MS Dhoni: ಫೇಸ್‌ಬುಕ್ ಪೋಸ್ಟ್ ಮೂಲಕ ಹೊಸ ಸಂದೇಶ ಕೊಟ್ಟ ಎಂಎಸ್ ಧೋನಿ!
2024ರ ಐಪಿಎಲ್‌ನಲ್ಲಿ ಮುಖ್ಯ ಆಕರ್ಷಣೆ ಎಂಎಸ್ ಧೋನಿ, ಇದು ಸಿಎಸ್‌ಕೆ ನಾಯಕನ ಕೊನೆ ಐಪಿಎಲ್ ಆವೃತ್ತಿ ಎಂದೇ ಹೇಳಲಾಗುತ್ತಿದೆ. ಆದರೆ ಎಂಎಸ್ ಧೋನಿ ನಿರೀಕ್ಷೆಗಳನ್ನೂ ಮೀರಿ ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ನಿಸ್ಸೀಮರು.
ಕಳೆದ ಆವೃತ್ತಿಯ ಬಳಿಕವೇ ಅವರು ನಿವೃತ್ತಿಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಸಿಎಸ್‌ಕೆ 5ನೇ ಬಾರಿ ಚಾಂಪಿಯನ್ ಆಗಿತ್ತು. ಗೆಲುವಿನ ಖುಷಿಯಲ್ಲಿ ತಾನು ಅಭಿಮಾನಿಗಳಿಗೆ ಮತ್ತೊಂದು ಆವೃತ್ತಿ ಆಡುತ್ತೇನೆ ಎಂದು ಹೇಳಿದ್ದರು. ಈಗ 2024ರ ಐಪಿಎಲ್ ಆರಂಭಕ್ಕೆ ಮುನ್ನ ಫೇಸ್‌ಬುಕ್ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ತಲೆಕೆಡಿಸಿದ್ದಾರೆ.

ಕಳೆದ ಆವೃತ್ತಿಯಲ್ಲಿ ಮೊಣಕಾಲು ಗಾಯದಿಂದ ಬಳಲುತ್ತಿದ್ದ ಧೋನಿ ಹೆಚ್ಚು ಬ್ಯಾಟಿಂಗ್ ಮಾಡಿರಲಿಲ್ಲ. ಕೊನೆಯ ಓವರ್ ಅಥವಾ ಕೆಲವು ಎಸೆತಗಳು ಇದ್ದಾಗ ಮಾತ್ರ ಬ್ಯಾಟಿಂಗ್ ಮಾಡಲು ಬರುತ್ತಿದ್ದರು. ಆದರೂ ಯುವ ಪಡೆಯನ್ನು ಕಪ್ ಗೆಲುವಿನ ಕಡೆ ಮುನ್ನಡೆಸಿದ್ದರು.
ದಾಖಲೆಯ 6 ನೇ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ತಮ್ಮ ವೃತ್ತಿಜೀವನವನ್ನು ಉನ್ನತ ಮಟ್ಟದಲ್ಲಿ ಕೊನೆಗೊಳಿಸುವ ವಿಶ್ವಾಸದಲ್ಲಿದ್ದಾರೆ. ಈ ಬಾರಿ ಐಪಿಎಲ್‌ನಲ್ಲಿ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಹೇಳುವ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದ್ದಾರೆ.
MS Dhoni's Facebook post.
— Mufaddal Vohra (@mufaddal_vohra) March 4, 2024
- The lion is ready to roar....!!! 🦁 pic.twitter.com/ZX5aU3z9Ej
ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ!
"ಹೊಸ ಆವೃತ್ತಿಯಲ್ಲಿ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲು ಕಾಯುತ್ತಿದ್ದೇನೆ. ನಿರೀಕ್ಷಿಸಿ" ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಾದರೆ ಏನಪ್ಪಾ ಅದು ಹೊಸ ರೋಲ್ ಎಂದು ಅಭಿಮಾನಿಗಳು ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ.
ಭಾರತದ ಮಾಜಿ ನಾಯಕ ಅನಂತ್ ಅಂಬಾನಿ ಪೂರ್ವ ವಿವಾಹ ಕಾರ್ಯಕ್ರಮದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು ಮತ್ತು ಮಾರ್ಚ್ 22 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಋತುವಿನ ಮೊದಲ ಪಂದ್ಯಕ್ಕೆ ಮೂರು ವಾರಗಳಿಗಿಂತ ಕಡಿಮೆ ಸಮಯ ಉಳಿದಿರುವಾಗ ಚೆನ್ನೈ ಸೂಪರ್ ಕಿಂಗ್ಸ್ (CSK) ತರಬೇತಿ ಶಿಬಿರಕ್ಕೆ ಇನ್ನು ಸೇರಿಕೊಂಡಿಲ್ಲ.
ಹೊಸ ಪಾತ್ರ ಯಾವುದು?
ಕಳೆದ ಋತುವಿನಲ್ಲಿ, ಧೋನಿ ತನ್ನ ಮೊಣಕಾಲು ಸಮಸ್ಯೆ ಜೊತೆ ಹೋರಾಡುತ್ತಿದ್ದರು, ಇದರಿಂದಾಗಿ ಅವರು ಆಗಾಗ್ಗೆ ಕ್ರಮಾಂಕವನ್ನು ಕೆಳಗಿಳಿಸುತ್ತಿದ್ದರು. ಅವರು 2023 ರ ಆವೃತ್ತಿಯಲ್ಲಿ ಕೇವಲ 57 ಎಸೆತಗಳನ್ನು ಎದುರಿಸಿದರು, ಇದು ಅವರ ಫಾರ್ಮ್ ಮತ್ತು ಭವಿಷ್ಯದ ಬಗ್ಗೆ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈಗ ಅವರು ತಮ್ಮ ಮೊಣಕಾಲು ಸರಿಪಡಿಸಲು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ, ಅವರ 'ಹೊಸ ಪಾತ್ರ' ಎಂದರೆ ಯಾರಿಗೂ ತಿಳಿದಿಲ್ಲ. ಅದೇನು ಎಂದು ತಿಳಿಯಲು ಮಾರ್ಚ್ 22ರ ವರೆಗೆ ಕಾಯಬೇಕಾಗುತ್ತದೆ.












Click it and Unblock the Notifications