Lanka Premier League: ಫಿಕ್ಸಿಂಗ್ ಆರೋಪ; ಡಂಬುಲ್ಲಾ ಥಂಡರ್ಸ್ ಫ್ರಾಂಚೈಸಿ ಅಮಾನತು

ಶ್ರೀಲಂಕಾದಲ್ಲಿ ನಡೆಯುವ ಲಂಕಾ ಪ್ರೀಮಿಯರ್ ಲೀಗ್ (ಎಲ್‌ಪಿಎಲ್)ನಲ್ಲಿ ಫಿಕ್ಸಿಂಗ್ ಆರೋಪ ಕೇಳಿಬಂದಿದ್ದು, ಶ್ರೀಲಂಕಾ ಕ್ರಿಕೆಟ್ ಮಂಡಳಿ ಡಂಬುಲ್ಲಾ ಥಂಡರ್ಸ್ ಫ್ರಾಂಚೈಸಿಯನ್ನು ಅಮಾನತು ಮಾಡಿದೆ.

ಫ್ರಾಂಚೈಸಿ ಡಂಬುಲ್ಲಾ ಥಂಡರ್ಸ್ ಮಾಲೀಕ ಬಾಂಗ್ಲಾದೇಶ ಮೂಲದ ಬ್ರಿಟಿಷ್ ಪ್ರಜೆ ತಮೀಮ್ ರೆಹಮಾನ್ ಅವರನ್ನು ಬುಧವಾರ ಮ್ಯಾಚ್ ಫಿಕ್ಸಿಂಗ್‌ನಲ್ಲಿ ತೊಡಗಿರುವ ಶಂಕೆಯ ಮೇಲೆ ಬಂಧಿಸಲಾದ ಬೆನ್ನಲ್ಲೇ ಈ ನಿರ್ಧಾರ ಮಾಡಲಾಗಿದೆ.

Lanka Premier League Terminates Dambulla Thunders Franchise Amid Legal Issues

ಕೊಲಂಬೊ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ರಹಮಾನ್ ಅವರನ್ನು ಮೇ 31 ರವರೆಗೆ ಕಸ್ಟಡಿಗೆ ಒಪ್ಪಿಸಿತು. ಡಂಬುಲ್ಲಾ ಫ್ರಾಂಚೈಸ್ ಅನ್ನು ಬಾಂಗ್ಲಾದೇಶದ ಉದ್ಯಮಿಗಳ ನೇತೃತ್ವದ ಇಂಪೀರಿಯಲ್ ಸ್ಪೋರ್ಟ್ಸ್ ಗ್ರೂಪ್ ಏಪ್ರಿಲ್‌ನಲ್ಲಿ ಖರೀದಿಸಿತ್ತು.

ರೆಹಮಾನ್ ವಿರುದ್ಧದ ಆರೋಪಗಳ ಸಾಬೀತಾಗದೇ ಇದ್ದರೂ, ಲಂಕಾ ಪ್ರೀಮಿಯರ್ ಲೀಗ್‌ನ ಸಮಗ್ರತೆ ಮತ್ತು ಸುಗಮ ಕಾರ್ಯನಿರ್ವಹಣೆಯು ಅತ್ಯಂತ ಮಹತ್ವದ್ದಾಗಿದೆ. ಎಲ್‌ಪಿಎಲ್‌ನ ಮೌಲ್ಯಗಳು ಮತ್ತು ಖ್ಯಾತಿಯನ್ನು ಎತ್ತಿಹಿಡಿಯುವ ಗುರಿಯನ್ನು ಹೊಂದಿದ್ದು, ಎಲ್ಲಾ ಭಾಗವಹಿಸುವವರು ನಡತೆ ಮತ್ತು ಕ್ರೀಡಾಸ್ಫೂರ್ತಿಯ ಅತ್ಯುನ್ನತ ಮಾನದಂಡಗಳಿಗೆ ಬದ್ಧರಾಗಿರುವುದನ್ನು ಖಚಿತಪಡಿಸಿಕೊಳ್ಳು ಈ ನಿರ್ಧಾರ ಮಾಡಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೇಳಿದೆ.

ಅತ್ಯಾಕರ್ಷಕ ಮತ್ತು ಸ್ಪರ್ಧಾತ್ಮಕ ಪಂದ್ಯಾವಳಿಯನ್ನು ನೀಡಲು ಬದ್ಧವಾಗಿದೆ ಮತ್ತು ಲೀಗ್‌ನ ಸಮಗ್ರತೆ ಮತ್ತು ಯಶಸ್ಸನ್ನು ಕಾಪಾಡಿಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

"ನಾವು ಪಾರದರ್ಶಕತೆ ಮತ್ತು ವೃತ್ತಿಪರತೆಯ ಉನ್ನತ ಗುಣಮಟ್ಟಕ್ಕೆ ಬದ್ಧರಾಗಿದ್ದೇವೆ ಮತ್ತು ಈ ಪರಿವರ್ತನೆಯ ಸಮಯದಲ್ಲಿ ನಮ್ಮ ಎಲ್ಲಾ ತಂಡಗಳು, ಆಟಗಾರರು ಮತ್ತು ಅಭಿಮಾನಿಗಳನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ." ಎಲ್‌ಪಿಎಲ್ ಹಕ್ಕುದಾರ ಐಪಿಜಿ ಗ್ರೂಪ್ ಅಧ್ಯಕ್ಷ ಅನಿಲ್ ಮೋಹನ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+