೇಳಿದ್ದೆ. ಆದರೆ, ಅವರೆಲ್ಲರೂ, ಇಲ್ಲ, ಅವರ ಆಟದಲ್ಲಿ ತೀವ್ರವಾಗಿ ಕುಸಿತ ಕಂಡಿದೆ ಎಂದು ಹೇಳಿದರು," ಅಂತಾ ಆರ್.ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
"ಟಿ-20 ಕ್ರಿಕೆಟ್‌ನ ಭವಿಷ್ಯವು ಅತ್ಯುತ್ತಮ, ಬಲವಾದ ಮೈಕಟ್ಟು ಹೊಂದಿರುವವರ ಮೇಲೆ ಇರುತ್ತದೆ. ವೈಡ್ ಲೈನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ತರದಿದ್ದರೆ, ಅವರು ಪ್ರಾಬಲ್ಯ ಸಾಧಿಸುತ್ತಾರೆ. ಆರ್‌ಸಿಬಿ ಮೂಲ ಬೆಲೆ 3 ಕೋಟಿ ರೂಪಾಯಿಗೆ ಖರೀದಿಸಿದ ಆಟಗಾರನೇ ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದಾನೆ. ಆಸ್ಟ್ರೇಲಿಯಾ ಅವರನ್ನು ಮೇಲಿನ ಕ್ರಮಾಂಕದಲ್ಲಿ ಕಳುಹಿಸುವುದನ್ನು ನೋಡಲು ಸಂತೋಷ ಆಗಿದೆ. ಆರ್‌ಸಿಬಿಗೆ ಇದು ನಿಜವಾದ ಡೀಲ್ ಆಗಿದೆ," ಎಂದು ಅವರು ಹೇಳಿದರು.
ಆರ್.ಅಶ್ವಿನ್ ಆರ್‌ಸಿಬಿ ಅಂದ್ರೆ ಸಾಕು ಉರಿದು ಬೀಳುತ್ತಿದ್ದರು. ಆದರೆ, ಇದೀಗ ಮೇಲ್ಕೋಟಕ್ಕೆ ಹೊಗಳಿದ್ದು, ಇದು ಗೆದ್ದೆತ್ತಿನ ಬಾಲ ಹಿಡಿದಂತೆ ಎಂಬಂತಾಗಿದೆ. "ಯಾವಾಗಲೂ ಗೆದ್ದೆತ್ತಿನ ಬಾಲ ಹಿಡಿಯಯವುದೇ ಅವರ ಕೆಲಸ," ಎಂದು ಕೆಲ ನೆಟ್ಟಿಗರು ಹೇಳುತ್ತಿದ್ದಾರೆ. ಮತ್ತೆ ಕೆಲವರು "ಆರ್‌ಸಿಬಿಗೆ ಟಿಮ್ ಡೇವಿಡ್ ಬರಬಾರದಿತ್ತು. ಆರ್‌ಸಿಬಿ ಟ್ರೋಫಿನೇ ಹೊಡೆಯಬಾರದಿತ್ತು ಎನ್ನುವ ರೀತಿಯಲ್ಲಿ ಅವರು ಹೇಳಿಕೆ ನೀಡಿದ್ದಾರೆ," ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.












Click it and Unblock the Notifications