Breaking: ಹಾಕಿ ಫೆಡರೇಶನ್ ಅಧ್ಯಕ್ಷ ನರೀಂದರ್ ಬಾತ್ರಾ ರಾಜೀನಾಮೆ
ನವದೆಹಲಿ, ಜುಲೈ 18: ಹಿರಿಯ ಕ್ರೀಡಾ ನಿರ್ವಾಹಕರಾದ ನರೀಂದರ್ ಬಾತ್ರಾ ಸೋಮವಾರ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಎಚ್) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಜೊತೆಗೆ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಸದಸ್ಯತ್ವವನ್ನೂ ತ್ಯಜಿಸಿದ್ದಾರೆ.
ನರೀಂದರ್ ಬಾತ್ರಾ ಅವರು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಚುನಾವಣೆಗಳಲ್ಲಿ ಸ್ಪರ್ಧಿಸಿ 2017ರಲ್ಲಿ ಮತ್ತೆ ಗೆದ್ದುಕೊಂಡಿದ್ದ ಹಾಕಿ ಇಂಡಿಯಾದ 'ಲೈಫ್ ಮೆಂಬರ್' ಸ್ಥಾನವನ್ನು ಮೇ 25 ರಂದು ದೆಹಲಿ ಹೈಕೋರ್ಟ್ ರದ್ದುಗೊಳಿಸಿದಾಗ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.
ಮೂರು ಪ್ರತ್ಯೇಕ ಪತ್ರಗಳಲ್ಲಿ, ನರೀಂದರ್ ಬಾತ್ರಾ ಅವರು ಕ್ರಮವಾಗಿ IOA, IOC ಮತ್ತು FIH ಗೆ ಅಧಿಕೃತವಾಗಿ ರಾಜೀನಾಮೆ ನೀಡಿದರು.

"ವೈಯಕ್ತಿಕ ಕಾರಣಗಳಿಂದಾಗಿ ನಾನು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ" ಎಂದು ನರೀಂದರ್ ಬಾತ್ರಾ ಎಫ್‌ಐಎಚ್‌ನ ಕಾರ್ಯಕಾರಿ ಮಂಡಳಿಗೆ ಪತ್ರ ಬರೆದಿದ್ದಾರೆ.
Recommended Video
ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಹೊತ್ತುಕೊಂಡಿರುವ ಬಾತ್ರ ಮೇಲೆ ಪ್ರಕರಣ ದಾಖಲಾಗಿದ್ದು, ಸಿಬಿಐ ತನಿಖೆ ನಡೆಸುತ್ತಿದೆ. ಸಿಬಿಐ ತಂಡ ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿದ ವಾರಗಳ ನಂತರ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.
ಆ ಸಮಯದಲ್ಲಿ"ವಿಶ್ವ ಹಾಕಿಯು ಅತ್ಯಗತ್ಯ ಅಭಿವೃದ್ಧಿಯ ಹಂತದಲ್ಲಿ ಸಾಗುತ್ತಿರುವ ಸಮಯದಲ್ಲಿ, Hockey5s ಪ್ರಚಾರದೊಂದಿಗೆ, ಈ ವರ್ಷ ಹೊಸ ಸ್ಪರ್ಧೆಯ ಸೃಷ್ಟಿ - FIH ಹಾಕಿ ನೇಷನ್ಸ್ ಕಪ್ - ಮತ್ತು ಅಭಿಮಾನಿಗಳನ್ನು ತೊಡಗಿಸಿಕೊಳ್ಳುವ ವೇದಿಕೆಗಳು ಮತ್ತು ಚಟುವಟಿಕೆಗಳನ್ನು ಪ್ರಾರಂಭಿಸಬೇಕು. ಈ ಎಲ್ಲಾ ಚಟುವಟಿಕೆಗಳಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಬಾತ್ರಾ ಹೇಳಿಕೆಯಲ್ಲಿ ತಿಳಿಸಿದ್ದರು.












Click it and Unblock the Notifications