Get Updates
Get notified of breaking news, exclusive insights, and must-see stories!

IPL 2025: ಈ ಬಾರಿ ಉಚಿತವಾಗಿ ಐಪಿಎಲ್ ನೋಡಲು ಆಗಲ್ಲ; ಚಂದಾದಾರಿಕೆ ಪರಿಚಯಿಸಿದ ಜಿಯೋ ಸ್ಟಾರ್

2023ರ ಐಪಿಎಲ್‌ಗೆ ಮುನ್ನ ಪ್ರಸಾರ ಹಕ್ಕುಗಳನ್ನು ಪಡೆದಿದ್ದ ಜಿಯೋ ಸಿನಿಮಾ ವೀಕ್ಷಕರಿಗೆ ಉಚಿತವಾಗಿ ಪಂದ್ಯಗಳನ್ನು ವೀಕ್ಷಿಸಲು ಅನುವು ಮಾಡಿಕೊಟ್ಟಿತ್ತು, ಈ ಬಾರಿ ಐಪಿಎಲ್‌ಗೆ ಮುನ್ನ ಜಿಯೋಸ್ಟಾರ್ ಹೆಸರಿನಲ್ಲಿ ವಯಾಕಾಮ್ 18 ಮತ್ತು ಸ್ಟಾರ್ ಇಂಡಿಯಾ ವಿಲೀನವಾಗಿದ್ದು ಡಿಸ್ನಿ ಹಾಟ್‌ಸ್ಟಾರ್ ಈಗ ಜಿಯೋ ಹಾಟ್‌ಸ್ಟಾರ್ ಆಗಿದ್ದು ಇನ್ನು ಮುಂದೆ ಉಚಿತವಾಗಿ ಸ್ಟ್ರೀಮಿಂಗ್ ಲಭ್ಯವಿಲ್ಲ ಎಂದು ಹೇಳಿದೆ.

2023ರಲ್ಲಿ ಜಿಯೋ ಸಿನಿಮಾ ಬರೋಬ್ಬರಿ $3 ಬಿಲಿಯನ್‌ಗೆ ಐಪಿಎಲ್‌ನ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿತ್ತು. ಎರಡು ವರ್ಷ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ನೋಡಲು ಅವಕಾಶ ಮಾಡಿಕೊಟ್ಟಿತ್ತು. ಈದರೆ ಈ ಬಾರಿಯ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಚಂದಾದಾರಿಕೆಯನ್ನು ಖರೀದಿ ಮಾಡಬೇಕಾಗುತ್ತದೆ.

no free ipl 2025 streaming jio hotstar paid model

ಶುಕ್ರವಾರ ಜಿಯೋಸಿನಿಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಅನ್ನು ಜಿಯೋಸ್ಟಾರ್‌ಗೆ ಬದಲಾಗಿದೆ. ಮೊದಲ ಎರಡು ವರ್ಷ ಉಚಿತವಾಗಿ ವೀಕ್ಷಣೆಗೆ ಅವಕಾಶ ಕೊಟ್ಟು, ಬಳಕೆದಾರರನ್ನು ಹೆಚ್ಚಿಸಿಕೊಂಡಿರುವ ಜಿಯೋ ಸಿನಿಮಾ ಇದೀಗ ಜಿಯೋ ಹಾಟ್‌ಸ್ಟಾರ್ ಆಗಿದೆ. ಕಳೆದ ಕೆಲವು ದಿನಗಳ ಹಿಂದೆಯೇ ಜಿಯೋ ಕಡಿಮೆ ಮೊತ್ತದಲ್ಲಿ ಚಂದಾದಾರಿಕೆ ಯೋಜನೆಗಳನ್ನು ಪರಿಚಯಿಸಿತ್ತು, ಆದರೆ ಈಗ ಚಂದಾದಾರಿಕೆ ದುಬಾರಿಯಾಗಿದೆ.

ಮುಂಬರುವ ಋತುವಿನಲ್ಲಿ, ಅಭಿಮಾನಿಗಳು ಚಂದಾದಾರಿಕೆ ಇಲ್ಲದೆ ಐಪಿಎಲ್ ಪಂದ್ಯದ ಕೆಲವು ನಿಮಿಷಗಳನ್ನು ಮಾತ್ರ ವೀಕ್ಷಿಸಲು ಅವಕಾಶ ಇರಲಿದೆ. ಉಚಿತ ನಿಮಿಷಗಳ ಅವಧಿ ಮುಗಿದ ನಂತರ, ಅವರನ್ನು ಚಂದಾದಾರಿಕೆ ಪುಟಕ್ಕೆ ನಿರ್ದೇಶಿಸಲಾಗುತ್ತದೆ.

ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆ ಪ್ಲಾನ್ಸ್

ವೀಕ್ಷಕರ ಅಗತ್ಯಕ್ಕೆ ಅನುಗುಣವಾಗಿ ಮೂರು ರೀತಿಯ ಚಂದಾದಾರಿಕೆ ಯೋಜನೆಗಳನ್ನು ಪರಿಚಯಿಸಲಾಗಿದೆ. ಮೊಬೈಲ್‌ನಲ್ಲಿ ಮಾತ್ರ ವೀಕ್ಷಣೆ ಮಾಡಲು ಮತ್ತು 720p ರೆಸಲ್ಯೂಶನ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದ್ದು ಮೂರು ತಿಂಗಳ ಚಂದಾದಾರಿಕೆಗೆ 149 ರೂಪಾಯಿ ಮತ್ತು ಒಂದು ವರ್ಷದ ಚಂದಾದಾರಿಕೆಗೆ 499 ರೂಪಾಯಿ ಪಾವತಿಸಬೇಕಾಗುತ್ತದೆ.

ಸೂಪರ್ ಪ್ಲಾನ್‌; ಟಿವಿಗಳು, ಲ್ಯಾಪ್‌ಟಾಪ್‌ಗಳು ಮತ್ತು ಮೊಬೈಲ್‌ಗಳು ಸೇರಿದಂತೆ ಎರಡು ಸಾಧನಗಳಲ್ಲಿ ಪೂರ್ಣ ಹೆಚ್‌ಡಿ (1080p) ರೆಸಲ್ಯೂಶನ್ ಮತ್ತು ಡಾಲ್ಬಿ ಅಟ್ಮಾಸ್ ಧ್ವನಿಯೊಂದಿಗೆ ವೀಕ್ಷಣೆ ಮಾಡಲು ಮೂರು ತಿಂಗಳಿಗೆ 299 ರೂಪಾಯಿ ಪಾವತಿಸಬೇಕಾಗುತ್ತದೆ, ಒಂದು ವರ್ಷಕ್ಕೆ 899 ರೂಪಾಯಿ ಪಾವತಿಸಬೇಕಾಗುತ್ತದೆ.

ಪ್ರೀಮಿಯಂ ಯೋಜನೆ; ಡಾಲ್ಬಿ ಅಟ್ಮೋಸ್ ಆಡಿಯೊದೊಂದಿಗೆ 4ಕೆ (2160p) ರೆಸಲ್ಯೂಶನ್‌ನಲ್ಲಿ ನಾಲ್ಕು ಸಾಧನಗಳಲ್ಲಿ ಸ್ಟ್ರಿಮಿಂಗ್‌ಗೆ ಅನುಮತಿ ನೀಡಲಾಗುತ್ತದೆ. ಇದಕ್ಕಾಗಿ 3 ತಿಂಗಳಿಗೆ 499 ಮತ್ತು ವರ್ಷಕ್ಕೆ 1499 ರೂಪಾಯಿ ಪಾವತಿಸಬೇಕಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+