ಹಾರ್ದಿಕ್ ಪಾಂಡ್ಯ ಡೈವರ್ಸ್: ಸರ್ಬಿಯಾದಲ್ಲಿ ಕೇಸ್ ದಾಖಲಾದರೆ ಸಮಸ್ಯೆ ಹೆಚ್ಚು: ಭಾರತಕ್ಕೂ ಆ ದೇಶಕ್ಕು ಇರುವ ಸಂಬಂಧ ಏನು?
ಹಾರ್ದಿಕ್ ಪಾಂಡ್ಯ ಹಾಗೂ ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ನಡುವೆ ಎಲ್ಲವೂ ಚೆನ್ನಾಗಿಲ್ಲ ಎಂಬುದು ಈಗ ಮುಚ್ಚಿಡುವ ಸಂಗತಿ ಏನು ಅಲ್ಲ. ಈಗಾಗಲೇ ಇಬ್ಬರ ವಿಚ್ಛೇದನ ವದಂತಿಗಳು ಎಲ್ಲಡೆ ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಇಬ್ಬರೂ ಯಾವುದೇ ಹೇಳಿಕೆಯನ್ನು ಸಹ ನೀಡಿಲ್ಲ. ಹಾಗಿದ್ದರೆ ಹಾರ್ದಿಕ್ ಪಾಂಡ್ಯ ಅವರಿಗೆ ಡಬಲ್ ಸಂಕಷ್ಟ ಏಕೆ ಬಗ್ಗೆ ವರದಿ ಇಲ್ಲಿದೆ.
ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಇಬ್ಬರೂ ಪ್ರಿತಿಸಿ ಮದುವೆ ಆಗಿದ್ದಾರೆ. ನತಾಶಾ ಸೆರ್ಬಿಯಾದ ಪ್ರಜೆಯಾಗಿದ್ದು ಭಾರತದಲ್ಲಿ ವಾಸಿಸುತ್ತಿದ್ದಾರೆ. ಮಾಡೆಲ್ ಆಗಿರುವ ಅವರು ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇಬ್ಬರ ನಡುವಿನ ವಿಚ್ಛೇದನದ ವಿಷಯ ಬೆಳಕಿಗೆ ಬಂದಾಗಿನಿಂದ ಹಾರ್ದಿಕ್ ಪಾಂಡ್ಯ ಆಸ್ತಿಗೆ ಸಂಬಂಧಿಸಿದಂತೆ ಹಲವು ವಿಷಯಗಳು ಬೆಳಕಿಗೆ ಬರುತ್ತಿವೆ.

ಇವರಿಬ್ಬರ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೆ, ನತಾಶ ವಿಶ್ಛೇದನ ಪ್ರಕರಣವನ್ನು ಎಲ್ಲಿ ದಾಖಲಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ನತಾಶಾ ವಿಚ್ಛೇದನ ಪ್ರಕರಣವನ್ನು ಎಲ್ಲಿ ದಾಖಲಿಸುತ್ತಾರೆ ಎಂಬುದರ ಮೇಲೆ ಆಸ್ತಿ ವಿವಾದವು ಅವಲಂಬಿತವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಸರ್ಬಿಯಾದಲ್ಲಿ ಕೇಸ್ ದಾಖಲಾದರೆ ಹಾರ್ದಿಕ್ ಪಾಂಡ್ಯ ಸಂಕಷ್ಟ ಮತ್ತಷ್ಟು ಹೆಚ್ಚಲಿದೆ ಎಂಬುದು ತಜ್ಞರ ನಂಬಿಕೆ.
ನತಾಶಾಗೆ ಎರಡು ಆಯ್ಕೆಗಳಿವೆ
ವಿಚ್ಛೇದನ ಪ್ರಕರಣಗಳಲ್ಲಿ ವಿಚ್ಛೇದನ ಪ್ರಕರಣಗಳಲ್ಲಿ ಪರಿಣಿತರಾಗಿರುವ ಕರ್ಕರ್ಡೂಮಾ ನ್ಯಾಯಾಲಯದ
ವಕೀಲ ಮನೀಶ್ ಭದೌರಿಯವರು ನ್ಯೂಸ್ 24 ಚಾನೆಲ್‌ಗೆ ತಿಳಿಸಿದ ಮಾಹಿತಿಯ ಪ್ರಕಾರ, ನತಾಶಾಗೆ ವಿಚ್ಛೇದನ ಪ್ರಕರಣವನ್ನು ದಾಖಲಿಸಲು ಎರಡು ದೇಶಗಳಲ್ಲಿ ಅವಕಾಶ ಇದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಬಿಯಾ ಕೋರ್ಟ್ ಯಾವುದೇ ತೀರ್ಪು ನೀಡಿದರೂ ಹಾರ್ದಿಕ್ ಅದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಆದರೆ, ಅದು ಅಷ್ಟು ಸುಲಭವಲ್ಲ.

ಭಾರತದಲ್ಲಿ ಹಾರ್ದಿಕ್ ಪಾಂಡ್ಯ ಪತ್ನಿ ಕೇಸ್ ದಾಖಲಿಸಿದರೆ, ಅವರಿಗೆ ಈ ಕಾನೂನಿ ಪ್ರಕಾರ ಏನನ್ನೂ ಪಡೆಯಲು ಸಾಧ್ಯವಿಲ್ಲ ಎಂದು ವಕೀಲರು ತಿಳಿಸಿದ್ದಾರೆ. ನ್ಯಾಯಾಲಯದಲ್ಲಿ ನತಾಶ ಜೀವನ ನಡೆಸಲು ಬೇಕಾಗುವ ಹಣವನ್ನು ಕೇಳಬಹುದು. ಆ ಮೊತ್ತವನ್ನು ಪಾವತಿಸುವುದರಿಂದ ಹಾರ್ದಿಕ್ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ.
ಇದೇ ಪ್ರಕರಣವನ್ನು ನತಾಶಾ ಸರ್ಬಿಯಾ ನ್ಯಾಯಾಲಯದಲ್ಲಿ ದಾಖಲಿಸಿ ನಂತರ ಜೀವನಾಂಶವಾಗಿ ಭಾರೀ ಪ್ರಮಾಣದ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದೇ ಆದಲ್ಲಿ ಹಾರ್ದಿಕ್ ಸಮಸ್ಯೆಗಳು ಹೆಚ್ಚಾಗುವುದು ಖಚಿತ ಎಂದು ವಕೀಲ ಮನೀಶ್ ಭದೌರಿ ತಿಳಿಸಿದ್ದಾರೆ.
ಒಂದು ವೇಳೆ ಹಾರ್ದಿಕ್ ಸರ್ಬಿಯಾ ಕೋರ್ಟ್‌ಗೆ ಹಾಜರಾಗದಿದ್ದರೆ ಅಥವಾ ಕೋರ್ಟ್ ನೋಟಿಸ್‌ಗೆ ಪ್ರತಿಕ್ರಿಯೆ ನೀಡದಿದ್ದರೆ, ಅಲ್ಲಿನ ನ್ಯಾಯಾಲಯವು ನತಾಶಾ ಪರವಾಗಿ ತೀರ್ಪು ನೀಡಬಹುದು. ಸರ್ಬಿಯಾ ಕೋರ್ಟ್ ಯಾವುದೇ ನಿರ್ಧಾರ ನೀಡಿದರೂ ಹಾರ್ದಿಕ್ ಅದನ್ನು ಒಪ್ಪಿಕೊಳ್ಳಲೇಬೇಕು. ಇಲ್ಲದಿದ್ದರೆ ಅವರ ವಿರುದ್ಧ ಭಾರತದಲ್ಲೂ ಪ್ರಕರಣ ದಾಖಲಾಗಬಹುದು.
ಸರ್ಬಿಯಾದಲ್ಲಿ ಕೇಸ್ ದಾಖಲಿಸುವುದು ಸುಲಭದ ಮಾತಲ್ಲ. ಏಕೆಂದರೆ ತಾರಾ ಜೋಡಿ ಭಾರತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಈ ಬಗ್ಗೆ ಭಾರತದ ನ್ಯಾಯಾಲಯ ತೀಪರ್ನು ನೀಡಬೇಕೆಂಬ ನಿಯಮ. ಭಾರತೀಯ ನ್ಯಾಯಾಲಯ ನೀಡಿರುವ ತೀರ್ಪಿನಿಂದ ನತಾಶಾ ತೃಪ್ತ ರಾಗದಿದ್ದರೆ ಸರ್ಬಿಯಾ ನ್ಯಾಯಾಲಯದ ಮೊರೆ ಹೋಗಬಹುದು.
ಸೆರ್ಬಿಯಾದಲ್ಲಿ ವಿಚ್ಛೇದನದ ನಿಯಮ
ಸರ್ಬಿಯಾದ ಪ್ರಜೆಯು ಆ ದೇಶದಲ್ಲಿ ಬೇರೆ ದೇಶದ ಪ್ರಜೆಯನ್ನು ಮದುವೆಯಾಗಿದ್ದರೆ, ಅಲ್ಲಿ ಮದುವೆ ನೋಂದಣಿಯನ್ನು ಮಾಡಬೇಕಾಗುತ್ತದೆ. ಮದುವೆ ನೋಂದಣಿಯ ಪ್ರತಿಯನ್ನು ಆ ದೇಶದ ಸರ್ಬಿಯಾದ ರಾಯಭಾರಿ ಕಚೇರಿಗೆ ಸಲ್ಲಿಸಬೇಕು.ಇದರ ನಂತರ, ಸರ್ಬಿಯಾದ ಪ್ರಜೆಯು ಆ ಮದುವೆಯನ್ನು ತನ್ನ ಪ್ರದೇಶದಲ್ಲಿಯೂ ನೋಂದಾಯಿಸಿಕೊಳ್ಳಬೇಕು. ನತಾಶಾ ಈ ಕೆಲಸ ಮಾಡಿದ್ದಾರೋ ಇಲ್ಲವೋ ಎಂಬ ಮಾಹಿತಿ ಇಲ್ಲ. ಮಾಡದಿದ್ದರೆ ಹಾರ್ದಿಕ್‌ಗೆ ಸ್ವಲ್ಪ ಸಮಾಧಾನ ಸಿಗಬಹುದು.
ಆಪ್ತ ಸ್ನೇಹಿತ ಹೇಳಿದ್ದೇನು?
ಈ ತಾರಾ ದಂಪತಿಯ ಆಪ್ತ ಸ್ನೇಹಿತನೊಬ್ಬ ಇವರಿಬ್ಬರ ಇತ್ತೀಚಿನ ಸಂಬಂಧಗಳ ಬಗ್ಗೆ ತುಟಿ ಬಿಚ್ಚಿದ್ದಾರೆ. ಹಾರ್ದಿಕ್ ಪಾಂಡ್ಯ ದಂಪತಿ ಕೆಲವು ತಿಂಗಳಿನಿಂದ ಪ್ರತ್ಯೇಕವಾಗಿದ್ದು, ಕೌಟುಂಬಿಕ ಜೀವನದಲ್ಲಿ ನಿಜ ಸಮಸ್ಯೆಗಳಿವೆ. ಅವರಿಬ್ಬರು ಪರಸ್ಪರ ಮಾತನಾಡುತ್ತಾರೋ ಇಲ್ಲವೋ ತಿಳಿದಿಲ್ಲ. ಆದರೆ ಇಬ್ಬರೂ ಒಟ್ಟಾಗಿ ವಾಸಿಸುತ್ತಿಲ್ಲ.
ವಿಚ್ಛೇದನ ವದಂತಿ ಹರಡಲು ಕಾರಣವೇನು?
ಹಾರ್ದಿಕ್ ಹಾಗೂ ನತಾಶಾ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಅಗಸ್ತ್ಯ ಎಂಬ ಮಗನಿದ್ದಾನೆ. ನತಾಶಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಪಾಂಡ್ಯ ಎಂಬ ಹೆಸರನ್ನು ತೆಗೆದು ಹಾಕಿದ್ದಾರೆ. ಅಲ್ಲದೆ ಹಾರ್ದಿಕ್ ಅವರೊಂದಿಗೆ ತೆಗೆಸಿಕೊಂಡಿರುವ ಚಿತ್ರಗಳನ್ನು ಸಹ ಅವರು ಡಿಲೀಟ್ ಮಾಡಿದ್ದಾರೆ.
ಹಾರ್ದಿಕ್ ಮತ್ತು ನತಾಶಾ ನಡುವಿನ ವಿಚ್ಛೇದನದ ವದಂತಿಗಳ ನಡುವೆ ಜನರು ಅನೇಕ ರೀತಿಯ ವಾದಗಳನ್ನು ಮಂಡಿಸುತ್ತಿದ್ದಾರೆ. ಮಾರ್ಚ್ 4 ರಂದು ನತಾಶಾ ಅವರ ಹುಟ್ಟುಹಬ್ಬವಿತ್ತು ಮತ್ತು ಆ ದಿನ ಹಾರ್ದಿಕ್ ಯಾವುದೇ ಪೋಸ್ಟ್ ಮಾಡಿರಲಿಲ್ಲ ಎಂಬುದು ತಿಳಿದು ಬಂದಿದೆ. ನತಾಶಾ ಅವರು ತಮ್ಮ ಮತ್ತು ಹಾರ್ದಿಕ್ ಅವರ ಇತ್ತೀಚಿನ ಎಲ್ಲಾ ಚಿತ್ರಗಳನ್ನು ತೆಗೆದುಹಾಕಿದ್ದಾರೆ. ಅಗಸ್ತ್ಯ ಅವರೊಂದಿಗಿನ ಚಿತ್ರ ಮಾತ್ರ ಅವರನ್ನು ಸಾಮಾಜಿಕ ತಾಣದಲ್ಲಿ ಇಟ್ಟುಕೊಂಡಿದ್ದಾರೆ.












Click it and Unblock the Notifications