Prema Rawat: 14, 50..ಆರ್‌ಸಿಬಿ ಸ್ಟಾರ್ ಆಟಗಾರ್ತಿ ವಿಶ್ವದಾಖಲೆ, ಪಾಕ್‌ ಸುಂದ್ರಿ ಫಾತಿಮಾ ಸನಾ ರೆಕಾರ್ಡ್‌ ಬ್ರೇಕ್

Prema Rawat: ಭಾರತದ ಆಲ್‌ರೌಂಡರ್ ಹಾಗೂ ಆರ್‌ಸಿಬಿ ಆಟಗಾರ್ತಿ ಪ್ರೇಮಾ ರಾವತ್ ಅವರು ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ಬಾರಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಸೀನಿಯರ್ ಮಹಿಳೆಯರ ಟಿ20 ಟ್ರೋಫಿ ಪಂದ್ಯದಲ್ಲಿ ಅವರು ಈ ಅಪರೂಪದ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಭಿಮಾನಿಗಳಿಗೆ ಹಾಗೂ ಭಾರತೀಯ ಕ್ರಿಕೆಟ್‌ಗೆ ಅತ್ಯಂತ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಡಬ್ಲ್ಯೂಪಿಎಲ್‌ನಲ್ಲಿಆರ್‌ಸಿಬಿ ತಂಡದ ಪ್ರಮುಖ ಆಲ್‌ರೌಂಡರ್ ಆಗಿರುವ ಪ್ರೇಮಾ ರಾವತ್ ಸೀನಿಯರ್ ಮಹಿಳೆಯರ ಟಿ20 ಟ್ರೋಫಿ ಪಂದ್ಯದಲ್ಲಿ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ಐತಿಹಾಸಿಕ ಜಾಗತಿಕ ದಾಖಲೆ ನಿರ್ಮಿಸಿದ್ದಾರೆ.

Prema Rawat Royal Challengers Bengaluru s Star player Smashes Women s T20 Record With 14-Ball Fifty

ಆರ್‌ಸಿಬಿ ಪ್ರೇಮಾ ರಾವತ್ ವಿಶ್ವದಾಖಲೆ

ಉತ್ತರಾಖಂಡ್ ತಂಡವನ್ನು ಪ್ರತಿನಿಧಿಸುತ್ತಿರುವ 24 ವರ್ಷದ ಪ್ರೇಮಾ ರಾವತ್ ಅವರು ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದರು. 357ರ ಆಕರ್ಷಕ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರು ಕೇವಲ 14 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಿತ ಅಜೇಯ ಅಜೇಯ ಅರ್ಧಶತಕ (50)* ಸಿಡಿಸಿ ಸಾರ್ವಕಾಲಿಕ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲೂ ಮಿಂಚಿಂಗ್

ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲೂ ಕಮಾಲ್ ಮಾಡಿದ ಪ್ರೇಮಾ ರಾವತ್, ತಾವು ಎಸೆದ 4 ಓವರ್‌ಗಳಲ್ಲಿ ಕೇವಲ 12 ರನ್ ನೀಡಿ 2 ಪ್ರಮುಖ ವಿಕೆಟ್ ಕಬಳಿಸಿದರು. ಇವರ ಈ ಆಲ್‌ರೌಂಡ್ ಪ್ರದರ್ಶನದಿಂದಾಗಿ ಉತ್ತರಾಖಂಡ್ ತಂಡ ಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ, ಅಂತಿಮವಾಗಿ 89 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ ಆಟಗಾರ್ತಿಯರ ಸಾಲಿನಲ್ಲಿ ಪ್ರೇಮಾ ರಾವತ್ ಇದೀಗ ಅಗ್ರಸ್ಥಾನಕ್ಕೇರಿದ್ದಾರೆ. ಹಾಗಾದ್ರೆ ನಂತರ ಸ್ಥಾನಗಳಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ಪ್ರಶ್ನೆ ಬಹುತೇಕ ಮಂದಿ ತಲೆಯಲ್ಲಿರುತ್ತದೆ. ಅದೆಲ್ಲದಕ್ಕೂ ಉತ್ತರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಪಾಕಿಸ್ತಾನದ ಫಾತಿಮಾ ಸನಾ ರೆಕಾರ್ಡ್‌ ಬ್ರೇಕ್

* ಫಾತಿಮಾ ಸನಾ (ಪಾಕಿಸ್ತಾನ): ಅಂತಾರಾಷ್ಟ್ರೀಯ ಮಹಿಳಾ ಟಿ20 ಯಲ್ಲಿ ಜಿಂಬಾಬ್ವೆ ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ದಾಖಲೆ ಹೊಂದಿದ್ದರು.

* ಮೇರಿ ಕೆಲ್ಲಿ ಮತ್ತು ಲಾರಾ ಹ್ಯಾರಿಸ್: ಇಂಗ್ಲೆಂಡ್‌ನ ಮೇರಿ ಕೆಲ್ಲಿ ಹಾಗೂ ಆಸ್ಟ್ರೇಲಿಯಾದ ಲಾರಾ ಹ್ಯಾರಿಸ್ ಕೂಡ ದೇಶೀಯ ಟಿ20 ಕ್ರಿಕೆಟ್‌ನಲ್ಲಿ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಇದೀಹ ಈ ಎಲ್ಲಾ ಆಟಗಾರ್ತಿಯರ ದಾಖಲೆಯನ್ನು ಮೀರಿಸಿದ ಪ್ರೇಮಾ ರಾವತ್, ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ವಿಶ್ವ ಕ್ರಿಕೆಟ್‌ನ ಗಮನ ಸೆಳೆದಿದ್ದಾರೆ.

ಕಡಿಮೆ ಎಸೆತಗಲ್ಲಿ ಅರ್ಧಶತಕ ಸಿಡಿಸಿದವರು

* ಪ್ರೇಮಾ ರಾವತ್ (ಭಾರತ) - 14 ಎಸೆತಗಳು
* ಫಾತಿಮಾ ಸನಾ (ಪಾಕಿಸ್ತಾನ) - 15 ಎಸೆತಗಳು
* ಮೇರಿ ಕೆಲ್ಲಿ (ಇಂಗ್ಲೆಂಡ್‌) - 15 ಎಸೆತಗಳು
* ಲಾರಾ ಹ್ಯಾರಿಸ್ (ಆಸ್ಟ್ರೇಲಿಯಾ) - 15 ಎಸೆತಗಳು

ಸಂತಸದಲ್ಲಿ ಆರ್‌ಸಿಬಿ ಅಭಿಮಾನಿಗಳು

ಮುಂಬರುವ 2027ರ ಡಬ್ಲ್ಯೂಪಿಎಲ್‌ ಆವೃತ್ತಿಗೆ ಮುನ್ನ ಆರ್‌ಸಿಬಿ ಆಲ್‌ರೌಂಡರ್ ನೀಡಿರುವ ಈ ಅದ್ಭುತ ಪ್ರದರ್ಶನವು ತಂಡ ಹಾಗೂ ಅಭಿಮಾನಿಗಳಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ₹1.2 ಕೋಟಿ ನೀಡಿ ಸೇರಿಸಿಕೊಂಡಿದ್ದ ಪ್ರೇಮಾ ರಾವತ್, ತಮ್ಮ ಆಕ್ರಮಣಕಾರಿ ಪ್ರದರ್ಶನವನ್ನು ಸಾಬೀತುಪಡಿಸಿದ್ದಾರೆ.

ಮಧ್ಯಮ ಹಾಗೂ ಕೆಳ ಕ್ರಮಾಂಕದಲ್ಲಿ ಆರ್‌ಸಿಬಿ ತಂಡಕ್ಕೆ ಬೇಕಿದ್ದ ತೀವ್ರ ಆಕ್ರಮಣಕಾರಿ ಬ್ಯಾಟಿಂಗ್ ಸಾಮರ್ಥ್ಯ ಪ್ರೇಮಾ ಅವರಿಂದ ಸಿಗಲಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಈ 14 ಎಸೆತಗಳ ಅರ್ಧಶತಕದೊಂದಿಗೆ ಪ್ರೇಮಾ ರಾವತ್ ಮಹಿಳಾ ಟಿ20 ಕ್ರಿಕೆಟ್‌ನ ದಿಗ್ಗಜರ ದಾಖಲೆಗಳನ್ನು ಧೂಳೀಪಟ ಮಾಡಿ ಗಮನ ಸೆಳೆದಿದ್ದು, ಇವರಿಗೆ ಮೆಚ್ಚುಗೆಗಳ ಸುರಿಮಳೆಯೆ ಹರಿದುಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+