Rohit Sharma: ಮುಂಬೈ ಇಂಡಿಯನ್ಸ್ ತಂಡಕ್ಕೆ ವಿದಾಯ ಹೇಳ್ತಾರಾ ರೋಹಿತ್ ಶರ್ಮಾ? ಕುತೂಹಲ ಸೃಷ್ಟಿಸಿದ ವಿಡಿಯೋ
Rohit Sharma: ಐಪಿಎಲ್ 2025ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಇದುವರೆಗೂ ಆಡಿದ 3 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಗೆದ್ದಿದೆ. ಇನ್ನೆರಡರಲ್ಲಿ ಸೋಲನುಭವಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಸದ್ಯ ಆರನೇ ಸ್ಥಾನದಲ್ಲಿದೆ. ಅದರಲ್ಲೂ ಮುಂಬೈ ಪರ ಆಡಿದ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಪ್ರದರ್ಶನ ತೀವ್ರ ಕಳಪೆಯಾಗಿದೆ. ಇನ್ನು ಇಂದು (ಏಪ್ರಿಲ್ 4) ಎಲ್‌ಎಸ್‌ಜಿ ವಿರುದ್ಧ ಪಂದ್ಯಕ್ಕೂ ಮುನ್ನ ರೋಹಿತ್ ನೀಡಿದ ಹೇಳಿಕೆಯೊಂದು ಭಾರೀ ವೈರಲ್ ಆಗುತ್ತಿದೆ.
ಐಪಿಎಲ್ 2025ನೇ ಆವೃತ್ತಿಯಲ್ಲಿ ಮುಂಬೈ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಕಳಪೆ ಪ್ರದರ್ಶನ ನೀಡಿದ್ದು, ಮೂರು ಪಂದ್ಯಗಳಿಂದ ಕ್ರಮವಾಗಿ 0, 8 ಮತ್ತು 13 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಇನ್ನು ಇಂದು ಮುಂಬೈ ಇಂಡಿಯನ್ಸ್ ತಂಡವು ಕೆಲವೇ ಕ್ಷಣಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಾದಾಡಲಿದೆ.

ಪಂದ್ಯಕ್ಕೂ ಮುನ್ನ ಹಿಟ್‌ಮ್ಯಾನ್, ಎಲ್‌ಎಸ್‌ಜಿ ಮಾರ್ಗದರ್ಶಕ ಜಹೀರ್ ಖಾನ್ ಅವರೊಂದಿಗೆ ಮಾತನಾಡುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಸಂಭಾಷಣೆಯ ಸಮಯದಲ್ಲಿ ರೋಹಿತ್ ಶರ್ಮಾ ಅವರು ನೀಡಿದ ಒಂದು ಹೇಳಿಕೆಯು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಎಲ್‌ಎಸ್‌ಜಿ ತಂಡದ ಮಾರ್ಗದರ್ಶಕ ಜಹೀರ್ ಖಾರ್ ಜೊತೆ ರೋಹಿತ್ ಶರ್ಮಾ ಮಾತುಕತೆ ನಡೆಸುತ್ತಿರುವ ವಿಡಿಯೋ ನೋಡಿದರೆ, ಅವರು ಇನ್ಮುಂದೆ ಮುಂಬೈ ಪರ ಆಡುವುದಿಲ್ಲವೇ ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಎದ್ದಿವೆ. ಅಲ್ಲದೆ, ರೋಹಿತ್ ಶರ್ಮಾ ಜಹೀರ್ ಖಾನ್ ಜೊತೆ ಮಾತನಾಡುತ್ತಿರುವಾಗ ಎಲ್‌ಎಸ್‌ಜಿ ನಾಯಕ ಪಂತ್ ರೋಹಿತ್ ಅವರನ್ನು ಭೇಟಿಯಾಗಿ ತಬ್ಬಿಕೊಂಡು ತಮಾಷೆ ಮಾಡಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಎಲ್‌ಎಸ್‌ಜಿ ಕೋಚ್ ಜಹೀರ್ ಖಾನ್ ನಡುವಿನ ಸಂಭಾಷಣೆ ವೇಳೆ ರೋಹಿತ್ ಶರ್ಮಾ ಅವರು, "ಜೋ ಜಬ್ ಕರ್ನಾ ಥಾ, ಮೈನೆ ಕಿಯಾ ಬರಾಬರ್ ಸೆ, ಅಬ್ ಮೇರೆಕೋ ಕುಚ್ ಕರ್ನೇ ಕಿ ಜರೂರತ್ ನಹೀ ಹೈ" ಎಂದು ಹೇಳಿದ್ಧಾರೆ. ಇದರ ಅರ್ಥ "ಏನು ಮಾಡಬೇಕೋ ಅದನ್ನು ನಾನು ಸರಿಯಾಗಿ ಮಾಡಿದ್ದೇನೆ, ಈಗ ನಾನು ಏನೂ ಮಾಡಬೇಕಾಗಿಲ್ಲ," ಅಂತಾ. ಈ ಹೇಳಿಕೆಯೇ ಇದೀಗ ಕುತೂಹಲ ಹುಟ್ಟುಹಾಕಿದೆ. ಅಲ್ಲದೆ ಅಭಿಮಾನಿಗಳಲ್ಲಿ ಗೊಂದಲವನ್ನು ಕೂಡ ಸೃಷ್ಟಿಸಿದೆ.
ರೋಹಿತ್ ಅವರ ಈ ಹೇಳಿಕೆಗೆ ಮುಂಬೈ ಇಂಡಿಯನ್ಸ್ ಅಭಿಗಳೇ ಅಸಮಾಧಾನ ವ್ಯಕ್ತಪಡಸಿದ್ದಾರೆ. ಕೆಲವರು ಅವರು ಉದ್ದೇಶಪೂರ್ವಕವಾಗಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ.
ರೋಹಿತ್ ಬಗ್ಗೆ ಪೊಲಾರ್ಡ್ ಹೇಳಿದ್ದೇನು?: ರೋಹಿತ್ ಅವರ ಮೇಲಿನ ಟೀಕೆಗಳಿಗೆ ಪ್ರತಿಕ್ರಿಯಿಸಿದ ಪೊಲಾರ್ಡ್, ಕೆಲವು ಬಾರಿ ಕಡಿಮೆ ಸ್ಕೋರ್‌ಗಳನ್ನು ಗಳಿಸಬಹುದು. ಆದರೆ, ನಿಮಗೆ ತಿಳಿದಿರುವಂತೆ, ಅವರು ಈಗ ತಮ್ಮ ಕ್ರಿಕೆಟ್ ಜೀವನವನ್ನು ಆನಂದಿಸುತ್ತಿದ್ದಾರೆ ಮತ್ತು ಕೆಲವು ಸಂದರ್ಭಗಳಲ್ಲಿ ಒತ್ತಡಕ್ಕೆ ಒಳಗಾಗದಿರಲು ಇಷ್ಟಪಡುತ್ತಿದ್ದಾರೆ. ಆದ್ದರಿಂದ ಒಂದೆರಡು ಪಂದ್ಯಗಳ ಕಡಿಮೆ ಸ್ಕೋರ್ ಕಲೆಹಾಕಿದ್ದಾರೆ ಅಷ್ಟೇ. ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ. ಅವರನ್ನು ಸುಮ್ಮನೆ ದೂರುವುದು ಬೇಡ. ಕ್ರಿಕೆಟ್‌ನಲ್ಲಿ ಹಲವು ಬಾರಿ ಯಶಸ್ವಿ ಆಗುವುದಕ್ಕಿಂತ ಹೆಚ್ಚಾಗಿ ವಿಫಲರಾಗುತ್ತೇವೆ ಎಂದು ಹೇಳಿದ್ದಾರೆ.












Click it and Unblock the Notifications