RCB: 20 ಕೋಟಿ ರೂಪಾಯಿಗೆ ಆರ್‌ಸಿಬಿ ಪಾಲಾದ ಕನ್ನಡಿಗ ಕೆಎಲ್ ರಾಹುಲ್!

ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಮೆಗಾ ಹರಾಜಿಗೆ ಇನ್ನೂ 14 ದಿನ ಬಾಕಿ ಇದೆ. 1500 ಕ್ಕೂ ಅಧಿಕ ಆಟಗಾರರು ಹರಾಜಿಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ಎಲ್ಲಾ 10 ಫ್ರಾಂಚೈಸಿಗಳು ಬಲಿಷ್ಠ ತಂಡವನ್ನು ಕಟ್ಟಲು ತಮ್ಮದೇ ಲೆಕ್ಕಾಚಾರ ಮಾಡಿಕೊಳ್ಳುತ್ತಿವೆ. ಕೆಎಲ್ ರಾಹುಲ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಈ ಬಾರಿ ಮೆಗಾ ಹರಾಜಿನ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಐಪಿಎಲ್ ಹರಾಜಿಗೆ ಮುನ್ನವೇ ಕನ್ನಡಿಗ ಕೆಎಲ್ ರಾಹುಲ್ ಬರೋಬ್ಬರಿ 20 ಕೋಟಿ ರೂಪಾಯಿಗೆ ಆರ್ ಸಿಬಿ ಪಾಲಾಗಿದ್ದಾರೆ! ಹೌದು, 20 ಕೋಟಿ ರೂಪಾಯಿ ಆದರೂ ಪರವಾಗಿಲ್ಲ ಕೆಎಲ್ ರಾಹುಲ್ ಆರ್ ಸಿಬಿಗೆ ಬರಲಿ ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಆರ್ ಸಿಬಿ ಆಯೋಜಿಸಿದ್ದ ಅಣಕು ಹರಾಜಿನಲ್ಲಿ ಕೆಎಲ್ ರಾಹುಲ್‌ರನ್ನು ಬರೋಬ್ಬರಿ 20 ಕೋಟಿ ರೂಪಾಯಿ ನೀಡಿ ಆರ್ ಸಿಬಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

kl rahul sold rcb mock ipl 2025 auction

ಅಭಿಮಾನಿಗಳಿಗೆ ಅವಕಾಶ

ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಭಿಮಾನಿಗಳನ್ನು ಒಳಗೊಂಡಂತೆ ಅಣಕು ಹರಾಜನ್ನು ಆರ್ ಸಿಬಿ ಆಯೋಜನೆ ಮಾಡುತ್ತಿದೆ. ಈಗಾಗಲೇ ಬೆಂಗಳೂರು, ಮೈಸೂರಿನಲ್ಲಿ ಅಣಕು ಹರಾಜು ಕಾರ್ಯಕ್ರಮ ಮುಕ್ತಾಯವಾಗಿದೆ. ಅಭಿಮಾನಿಗಳ ಜೊತೆ ಬೆರೆಯಲು, ಅಭಿಮಾನಿಗಳ ಮನಸ್ಥಿತಿಯನ್ನು ಅರಿಯಲು ಆರ್ ಸಿಬಿ ಫ್ರಾಂಚೈಸಿ ಇಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಿದೆ.

ಬೆಂಗಳೂರಿನಲ್ಲಿ ನಡೆದ ಅಣಕು ಹರಾಜಿನಲ್ಲಿ ಕೆಎಲ್ ರಾಹುಲ್ ಮತ್ತು ರಿಷಬ್‌ ಪಂತ್‌ಗೆ ಆರ್ ಸಿಬಿ ಅಭಿಮಾನಿಗಳು ತೀವ್ರ ಪೈಪೋಟಿ ನಡೆಸಿದರು. ಕರ್ನಾಟಕದ ಆಟಗಾರ, ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್‌ಗಾಗಿ ಭಾರಿ ಪೈಪೋಟಿ ನಡೆದರು ಅಂತಿಮವಾಗಿ ಆರ್ ಸಿಬಿ ಅವರನ್ನು 20 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತು.

ಇದು ಕೆಎಲ್ ರಾಹುಲ್ ಮೇಲೆ ಕನ್ನಡಿಗರು ಇಟ್ಟುಕೊಂಡಿರುವ ಅಭಿಮಾನಕ್ಕೆ ಸಾಕ್ಷಿಯಾಗಿದೆ. ಆರ್ ಸಿಬಿ ತಂಡದ ಮಾಜಿ ಆಟಗಾರ ಕೆಎಲ್ ರಾಹುಲ್, ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದರು, ಅದಾದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಮೂರು ವರ್ಷ ತಂಡವನ್ನು ಮುನ್ನಡೆಸಿದ ಬಳಿಕ ಈ ವರ್ಷ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. ಕೆಎಲ್ ರಾಹುಲ್ ಆರ್ ಸಿಬಿಗೆ ಬರಬೇಕು ಎನ್ನುವ ಕೂಗು ಜೋರಾಗಿದೆ.

ಮೆಗಾ ಹರಾಜಿಗೆ ಮುನ್ನ ಆರ್ ಸಿಬಿ ವಿರಾಟ್ ಕೊಹ್ಲಿ, ಯಶ್ ದಯಾಳ್, ರಜತ್ ಪಟಿದಾರ್ ಅವರನ್ನು ಮಾತ್ರ ಉಳಿಸಿಕೊಂಡಿದ್ದು ಉಳಿದ ಎಲ್ಲಾ ಆಟಗಾರರನ್ನು ಬಿಡುಗಡೆ ಮಾಡಿದೆ. 83 ಕೋಟಿ ರೂಪಾಯಿ ಪರ್ಸ್‌ನೊಂದಿಗೆ ಆರ್ ಸಿಬಿ ಹರಾಜಿಗೆ ಹೋಗಲಿದ್ದು, ಕೆಎಲ್ ರಾಹುಲ್, ರಿಷಬ್‌ ಪಂತ್‌ಗಾಗಿ ಪೈಪೋಟಿ ನಡೆಸುವ ಸಾಧ್ಯತೆ ಇದೆ.

ಆರ್ ಸಿಬಿ ನಾಯಕನ ಹುಡುಕಾಟದಲ್ಲಿದ್ದು, ಕೆಎಲ್ ರಾಹುಲ್‌ಗೆ ನಾಯಕತ್ವದ ಅನುಭವ ಕೂಡ ಇದೆ. ಹಲವು ಬಾರಿ ಕೆಎಲ್ ರಾಹುಲ್ ಕೂಡ ನನ್ನ ಮೆಚ್ಚಿನ ತಂಡ ಆರ್ ಸಿಬಿ ಎಂದು ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+