T20 Cricket: ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ನಾಯಕರಲ್ಲಿ ಭಾರತೀಯ ಕ್ಯಾಪ್ಟನ್ಸ್‌ಗೂ ಸ್ಥಾನ
ಇನ್ನೇನು ಕೆಲವೇ ದಿನಗಳಲ್ಲಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ಟಿ20 ವಿಶ್ವಕಪ್ ಆಯೋಜನೆ ಆಗಲಿದೆ. ಈ ಮೆಗಾ ಟೂರ್ನಿಗೆ ಬಹುತೇಕ ತಂಡಗಳನ್ನು ಪ್ರಕಟಿಸಲಾಗಿದೆ. ಈ ಟೂರ್ನಿಯಲ್ಲಿ ಭಾರತವೂ ಕಣಕ್ಕಿಳಿಯಲಿದ್ದು, ಎರಡನೇ ಬಾರಿ ಟ್ರೋಫಿ ಗೆಲ್ಲುವ ಉತ್ಸಾಹ ಹೊಂದಿದೆ.
ಟೀಮ್ ಇಂಡಿಯಾದ ಬಲಿಷ್ಠ ಪಡೆ ಈ ತಿಂಗಳ ಕೊನೆಯ ವಾರದಲ್ಲಿ ಅಮೆರಿಕ ತಲುಪಲಿದೆ. ಅಲ್ಲಿ ಅಭ್ಯಾಸ ಹಾಗೂ ಟೂರ್ನಿಯಲ್ಲಿ ಭಾಗವಹಿಸಲಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳುನ್ನು ರೋಹಿತ್ ಶರ್ಮಾ ಹೊಂದಿದ್ದಾರೆ. ಹಾಗೆ ಹಲವು ದೇಶದ ನಾಯಕರು ಹಲವು ರೆಕಾರ್ಡ್ ಹೊಂದಿದ್ದಾರೆ. ಹಾಗಿದ್ದಾರೆ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಜಯ ಸಾಧಿಸಿದ ನಾಯಕರ ಪರಿಚಯ ಇಲ್ಲಿದೆ.

ಬಾಬರ್‌ಗೆ ಅಗ್ರಸ್ಥಾನ
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಕೀರ್ತಿ ಪಾಕಿಸ್ತಾನದ ಬಾಬರ್ ಅಜಮ್‌ಗೆ ಸಲ್ಲುತ್ತದೆ. ಇವರು 78 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ 45 ರಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಈ ಪಟ್ಟಿಯಲ್ಲಿ ಎಡರನೇ ಸ್ಥಾನದಲ್ಲಿ ಉಗಾಂಡ ನಾಯಕ ನಿಲ್ಲುತ್ತಾನೆ. ಬ್ರೈನ್ ಮಸಾಬಾ ತಂಡವನ್ನು 56 ಪಂದ್ಯಗಳಲ್ಲಿ ಮುನ್ನಡೆಸಿ, 44 ಗೆಲುವು ದಾಖಲಿಸಿದ್ದಾರೆ. ಅಫ್ಘಾನಿಸ್ತಾನದ ಸ್ಟಾರ್ ನಾಯಕ ಅಸ್ಗರ್ ಅಫ್ಘಾನ್ ಅವರಿಗೂ ಈ ಪಟ್ಟಿಯಲ್ಲಿ ಸ್ಥಾನವಿದೆ. ಇವರು 52 ಪಂದ್ಯಗಳಲ್ಲಿ 42 ಗೆಲುವು ಕಂಡಿದ್ದಾರೆ.

ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್ ಸಹ ತಮ್ಮ ನಾಯಕತ್ವದಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದಿದ್ದಾರೆ. ಇವರು 72 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 42ರಲ್ಲಿ ಯಶಸ್ಸು ಕಂಡಿದ್ದಾರೆ.
41 ಗೆಲುವು ದಾಖಲಿಸಿರುವ ಹಿಟ್ ಮ್ಯಾನ್
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಭಾರತ ತಂಡವನ್ನು 54 ಪಂದ್ಯಗಳಲ್ಲಿ ಮುನ್ನಡೆಸಿದ್ದು, 41 ಪಂದ್ಯಗಳಲ್ಲಿ ಗೆಲುವಿನ ಮಾಲೆ ತಂಡಕ್ಕೆ ತೊಡಿಸಿದ್ದಾರೆ. ಇವರಷ್ಟೇ ಗೆಲುವನ್ನು ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಕಂಡಿದ್ದಾರೆ. ವಿಶ್ವಕಪ್ ವಿಜೇತ ನಾಯಕ ಧೋನಿ 72 ಟಿ20 ಪಂದ್ಯಗಳಲ್ಲಿ 41 ಜಯ ಸಾಧಿಸಿದ್ದಾರೆ.

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಏರಾನ್ ಫಿಂಚ್ ಸಹ 40 ಪಂದ್ಯಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ. ಮಲೇಷಿಯಾ ತಂಡದ ಅಹ್ಮದ್ ಫಯಾಜ್ 39, ಸ್ಕಾಟ್ಲೆಂಡ್ ನಾಯಕ ಗೆರ್ಹಾರ್ಡ್ 38, ಕಿವೀಸ್ ತಂಡದ ಮುಂದಾಳು ಕೇನ್ ವಿಲಿಯಮ್ಸನ್ 37 ಜಯ ದಾಖಲಿಸಿರುವ ದಾಖಲೆ ಹೊಂದಿದ್ದಾರೆ.












Click it and Unblock the Notifications