Parthiv Patel: ಜಸ್‌ಪ್ರೀತ್ ಬುಮ್ರಾ ಕಡೆಗಣಿಸಿತ್ತಾ ಆರ್‌ಸಿಬಿ? ಅಚ್ಚರಿ ಸಂಗತಿ ಬಿಚ್ಚಿಟ್ಟ ಪಾರ್ಥಿಲ್ ಪಟೇಲ್‌

IPL RCB: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತೀ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ತಂಡ ಅಂತಾ ಇದ್ರೆ ಅದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಾತ್ರ. ಇದೀಗ ಈ ಹಿಂದೆ ಇದೇ ಆರ್‌ಸಿಬಿಯಲ್ಲಿ ನಡೆದ ಅಚ್ಚರಿ ಸಂಗತಿಗಳ ಬಗ್ಗೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಪಾರ್ಥಿಲ್ ಪಟೇಲ್ ಅವರು ಬಹಿರಂಗಪಡಿಸಿದ್ದಾರೆ.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ಮತ್ತು ಆಟಗಾರರ ಆಯ್ಕೆಯ ಕುರಿತು ಭಾರತದ ಮಾಜಿ ವಿಕೆಟ್‌ ಕೀಪರ್-ಬ್ಯಾಟರ್ ಪಾರ್ಥಿವ್ ಪೇಟೇಲ್ ಮಹತ್ವದ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. 2014ರ ಐಪಿಎಲ್ ಹರಾಜಿನ ವೇಳೆ ಆರ್‌ಸಿಬಿ ಆಡಳಿತ ಮಂಡಳಿ ತಾನು ನೀಡಿದ್ದ ಸಲಹೆಯನ್ನು ಕೇಳಿದ್ದರೆ, ಇಷ್ಟೊತ್ತಿಗೆ ಐದು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮುತ್ತಿತ್ತು ಎಂದು ಅವರು ಅಭಿಪ್ರಾಯ ವ್ಯಕ್ತಡಿಸಿದ್ದಾರೆ.

Parthiv Patel Reveals Royal Challengers Bengaluru Ignored His Advice on Bumrah in IPL 2014 Auction

2014ರ ಹರಾಜಿನಲ್ಲಿ ಏನಾಯಿತು?

ಸಂದರ್ಶನವೊಂದರಲ್ಲಿ ಮಾತನಾಡಿದ ಪಾರ್ಥಿವ್ ಪೇಟೇಲ್ ಅವರು, 2014ರ ಮೆಗಾ ಹರಾಜಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಹರಾಜಿನ ಮೊದಲ ದಿನದಂದು, ಮಧ್ಯಾಹ್ನದ ಊಟದ ವಿರಾಮಕ್ಕೂ ಮುನ್ನವೇ ಆರ್‌ಸಿಬಿ ತಂಡವು ಪಾರ್ಥಿವ್ ಅವರನ್ನು ಖರೀದಿ ಮಾಡಿತು. ಆ ಸಮಯದಲ್ಲಿ ಫ್ರಾಂಚೈಸಿಯಿಂದ ಅವರಿಗೆ ಸಂದೇಶ ಬಂದಾಗ, ಅವರು ವೇಗಿ ಜಸ್‌ಪ್ರೀತ್ ಬುಮ್ರಾ ಅವರ ಹೆಸರನ್ನು ತಂಡಕ್ಕೆ ಸೂಚಿಸಿದ್ದರು.

ಬುಮ್ರಾ ಹೆಸರು ಪರಿಗಣನೆಗೆ ತೆಗೆದುಕೊಳ್ಳದ ಆರ್‌ಸಿಬಿ

'ನಮ್ಮಲ್ಲಿ ಒಬ್ಬ ಅತ್ಯುತ್ತಮ ಮತ್ತು ಪ್ರತಿಭಾವಂತ ಬೌಲರ್ ಇದ್ದಾರೆ, ಅವರನ್ನು ತಂಡಕ್ಕೆ ತೆಗೆದುಕೊಳ್ಳಿ ಎಂದು ಆರ್‌ಸಿಬಿ ಮಂಡಳಿಗೆ ಸಲಹೆ ನೀಡಿದ್ದೆ. ಆದರೆ ಆ ಸಮಯದಲ್ಲಿ ಬುಮ್ರಾ ಅವರ ಸಾಮರ್ಥ್ಯದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಲಿಲ್ಲ,' ಎನ್ನುವ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

'ಬುಮ್ರಾ ಅವರಂತಹ ಬೌಲರ್ ಏನು ಮಾಡಲು ಸಾಧ್ಯ? ಎಂಬ ರೀತಿಯ ಪ್ರತಿಕ್ರಿಯೆ ಆಡಳಿತ ಮಂಡಳಿಯಿಂದ ಬಂದಿತ್ತು. ಇದರಿಂದ ಒಬ್ಬ ಉತ್ತಮ ಬೌಲರ್ ಅನ್ನು ತಂಡಕ್ಕೆ ಸೇರಿಸಿಕೊಳ್ಳುವ ದೊಡ್ಡ ಅವಕಾಶವನ್ನು ಆರ್‌ಸಿಬಿ ಕಳೆದುಕೊಂಡಿತು,' ಎಂದು ಹೇಳಿದ್ದಾರೆ.

ನಾಯಕತ್ವ ಬದಲಾವಣೆ ಕುರಿತು ಮಹತ್ವದ ಮಾಹಿತಿ

ತಮ್ಮ ಈ ಹಳೆಯ ಹೇಳಿಕೆಗಳ ಕುರಿತು ಚರ್ಚಿಸಿದ್ದಕ್ಕಾಗಿ ಮತ್ತು ನಂತರ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಕ್ಕಾಗಿ ಪಾರ್ಥಿವ್ ಪಟೇಲ್ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. 'ನಾನು ಆ ರೀತಿ ಮಾತನಾಡಬಾರದಿತ್ತು. ನನ್ನ ಹೇಳಿಕೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿ, ಕೆಲವರು ತಮಗೆ ಬೇಕಾದಂತೆ ತಪ್ಪಾಗಿ ಅರ್ಥೈಸಿಕೊಂಡರು,' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದರ ಜೊತೆಗೆ ಮತ್ತೊಂದು ಮುಖ್ಯ ವಿಚಾರವನ್ನು ಹಂಚಿಕೊಂಡ ಪಾರ್ಥಿವ್, 2019ರ ಐಪಿಎಲ್ ಆವೃತ್ತಿಗಿಂತ ಮುಂಚಿತವಾಗಿ ವಿರಾಟ್ ಕೊಹ್ಲಿ ಅವರ ಬದಲಿಗೆ ತಂಡದ ನಾಯಕತ್ವ ವಹಿಸಿಕೊಳ್ಳುವಂತೆ ಆರ್‌ಸಿಬಿ ಮಂಡಳಿಯು ತಮ್ಮನ್ನು ಸಂಪರ್ಕಿಸಿತ್ತು. ಅಂದಿನ ಮುಖ್ಯ ತರಬೇತುದಾರ ಗ್ಯಾರಿ ಕರ್ಸ್ಟನ್ ಮತ್ತು ಮೆಂಟರ್ ಆಶಿಶ್ ನೆಹ್ರಾ ಅವರು ಈ ನಾಯಕತ್ವದ ಪ್ರಸ್ತಾಪವನ್ನು ತಮ್ಮ ಮುಂದಿಟ್ಟಿದ್ದರು ಎಂದು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

ಆಕಾಶ್ ಚೋಪ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಇದೇ ವಿಷಯದ ಕುರಿತು ಮಾತನಾಡಿದ ಪಾರ್ಥಿವ್ ಪಟೇಲ್ ಅವರು, 'ನಾನು ಈ ವಿಷಯದ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ ಮೊಯಿನ್ ಅಲಿ ತಮ್ಮ ಸಂದರ್ಶನವೊಂದರಲ್ಲಿ ಇದನ್ನು ಪ್ರಸ್ತಾಪಿಸಿದ್ದರು. ನನಗೆ ಮ್ಯಾನೇಜ್‌ಮೆಂಟ್ ಕಡೆಯಿಂದ ಸಿದ್ಧವಾಗಿರಿ, ನಾವು ಮುಂದಿನ ವರ್ಷಕ್ಕೆ ಈ ಬಗ್ಗೆ ಆಲೋಚಿಸುತ್ತಿದ್ದೇವೆ ಎಂದು ಹೇಳಲಾಗಿತ್ತು,' ಅಂತಾ ತಿಳಿಸಿದ್ದಾರೆ.

'ಆದರೆ ಮರುವರ್ಷ ನನಗೆ ಈ ನಾಯಕತ್ವದ ಭರವಸೆ ನೀಡಿದ್ದ ಆ ಇಬ್ಬರು ವ್ಯಕ್ತಿಗಳನ್ನೇ (ಆಶಿಶ್ ನೆಹ್ರಾ ಮತ್ತು ಗ್ಯಾರಿ ಕರ್ಸ್ಟನ್) ತಂಡದಿಂದ ತೆಗೆದುಹಾಕಲಾಯಿತು. ಹೊಸ ಕೋಚ್‌ಗಳು ಬಂದರು ಮತ್ತು ಆ ಇಡೀ ಸೀಸನ್‌ನಲ್ಲಿ ನನಗೆ ಒಂದೇ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಗಲಿಲ್ಲ,' ಎಂದು ಹೇಳಿಕೊಂಡಿದ್ದಾರೆ.

ಮ್ಯಾನೇಜ್‌ಮೆಂಟ್ ಬದಲಾವಣೆ ಆದರೆ 2019ರ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಆರ್‌ಸಿಬಿ ಆಡಳಿತ ಮಂಡಳಿಯು ಬೌಲಿಂಗ್ ಕೋಚ್ ಆಶಿಶ್ ನೆಹ್ರಾ ಹಾಗೂ ಹೆಡ್ ಕೋಚ್ ಗ್ಯಾರಿ ಕರ್ಸ್ಟನ್ ಇಬ್ಬರನ್ನೂ ಹುದ್ದೆಯಿಂದ ವಜಾಗೊಳಿಸಿತು. 2020ರ ಐಪಿಎಲ್ ಆವೃತ್ತಿಗೆ ಮುನ್ನ ಮೈಕ್ ಹೆಸ್ಸನ್ ಮತ್ತು ಸೈಮನ್ ಕಟಿಚ್ ಆರ್‌ಸಿಬಿ ಈ ಜವಾಬ್ದಾರಿಗಳನ್ನು ವಹಿಸಿಕೊಂಡರು. ಹೊಸ ಮ್ಯಾನೇಜ್‌ಮೆಂಟ್ ಆಗಮಿಸುತ್ತಿದ್ದಂತೆ ಕೊಹ್ಲಿಯನ್ನು ನಾಯಕತ್ವದಿಂದ ತೆಗೆದುಹಾಕುವ ಯೋಜನೆಯು ರದ್ದಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+