Lakshya Sen: ಒಲಿಂಪಿಕ್‌ನಲ್ಲಿ ಸೆಮಿಫೈನಲ್ ತಲುಪಿ ಹೊಸ ಇತಿಹಾಸ ಬರೆದ ಲಕ್ಷ್ಯ ಸೇನ್

ಪ್ಯಾರಿಸ್ ಒಲಿಂಪಿಕ್‌ನಲ್ಲಿ ಶುಕ್ರವಾರ ಭಾರತಕ್ಕೆ ಮರೆಯಲಾಗದ ದಿನ 52 ವರ್ಷಗಳ ಬಳಿಕ ಹಾಕಿ ತಂಡ ಆಸ್ಟ್ರೇಲಿಯಾವನ್ನು ಮಣಿಸಿ ಇತಿಹಾಸ ನಿರ್ಮಿಸಿದರೆ. ಇತ್ತ ಪುರುಷರ ಬ್ಯಾಡ್ಮಿಂಟನ್‌ನಲ್ಲಿ ಲಕ್ಷ್ಯ ಸೇನ್ ಹೊಸ ಇತಿಹಾಸ ಬರೆದರು.

ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಚೈನೀಸ್ ತೈಪೆಯ ಚೌ ಟಿಯೆನ್-ಚೆನ್ ವಿರುದ್ಧ ಮೂರು ಸೆಟ್‌ಗಳಲ್ಲಿ 2-1ರಲ್ಲಿ ರೋಚಕ ಗೆಲುವು ಸಾಧಿಸಿದ ಲಕ್ಷ್ಯಸೇನ್ ಸೆಮಿಫೈನಲ್ ತಲುಪಿದರು. ಈ ಸಾಧನೆ ಮಾಡಿದ ಮೊದಲ ಪುರುಷ ಷಟ್ಲರ್ ಎನ್ನುವ ದಾಖಲೆ ಬರೆದರು.

Lakshya Sen s Historic Entry into Men s Badminton Semis at Olympics

ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ನಂತರ ಒಲಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಸಿಂಗಲ್ಸ್ ಸೆಮಿಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಪುರುಷ ಶಟ್ಲರ್ ಹಾಗೂ ಒಟ್ಟಾರೆ ಮೂರನೇ ಭಾರತೋಯ ಷಟ್ಲರ್ ಎನ್ನುವ ಹೆಗ್ಗಳಿಕೆಗೆ ಲಕ್ಷ್ಯ ಸೇನ್ ಪಾತ್ರರಾಗಿದ್ದಾರೆ.

ಲಕ್ಷ್ಯ ಸೇನ್‌ಗೂ ಮುನ್ನ ಕಿಡಂಬಿ ಶ್ರೀಕಾಂತ್ (2016) ಮತ್ತು ಪರುಪಳ್ಳಿ ಕಶ್ಯಪ್ (2012) ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದೇ ಈವರೆಗಿನ ಉತ್ತಮ ಸಾಧನೆಯಾಗಿತ್ತು. ಆದರೆ ಪ್ಯಾರಿಸ್‌ ಒಲಿಂಪಿಕ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಲಕ್ಷ್ಯಸೇನ್ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿಸಿದ್ದಾರೆ.

ಲಕ್ಷ್ಯ ಸೇನ್ ಚೈನೀಸ್ ತೈಪೆಯ ಟಿಯೆನ್-ಚೆನ್ ವಿರುದ್ಧ 19-21, 21-15, 21-12 ರಿಂದ ಸೋಲಿಸಿದರು. 22 ವರ್ಷದ ಲಕ್ಷ್ಯ ಸೇನ್, ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್‌ನ ಎರಡನೇ ಶ್ರೇಯಾಂಕದ ವಿಕ್ಟರ್ ಅಕ್ಸೆಲ್ಸೆನ್ ಅಥವಾ ಸಿಂಗಾಪುರದ ಸಿಂಗಾಪುರದ ಲೋಹ್ ಕೀನ್ ಯೂ ಅವರೊಂದಿಗೆ ಸೆಣೆಸಲಿದ್ದಾರೆ. ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸಿದರೆ ಭಾರತಕ್ಕೆ ಮತ್ತೊಂದು ಪದಕ ಸಿಗುವುದು ಖಚಿತವಾಗುತ್ತದೆ.

ಸೈನಾ ನೆಹ್ವಾಲ್ (2012 ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು), ಪಿವಿ ಸಿಂಧು (ರಿಯೋ 2016 ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು) ಗೆದ್ದಿರುವ ಷಟ್ಲರ್ ಗಳಾಗಿದ್ದಾರೆ.

ಭಾರತದ ಏಕೈಕ ಭರವಸೆ

ಈಗಾಗಲೇ ಪಿವಿ ಸಿಂಧು ಮತ್ತು ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸೋತು ನಿರ್ಗಮಿಸಿದ್ದು, ಲಕ್ಷ್ಯ ಸೇನ್ ಮಾತ್ರ ಭಾರತದ ಭರವಸೆಯಾಗಿದ್ದಾರೆ. ಅದೂ ಅಲ್ಲದೆ ಸೆಮಿಫೈನಲ್ ಪ್ರವೇಶಿಸಿದ ಮೊದಲ ಪುರುಷ ಷಟ್ಲರ್ ಆಗಿರುವ ಕಾರಣ, ಏನಾದರೂ ಪದಕ ಗೆದ್ದರೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಪುರುಷ ಎನ್ನುವ ಸಾಧನೆ ಅವರದ್ದಾಗಲಿದೆ.

2012ರ ಲಂಡನ್ ಒಲಿಂಪಿಕ್ಸ್‌ ಬಳಿಕ ನಡೆದ ಒಲಿಂಪಿಕ್ಸ್ ಪಂದ್ಯಾವಳಿಗಳಲ್ಲಿ ಭಾರತ ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆದ್ದುಕೊಂಡೇ ಬಂದಿದೆ. ಈ ಲಕ್ಷ್ಯ ಸೇನ್ ಮಾತ್ರ ಕಣದಲ್ಲಿ ಉಳಿದಿದ್ದು ಪದಕ ಗೆಲ್ಲಲಿ ಎಂದು ಕೋಟ್ಯಂತರ ಭಾರತೀಯರು ಹಾರೈಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+