Neeraj Chopra: ಭಾರತಕ್ಕಾಗಿ ಬೆಳ್ಳಿ ಗೆದ್ದುಕೊಟ್ಟ ‘ಚಿನ್ನ’ದ ಹುಡುಗ ನೀರಜ್ ಚೋಪ್ರಾ!

ಭಾರತಕ್ಕೆ ಭರ್ಜರಿ ಸುದ್ದಿ ಸಿಕ್ಕಿದೆ, 'ಒಲಿಂಪಿಕ್ಸ್' ಅಖಾಡದಲ್ಲಿ ಭಾರತ ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿದೆ. ಅದ್ರಲ್ಲೂ ಜಾವೆಲಿನ್ ಥ್ರೋ ವಿಭಾಗದಲ್ಲಿ ಶತಕೋಟಿ ಭಾರತೀಯರ ನಿರೀಕ್ಷೆ ಕಾಪಾಡಿಕೊಂಡು ಬಂದಿದ್ದ 'ಚಿನ್ನ'ದ ಹುಡುಗ ನೀರಜ್ ಚೋಪ್ರಾ ಭರ್ಜರಿಯಾಗಿ ಬೆಳ್ಳಿಯ ಪದಕ ಗೆದ್ದಿದ್ದಾರೆ. ಆದರೆ ಕೊನೆಯ ಹಂತದಲ್ಲಿ ಕೇವಲ 3 ಮೀಟರ್ ಅಂತರದಲ್ಲಿ ಚಿನ್ನದ ಪದಕ ಮಿಸ್ ಮಾಡಿಕೊಂಡಿದ್ದಾರೆ. ಭಾರತದ ನೀರಜ್ ಚೋಪ್ರಾ ಎದುರು 'ಚಿನ್ನ'ದ ಪದಕ ಗೆದ್ದಿದ್ದು ಯಾರು? ಹೇಗಿತ್ತು ನೀರಜ್ ಚೋಪ್ರಾ 'ಒಲಿಂಪಿಕ್ಸ್' ಅಬ್ಬರ?

ಭಾರತ 2024ರ 'ಪ್ಯಾರಿಸ್ ಒಲಿಂಪಿಕ್ಸ್' ಅಖಾಡದಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ. ಹೀಗೆ ಭಾರತದ ಆಟಗಾರರ ಅಬ್ಬರ ಕಂಡು ದೊಡ್ಡ ದೊಡ್ಡ ದೇಶಗಳೇ ಸೈಲೆಂಟ್ ಆಗುತ್ತಿವೆ. ಯಾಕೆ ಅಂದ್ರೆ ಪದಕ ಬೇಟೆಯಲ್ಲಿ ಈ ಹಿಂದೆ ಭಾರತೀಯರು ಸಾಧನೆ ಮಾಡದ ವಿಭಾಗಗಳಲ್ಲೂ ಈ ಬಾರಿ ಭರ್ಜರಿ ಪದಕ ಬೇಟೆ ನಡೆದಿದೆ. ಭಾರತಕ್ಕೆ ಈವರೆಗೂ ಒಟ್ಟು 5 ಪದಕ ಬಂದಿದ್ದು, ಈ ಪೈಕಿ 5ನೇ ಪದಕ ಮಾತ್ರ ಸಖತ್ ಸ್ಪೆಷಲ್ ಆಗಿತ್ತು. ಹಾಗಾದ್ರೆ 5ನೇ ಪದಕದಲ್ಲಿ ಏನದು ವಿಶೇಷತೆ? ಭಾರತಕ್ಕಾಗಿ ಈ ಪದಕ ಗೆಲ್ಲಲು ಎಂತಹ ಕಷ್ಟದ ವಾತಾವರಣ ಇತ್ತು? ಮುಂದೆ ಓದಿ.

Neeraj Chopra Won Silver Medal For India In Javelin Throw

ಭಾರತಕ್ಕಾಗಿ 'ಚಿನ್ನ'ದ ಹುಡುಗನ ಸಾಧನೆ!

'ಟೋಕಿಯೋ ಒಲಿಂಪಿಕ್ಸ್' ಅಖಾಡದಲ್ಲಿ ಭಾರತಕ್ಕಾಗಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಇದೀಗ 'ಪ್ಯಾರಿಸ್ ಒಲಿಂಪಿಕ್ಸ್-2024' ಕ್ರೀಡಾಕೂಟದಲ್ಲೂ ದೊಡ್ಡ ಸಾಧನೆ ಮಾಡಿದ್ದಾರೆ. ಚಿನ್ನದ ಮೇಲೆ ಗುರಿ ಇಟ್ಟಿದ್ದ ಭಾರತದ ಹೆಮ್ಮೆಯ ಪುತ್ರ ನೀರಜ್ ಚೋಪ್ರಾ, ಕೆಲವೇ ಕೆಲವು ಮೀಟರ್ ಅಂತರದಲ್ಲಿ ಚಿನ್ನದ ಪದಕ ಮಿಸ್ ಮಾಡಿಕೊಂಡರು. ಆದರೂ ನೀರಜ್ ಚೋಪ್ರಾ ಭರ್ಜರಿಯಾಗಿ ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ. ಹಾಗಾದ್ರೆ ಹೇಗಿತ್ತು ನೀರಜ್ ಚೋಪ್ರಾ ಅವರ ಆಟ? ಮುಂದೆ ಓದಿ.

ಬೆಳ್ಳಿ ಗೆದ್ದು ಸಂಭ್ರಮಿಸಿದ ಚೋಪ್ರಾ

ಭಾರತಕ್ಕೆ ನಿನ್ನೆ ಒಂದೇ ದಿನ 'ಪ್ಯಾರಿಸ್ ಒಲಿಂಪಿಕ್ಸ್-2024' ಕ್ರೀಡಾಕೂಟದಲ್ಲಿ ಭರ್ಜರಿಯಾಗಿ 2 ಪದಕ ಒಲಿದು ಬಂದಿದೆ. ಒಂದು ಪದಕವನ್ನು ಭಾರತದ ಹಾಕಿ ತಂಡ ಗೆದ್ದು, ಇತಿಹಾಸ ಮರಳುವಂತೆ ಮಾಡಿದ್ದರೆ, ಮತ್ತೊಂದು ಕಡೆ ಭರವಸೆಯ ಬೆಳಕು ಎಂದು ಕರೆಸಿಕೊಂಡಿದ್ದ ನೀರಜ್ ಚೋಪ್ರಾ ಕೂಡ ಪದಕ ಗೆದ್ದರು. ಹಾಕಿ ವಿಭಾಗದಲ್ಲಿ ಭಾರತದ ಆಟಗಾರರು ನಿನ್ನೆ ಕಂಚಿನ ಪದಕ ಗೆದ್ದರು, ಈ ಮೂಲಕ ಭಾರತದ ಪದಕ ಬೇಟೆ ಸಂಖ್ಯೆ 4ಕ್ಕೆ ಏರಿಕೆಯಾಗಿತ್ತು. ಆ ನಂತರ 'ಜಾವೆಲಿನ್ ಥ್ರೋ' ವಿಭಾಗದಲ್ಲಿ ಭಾರತಕ್ಕಾಗಿ ಬೆಳ್ಳಿ ಪದಕ ಗೆದ್ದು ಕೊಟ್ಟಿದ್ದಾರೆ ನೀರಜ್ ಚೋಪ್ರಾ.

ಯಾರಿಗೆ ಬಂತು ಚಿನ್ನದ ಪದಕ?

ನೀರಜ್ ಚೋಪ್ರಾ ಅವರ ಗೆಲುವು ಸುಲಭವಾಗಿ ಇರಲಿಲ್ಲ, ಯಾಕಂದ್ರೆ ಮೊದಲ ಎಸೆತದಲ್ಲಿ ಫೌಲ್ ಮಾಡಿಕೊಂಡ ನೀರಜ್ ಚೋಪ್ರಾ ಬೇಸರಗೊಂಡರು. ಮೊದಲ ಎಸೆತದಲ್ಲೇ ಅವರು 86 ಮೀಟರ್‌ಗಿಂತ ಹೆಚ್ಚು ದೂರ ಎಸೆದಿದ್ದರೂ ಅದು ಫೌಲ್ ಆಗಿತ್ತು. ಆ ನಂತರ ಕಂಬ್ಯಾಕ್ ಮಾಡಿದ ನೀರಜ್ ಚೋಪ್ರಾ, ಬರೋಬ್ಬರಿ 89.45 ಮೀಟರ್ ದೂರ ಎಸೆದರೆ. ಇಷ್ಟೊತ್ತಿಗೆ, ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್ ದೂರ ಎಸೆದು ಚಿನ್ನದ ಪದಕ ಗ್ಯಾರಂಟಿ ಮಾಡಿಕೊಂಡಿದ್ದರು. ಈ ಮೂಲಕ ಭಾರತದ ನೀರಜ್ ಚೋಪ್ರಾ ಖುಷಿ ಖುಷಿಯಾಗಿ ಬೆಳ್ಳಿಯ ಪದಕಕ್ಕೆ ಮುತ್ತಿಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+