ಕರ್ನಾಟಕದ ಸ್ಟಾರ್ ಆಟಗಾರ ಮನೀಶ್ ಪಾಂಡೆ ದಾಂಪತ್ಯದಲ್ಲಿ ಬಿರುಕು?
ಟೀಮ್ ಇಂಡಿಯಾ ಆಟಗಾರ ಕನ್ನಡಿಗ ಮನೀಶ್ ಪಾಂಡೆ ಅವರ ಬದುಕಿನಲ್ಲಿ ಬಿರುಗಾಳಿ ಎದ್ದಿದೆ. ಮನೀಶ್ ಪಾಂಡೆ ದಾಂಪತ್ಯದಲ್ಲಿ ಬಿರುಕು ಬಿಟ್ಟಿರುವ ಸುದ್ದಿ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಸುದ್ದಿ ವ್ಯಾಪಕವಾಗಿ ಹರಿದಾಡಲು ಕಾರಣವಾಗಿದ್ದು, ಅದೇ ಸಮಾಜಿಕ ತಾಣ.
ದಂಪತಿಗಳ ಇನ್‌ಸ್ಟಾಗ್ರಾಮ್ ಖಾತೆಯ ಪೋಸ್ಟ್ ಚರ್ಚೆಗೆ ಕಾರಣವಾಗಿದೆ. ಐದು ವರ್ಷಗಳ ಹಿಂದೆ ಟೀಮ್ ಇಂಡಿಯಾದ ಆಟಗಾರ ಮನೀಶ್ ಪಾಂಡೆ, ಚಿತ್ರ ನಟಿ ಆಶ್ರಿತಾ ಶೆಟ್ಟಿ ಅವರನ್ನು ಕೈ ಹಿಡಿದರು. ಈ ಮೂಲಕ ದಾಂಪತ್ಯ ಜೀವನದ ಇನ್ನಿಂಗ್ಸ್ ಆರಂಭಿಸಿದರು. ಮನೀಶ್ ಪಾಂಡೆ ಪತ್ನಿ, ತುಳು ಚಿತ್ರದ ಮೂಲಕ ನಟಿಯಾಗಿ ಗುರುತಿಸಿಕೊಂಡರು. ಎಲ್ಲವೂ ಚೆನ್ನಾಗಿದೆ ಎನ್ನುವಾಗಲೇ ಸಾಮಾಜಿಕ ತಾಣದಲ್ಲಿ ಡಿವರ್ಸ್ ಸುದ್ದಿ ಹರಿದಾಡುತ್ತಿದೆ.

ಟೀಮ್ ಇಂಡಿಯಾ ಆಟಗಾರ ಮನೀಶ್ ಪಾಂಡೆ ಹಾಗೂ ಆಶ್ರಿತಾ ಶೆಟ್ಟಿ ತಮ್ಮ ಸಾಮಾಜಿಕ ತಾಣ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿದ್ದ ಫೋಟೋವನ್ನು ಡಿಲೀಟ್ ಮಾಡಿದ್ದಾರೆ. ಇವರಿಬ್ಬರೂ ಪರಸ್ಪರ ತಮ್ಮ ಮದುವೆಯ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಇಬ್ಬರೂ ಪರಸ್ಪರ ಬೇರೆಯಾಗುತ್ತಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಇನ್ನು ಈ ಬಗ್ಗೆ ಮನೀಶ್ ಪಾಂಡೆ, ಆಶ್ರಿತಾ ಶೆಟ್ಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇವರಿಬ್ಬರ ನಡುವೆ ಏನಾದರೂ ಸಮಸ್ಯೆ ಇದೆಯಾ, ಅವರು ಬೇರೆಯಾದರೇ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಮನೀಶ್ ಇತ್ತೀಚೆಗೆ ಹಲವಾರು ಚಿತ್ರಗಳನ್ನು ಪೋಸ್ಟ್ ಮಾಡಿದಾಗ ಇದು ಪ್ರಾರಂಭವಾಯಿತು. ಆಟಗಾರನು ತನ್ನ ಇನ್‌ಸ್ಟಾ ಹ್ಯಾಂಡಲ್‌ನಲ್ಲಿ ತನ್ನ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಕೋಲ್ಕತ್ತಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾಗ ಮನೀಶ್ ಪಾಂಡೆ, ಟ್ರೋಫಿಯೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದರು. ಅಲ್ಲದೆ ತಮ್ಮದೇ ವಿವಿಧ ಭಂಗೀಯ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ವೇಳೆ ಅವರ ಪತ್ನಿ ಮಿಸ್ ಆಗಿದ್ದು ಎದ್ದು ಕಾಣುತ್ತದೆ.
ಮನೀಶ್ ಫೋಟೋಗಳ ಲಿಸ್ಟ್ ನಲ್ಲಿ ಪತ್ನಿ ಆಶ್ರಿತಾ ಜತೆಗಿರುವ ಫೋಟೋ ಮಾಯವಾಗಿದೆ. ಇದು ಅಭಿಮಾನಿಗಳ ಶಂಕೆಗೆ ಕಾರಣವಾಗಿದ್ದು ಇಬ್ಬರೂ ಪರಸ್ಪರ ಬೇರೆ ಬೇರೆಯಾಗುತ್ತಿದ್ದಾರೆಯೇ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಈ ಬಗ್ಗೆ ಈ ಜೋಡಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವೃತ್ತಿ ಅನುಭವ
ಮನೀಶ್ ಪಾಂಡೆ ಅಂಟರ್ 19 ವಿಶ್ವಕಪ್ ವಿಜೇತ ತಂಡದ ಸದಸ್ಯ. ಇವರ ಸೊಗಸಾದ ಬ್ಯಾಟಿಂಗ್ ನೋಡಿದ ಐಪಿಎಲ್‌ನ ಆರ್‌ಸಿಬಿ ಫ್ರಾಂಚೈಸಿ ಇವರಿಗೆ ಮಣೆ ಹಾಕಿತು. ಇವರು ಈ ಅವಕಾಶವನ್ನು ಬಳಸಿಕೊಂಡು ಶತಕ ಬಾರಿಸಿ ಅಬ್ಬರಿಸಿದ್ದರು. ಇದುವರೆಗೂ ಮನೀಶ್ ಪಾಂಡೆ 171 ಐಪಿಎಲ್ ಪಂದ್ಯಗಳಲ್ಲಿ ಒಂದು ಶತಕ ಹಾಗೂ 22 ಅರ್ಧಶತಕ ಸೇರಿದಂತೆ ಒಟ್ಟು 3850 ರನ್ ಗಳಿಸಿದ್ದಾರೆ. ಈ ಬಾರಿ ಕೆಕೆಆರ್ ಪರ ಮನೀಶ್ ಪಾಂಡೆ ಒಂದು ಬಾರಿ ಕಣಕ್ಕೆ ಇಳಿದು 42 ರನ್ ಬಾರಿಸಿದ್ದರು.
ಇನ್ನು ಈ ಸ್ಟಾರ್ ಪ್ಲೇಯರ್ ಕರ್ನಾಟಕದ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಆಧಾರ. ಕರ್ನಾಟಕದ ಪರ ಇವರು ದೇಶೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ರನ್ ಕಲೆ ಹಾಕುವ ಕಲೆಯನ್ನು ಕರಗತ ಮಾಡಿಕೊಂಡಿರುವ ಇವರು, ಸದ್ಯ ಕೆಕೆಆರ್ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications