KL Rahul: ನಾಯಕನ ಹುಡುಕಾಟದಲ್ಲಿ ಎಲ್‌ಎಸ್‌ಜಿ?, ಕನ್ನಡಿಗ ಕೆ.ಎಲ್ ರಾಹುಲ್ ಆರ್‌ಸಿಬಿಗೆ ?
ಈ ಬಾರಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಈ ಹರಾಜಿನ ಮೇಲೆ ಎಲ್ಲ ತಂಡಗಳು ತಮ್ಮ ಚಿತ್ತ ನೆಟ್ಟಿವೆ. ಯಾವ ಆಟಗಾರನನ್ನು ಉಳಿಸಿಕೊಳ್ಳಬೇಕು. ಯಾರನ್ನು ಕೈ ಬಿಡಬೇಕು ಎಂಬ ಲೆಕ್ಕಾಚಾರಗಳು ಆರಂಭವಾಗಿವೆ. ಈ ಮಧ್ಯ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಒಂದು ಸುದ್ದಿ ಬಂದಿದೆ. ಈ ಸುದ್ದಿಯ ಪ್ರಕಾರ ಎಲ್‌ಸಿಜಿ ಕೆ.ಎಲ್ ರಾಹುಲ್ ಅವರನ್ನು ನಾಯಕತ್ವದಿಂದ ಕೆಳಗಿಸಳುವ ಸೂಚನೆ ಸಿಕ್ಕಿದೆ.
ಕರ್ನಾಟಕದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದರು. ಈಗ ಅವರನ್ನು ನಾಯಕತ್ವದಿಂದ ಕೆತೆಗೆದುಹಾಕುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. 2024ರ ಐಪಿಎಲ್‌ನಲ್ಲಿ ಎಲ್‌ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ ಕೆಎಲ್ ರಾಹುಲ್ ಮೇಲೆ ಕೋಪಗೊಂಡಿದ್ದು ಕ್ಯಾಮೆರಾಗಳಲ್ಲಿ ಕಂಡು ಬಂದಿತು. ತಂಡದ ಕಳಪೆ ಪ್ರದರ್ಶನದಿಂದ ಮಾಲೀಕರು ತಮ್ಮ ಸಿಟ್ಟನ್ನು ಹೊರ ಹಾಕಿದರು. ಈ ದೃಶ್ಯ ವೈರಲ್ ಆದ ಬೆನ್ನಲ್ಲೆ ರಾಹುಲ್ ತಂಡವನ್ನು ತೊರೆಯುತ್ತಾರೆ ಅಥವಾ, ನಾಯಕತ್ವದಿಂದ ಇಳಿಸುತ್ತಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ಈಗ ಈ ಎಲ್ಲ ಊಹಾಪೋಹಗಳಿಗೆ ಉತ್ತರ ಸಿಕ್ಕಿದೆ.

ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲರ್ ಅಮಿತ್ ಮಿಶ್ರಾ, ಯೂಟ್ಯೂಬ್‌ಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಸಂದರ್ಶಕ ಮುಂದಿನ ವರ್ಷ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ರಾಹುಲ್ ಮುಂದುವರೆಯುತ್ತಾರಾ?, ಅಥವಾ ತೆಗೆದು ಹಾಕುತ್ತಾರಾ? ಎಂಬ ಪ್ರಶ್ನೆ ಕೇಳಿದರು. ಇದಕ್ಕೆ ನೇರವಾಗಿ ಉತ್ತರಿಸಿದ ಮಿಶ್ರಾ, ಎಲ್‌ಎಸ್‌ಜಿ ನಾಯಕನ ಹುಡುಕಾಟದಲ್ಲಿದೆ ಎಂದು ಭಾವಿಸುತ್ತೇನೆ ಎಂದು ಹೇಳುದ್ದಾರೆ.
ಇಷ್ಟೇ ಅಲ್ಲ ಎಲ್‌ಎಸ್‌ಜಿ ಒಬ್ಬ ಒಳ್ಳೆಯ ಬ್ಯಾಟರ್‌ಗಿನೇ ನಾಯಕತ್ವ ನೀಡಲು ತೀರ್ಮಾನಿಸಿದ್ದಾಗಿ ಮಿಶ್ರಾ ಸುಳಿವು ನೀಡಿದ್ದಾರೆ. ಈ ಮೂಲಕ ಕೆ.ಎಲ್ ರಾಹುಲ್ ಮುಂದಿನ ವರ್ಷದ ಐಪಿಎಲ್‌ನಲ್ಲಿ ಎಲ್‌ಎಸ್‌ಜಿ ಪರ ಆಡುವುದು ಡೌಟ್ ಎನ್ನುವಂತಾಗಿದೆ.
ಐಪಿಎಲ್ ಪಂದ್ಯದ ವೇಳೆ ಆಗಿದ್ದೇನು?
ಐಪಿಎಲ್ 2024ರ ಪಂದ್ಯದಲ್ಲಿ ಎಸ್‌ಆರ್‌ಎಚ್ ಹಾಗೂ ಎಲ್‌ಎಸ್‌ಜಿ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಲಕ್ನೋ ಸೋಲು ಕಂಡಿತು. ಈ ಪಂದ್ಯ ಸೋತ ಬಳಿಕ ಡಗೌಟ್ ಕಡೆಗೆ ಕೆ.ಎಲ್ ರಾಹುಲ್ ಅವರು ಬರುತ್ತಿದ್ದಂತೆ ಮಾಲೀಕ ಸಂಜೀವ್ ಗೋಯೆಂಕಾ ನಡುವೆ ಮಾತಿನ ಚಕಮಕಿ ನಡೆಯಿತು. ಈ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸಹ ಸೆರೆ ಆದವು. ಅಲ್ಲದೆ ಈ ದೃಶ್ಯವೂ ವೈರಲ್ ಆಯಿತು. ಈ ಘಟನೆಯ ಬಗ್ಗೆ ಮಾತನಾಡಿರುವ ಮಿಶ್ರಾ, ಆ ವೇಳೆ ಯಾವುದೇ ದೊಡ್ಡ ವಿಷಯ ಚರ್ಚೆ ಆಗಲಿಲ್ಲ ಎಂದಿದ್ಧಾರೆ. ಜನರು ಈ ವಿಷಯವನ್ನು ತಮ್ಮ ಕಣ್ಣಿಗೆ ಕಂಡಂತೆ ಬಿಂಬಿಸಿದರು ಎಂದಿದ್ದಾರೆ.

ಪಂದ್ಯದ ಮೆಲುಕು
"ಸ್ಪಷ್ಟವಾಗಿ ಸಂಜೀವ್ ಗೋಯೆಂಕಾ ತಂಡದ ಪ್ರದರ್ಶನದಿಂದ ನಿರಾಶೆಗೊಂಡಿದ್ದರು. ನಾವು ಸತತ ಎರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದ್ದೇವೆ. ಕೆಕೆಆರ್ ವಿರುದ್ಧ 90-100 ರನ್‌ಗಳಿಂದ ಸೋತಿದ್ದೇವು. ಆದರೆ SRH ವಿರುದ್ಧದ ಪಂದ್ಯ ಕೇವಲ 10 ಓವರ್‌ಗಳಲ್ಲಿ ಕೊನೆಗೊಂಡಿತು. ಈ ಪಂದ್ಯದಲ್ಲಿ ಸನ್ ತಂಡದ ಬ್ಯಾಟಿಂಗ್ ಅಮೋಘವಾಗಿತ್ತು. ತಂಡದಲ್ಲಿ ಹಣ ಹೂಡಿದ ಯಾರಿಗಾದರೂ ಇದರಿಂದ ಬೇಸರವಾಗುವುದಿಲ್ಲವೇ? ಆ ಪಂದ್ಯಗಳಲ್ಲಿ ನಮ್ಮ ಬೌಲಿಂಗ್ ತುಂಬಾ ಕೆಟ್ಟದಾಗಿತ್ತು ಎಂದು ಮಿಶ್ರಾ ಹೇಳಿದ್ದಾರೆ.
ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಕೆಎಲ್ ರಾಹುಲ್ ಸನ್‌ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಎಲ್‌ಎಸ್‌ಜಿ ಪರ ಆಡಿದ ಅನುಭವ ಹೊಂದಿದ್ದಾರೆ. ಒಂದು ವೇಳೆ ಇವರನ್ನು ಲಕ್ನೋ ತಂಡ ಕೈ ಬಿಟ್ಟರೆ, ಆರ್‌ಸಿಬಿ ಸೇರಿದಂತೆ ಹಲವು ತಂಡಗಳು ಕೊಳ್ಳಲು ಹಣದ ಹೊಳೆಯನ್ನೇ ಹರಿಸಬಹುದು.












Click it and Unblock the Notifications